PHOTOS

ಅಂಗೈಲಿ ಮದರಂಗಿ.. ಬಾಳಲ್ಲಿ ಹೊಸ ಬೆಳಕು; ʼಲವ್‌ ಯೂʼ ಎನ್ನುತ್ತಾ ಎಂಗೇಜ್ಮೆಂಟ್‌ ಫೋಟೋ ಹಂಚಿಕೊಂಡ ಸಾರಾ! ಸಚಿನ್‌ ಪುತ್ರಿಯ ಪೋಸ್ಟ್‌ ಕಂಡು ಫ್ಯಾನ್ಸ್‌ ಫುಲ್‌ ಖುಷ್‌

Sara Tendulkar Photo: ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. 

Advertisement
1/6
ಸಾರಾ ತೆಂಡೂಲ್ಕರ್ ಫೋಟೋ
ಸಾರಾ ತೆಂಡೂಲ್ಕರ್ ಫೋಟೋ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. 

2/6
ಸಾರಾ ತೆಂಡೂಲ್ಕರ್ ಫೋಟೋ
ಸಾರಾ ತೆಂಡೂಲ್ಕರ್ ಫೋಟೋ

ಇವೆಲ್ಲದರ ಮಧ್ಯೆ ಅವರ ಹಳೆಯ ವೀಡಿಯೊ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಸಾರಾ ತೆಂಡೂಲ್ಕರ್ ತಮ್ಮ ಸ್ನೇಹಿತರೊಂದಿಗೆ ಕಾಣಿಸಿಕೊಂಡಿರುವುದಲ್ಲದೆ, ನಿಶ್ಚಿತಾರ್ಥವೊಂದರ ಫೋಟೋ ಕೂಡ ಹಂಚಿಕೊಂಡಿದ್ದಾರೆ. 

 

3/6
ಸಾರಾ ತೆಂಡೂಲ್ಕರ್ ಫೋಟೋ
ಸಾರಾ ತೆಂಡೂಲ್ಕರ್ ಫೋಟೋ

ಈ ಫೋಟೋಗಳನ್ನು ಕಂಡ ಅಭಿಮಾನಿಗಳು ಆಶ್ವರ್ಯಗೊಂಡಿದ್ದಾರೆ. ಸಾರಾ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಸಾಕಷ್ಟು ಹಳೆಯದು. ಕಳೆದ ಕೆಲ ವರ್ಷಗಳ ಹಿಂದೆ, ಅವರು ತಮ್ಮ ಸ್ನೇಹಿತೆ ಅಲಿಶಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಆದರೆ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಅಭಿಮಾನಿಗಳು ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 

 

4/6
ಸಾರಾ ತೆಂಡೂಲ್ಕರ್ ಫೋಟೋ
ಸಾರಾ ತೆಂಡೂಲ್ಕರ್ ಫೋಟೋ

ಮತ್ತೊಂದು ಫೋಟೋದಲ್ಲಿ ಸಾರಾ ತೆಂಡೂಲ್ಕರ್ ಕೈಗೆ ಮದರಂಗಿ ಇಡುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಸಚಿನ್‌ ತೆಂಡೂಲ್ಕರ್‌ ವರನ ಕೈ ಹಿಡಿದು ಕರೆ ತರುತ್ತಿರುವುದು ಕೂಡ ಕಾಣಿಸುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಸಾರಾ ಮದುವೆಯಾಗುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಸತ್ಯಾಂಶವೆಂದರೆ, ಇದು ತೆಂಡೂಲ್ಕರ್‌ ಕುಟುಂಬದ ಸಂಬಂಧಿಕರ ವಿವಾಹ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ತೆಗೆದ ಫೋಟೋ ಆಗಿದೆ. 

 

5/6
ಸಾರಾ ತೆಂಡೂಲ್ಕರ್ ಫೋಟೋ
ಸಾರಾ ತೆಂಡೂಲ್ಕರ್ ಫೋಟೋ

ಇನ್ನೊಂದು ಫೋಟೋದಲ್ಲಿ ಸಾರಾ ತೆಂಡೂಲ್ಕರ್ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ವೇಗವಾಗಿ ವೈರಲ್‌ ಆಗಿದೆ. ಆ ಫೋಟೋದಲ್ಲಿ, ಸಾರಾ ಐ ಲವ್ ಯೂ ಎಂದು ಬರೆದಿದ್ದಾರೆ. ಇದರ ಸತ್ಯಾಸತ್ಯತೆ ಏನೆಂದರೆ, ಈ ಫೋಟೋ ಸಾರಾ ಅವರ ಆತ್ಮೀಯ ಸ್ನೇಹಿತೆ ಅಲೈಶಾ ಅವರದ್ದು. ಸಾರಾ ತನ್ನ ಆತ್ಮೀಯ ಸ್ನೇಹಿತೆ ಅಲೈಶಾ ಮತ್ತು ಆಕೆಯ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಎಂಗೇಜ್‌ಮೆಂಟ್‌ನ ನಾಲ್ಕು ಫೋಟೋಗಳ ಕೊಲಾಜ್ ಮಾಡಿ, ಲವ್ ಯು ಎಂದು ಬರೆದಿದ್ದಾರೆ. 

 

6/6
ಸಾರಾ ತೆಂಡೂಲ್ಕರ್ ಫೋಟೋ
ಸಾರಾ ತೆಂಡೂಲ್ಕರ್ ಫೋಟೋ

ಇನ್ನು ಸಾರಾ ತೆಂಡೂಲ್ಕರ್ ಮತ್ತು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವಾರು ಫೋಟೋಗಳು ಕೂಡ ವೈರಲ್‌ ಆಗಿತ್ತು. ಆದರೆ ಈ ಬಳಿಕ ಅವರಿಬ್ಬರು ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ದೃಢವಾದ ಪುರಾವೆಗಳಿಲ್ಲ. 





Read More