PHOTOS

30ವರ್ಷಗಳ ಬಳಿಕ ಕಷ್ಟಕೊಡುವ ಶನಿಯಿಂದಲೇ ಈ ರಾಶಿಯವರಿಗೆ ಅಪಾರ ಸಿರಿ ಸಂಪತ್ತು, ಯಶಸ್ಸು, ಕೀರ್ತಿ, ರಾಜಯೋಗ

Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ದೇವರು, ಕರ್ಮಫಲದಾತ ಎನ್ನಲಾಗುತ್ತದೆ. ಆದರೂ, ಶನಿ ವ್ಯಕ್ತಿ ಮಾಡುವ ಒಳ್ಳೆಯ ಕೆಲಸಗಳಿಗೆ ರಾಜಯೋಗವನ್ನೂ ಸಹ ಕರುಣಿಸುತ್ತಾನೆ. 

Advertisement
1/6
ಶನಿ ಸ್ಥಾನ ಬದಲಾವಣೆ
ಶನಿ ಸ್ಥಾನ ಬದಲಾವಣೆ

30ವರ್ಷಗಳ ಬಳಿಕ ಇದೀಗ ಮೀನ ರಾಶಿಯಲ್ಲಿರುವ ಶನಿ ಮಹಾತ್ಮ ಏಪ್ರಿಲ್ 28ರಂದು ಉತ್ತರಭಾದ್ರಪದ ನಕ್ಷತ್ರಕ್ಕೆ ಕಾಲಿಟ್ಟಿದ್ದನು. ಜೂನ್ 07ರವರೆಗೂ ಅಲ್ಲಿಯೇ ಇರುವ ಶನಿ ದೇವ ಬಳಿಕ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಭಾಗಕ್ಕೆ ಸ್ಥಾನಪಲ್ಲಟ ಮಾಡಲಿದ್ದಾನೆ. 

2/6
ಶನಿ ಸ್ಥಾನಪಲ್ಲಟ
ಶನಿ ಸ್ಥಾನಪಲ್ಲಟ

ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಶನಿ ಪ್ರವೇಶವು ಮೂರು ರಾಶಿಯವರ ಬದುಕಿನಲ್ಲಿ ಕಷ್ಟಗಳೆಲ್ಲವನ್ನೂ ಕಳೆದು ಸುಖದ ಹಾದಿಯನ್ನು ತೋರಲಿದ್ದಾನೆ. ಕಂಡ ಕನಸೆಲ್ಲಾ ನನಸಾಗಿ ಜೀವನದಲ್ಲಿ ಸುಖ-ಸಂಪತ್ತು, ಕೀರ್ತಿ ಯಶಸ್ಸು ಲಭ್ಯವಾಗಲಿದೆ. ಆ ಅದೃಷ್ಟದ ರಾಶಿಗಳೆಂದರೆ... 

3/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ:  ಶನಿಯ ಸ್ಥಾನ ಬದಲಾವಣೆಯಿಂದಾಗಿ ನಿಮ್ಮ ಬದುಕಿನಲ್ಲಿ ಬಹುಕಾಲದಿಂದ ಸ್ಥಗಿತಗೊಂಡಿರುವ ಕೆಲಸ ಕಾರ್ಯಗಳಿಗೆ ಮತ್ತೆ ಜೀವ ಬರಲಿದೆ. ಹಣಕಾಸಿನ ಹರಿವು ಹೆಚ್ಚಾಗುವುದರಿಂದ ಸಾಲಭಾದೆಯಿಂದ ಪರಿಹಾರವನ್ನು ಪಡೆಯುವಿರಿ. ಸಂಪತ್ತು ಹೆಚ್ಚಾಗಲಿದೆ. 

4/6
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ:  ಶನಿ ಸ್ಥಾನಪಲ್ಲಟದಿಂದ ಈ ರಾಶಿಯವರ ವೈಯಕ್ತಿಕ ಮತ್ತು ವ್ಯ್ವಸ್ಥಾಪಕ ಜೀವನ ಉಜ್ವಲಗೊಳ್ಳಲಿದೆ. ಪ್ರೀತಿ ವ್ಯವಹಾರದಲ್ಲಿರುವವರಿಗೆ ಮನೆಯವರ ಬೆಂಬಲ ದೊರೆಯಲಿದೆ. ವಿದೇಶ ವ್ಯಾಪಾರ ವ್ಯವಹಾರಗಳಿಂದ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ಕೆಲಸದಲ್ಲಿ ಶ್ರಮವಹಿಸಿ ದುಡಿದರೆ ಕೀರ್ತಿ, ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. 

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:   ಶನಿ ಸ್ಥಾನ ಬದಲಾವಣೆಯು ಈ ರಾಶಿಯವರಿಗೆ ಎಲ್ಲಾ ವಿಚಾರಗಳಲ್ಲೂ ಎದುರಾಳಿಗಳ ವಿರುದ್ಧ ಜಯ ಸಾಧಿಸಲು ಸಹಾಯಕವಾಗಿದೆ. ಹಣಕಾಸಿನ ಹರಿವು ಹೆಚ್ಚಾಗುವುದರಿಂದ ಸಾಲಗಳಿಂದ ಮುಕ್ತಿ ಪಡೆಯುವಿರಿ. ಸೋಮಾರಿತನ ಬಿಟ್ಟು ಕೆಲಸ ಮಾಡಿದರೆ ಅಪಾರ ಸಿರಿ-ಸಂಪತ್ತು ನಿಮ್ಮನ್ನು ಹರಸಿ ಬರಲಿದೆ. 

6/6
ಶನಿ ನಕ್ಷತ್ರ ಬದಲಾವಣೆ
ಶನಿ ನಕ್ಷತ್ರ ಬದಲಾವಣೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More