PHOTOS

Shani Vakri 2024: ತಿಂಗಳಾಂತ್ಯದಲ್ಲಿ ಶನಿ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ತಪ್ಪಿದ್ದಲ್ಲ ಸಮಸ್ಯೆ

Shani Vakri 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕ್ರೂರ ಗ್ರಹ ಎಂದು ಕರೆಯಲ್ಪಡುವ ಶನಿ ಮಹಾತ್ಮನು ಜೂನ್ ತಿಂಗಳ ಕೊನೆಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. 

Advertisement
1/6
ಶನಿ ವಕ್ರಿ
 ಶನಿ ವಕ್ರಿ

ಸದ್ಯ ಕುಂಭ ರಾಶಿಯಲ್ಲಿ ಉಪಸ್ಥಿತನಿರುವ ಶನಿ ದೇವನು ಜೂನ್ 29, 2024ರಂದು ಹಿಮ್ಮುಖಚಲನೆ ಆರಂಭಿಸಲಿದ್ದಾನೆ. ನವೆಂಬರ್ 15, 2024 ರವರೆಗೆ ಇದೇ ಸ್ಥಿತಿಯಲ್ಲಿ ಇರುತ್ತಾನೆ. ನಾಲ್ಕು ರಾಶಿಯವರಿಗೆ ಶನಿ ವಕ್ರಿ ಚಲನೆಯು ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ... 

2/6
ಮೇಷ ರಾಶಿ
ಮೇಷ ರಾಶಿ

ಹಿಮ್ಮುಖ ನಡೆಯಲ್ಲಿರುವ ಶನಿಯು ಮೇಷ ರಾಶಿಯ ಜನರಿಗೆ ಕೆಲಸದಲ್ಲಿ ಅಡೆತಡೆಗಳನ್ನು ತರುವನು. ಜೊತೆಗೆ ಹಣಕಾಸಿನ ವಿಷಯದಲ್ಲಿ ಭಾರೀ ನಷ್ಟವನ್ನು ಎದುರಿಸಬೇಯಾಗಬಹುದು. ವೈವಾಹಿಕ ಜೀವನದಲ್ಲಿ ಕೋಪದ ಕೈಗೆ ಬುದ್ದಿ ನೀಡದಿದ್ದರೆ ಒಳಿತು. 

3/6
ವೃಷಭ ರಾಶಿ
ವೃಷಭ ರಾಶಿ

ವಕ್ರೀ ಶನಿಯು ವೃಷಭ ರಾಶಿಯವರಿಗೆ ಋಣಾತ್ಮಕ ಫಲಗಳನ್ನೇ ಹೆಚ್ಚು ನೀಡಲಿದ್ದಾನೆ. ಈ ಸಮಯದಲ್ಲಿ ಕಚೇರಿಯಲ್ಲಿ ಒತ್ತಡದ ವಾತಾವರಣ ಇರಬಹುದು. ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇದೆ. 

4/6
ಮಕರ ರಾಶಿ
ಮಕರ ರಾಶಿ

ಶನಿ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ದೊಡ್ಡ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು. ಬೇರೆಯವರೊಂದಿಗೆ ವಾದ ಹೆಚ್ಚಾಗಬಹುದು. ಕಾನೂನಾತ್ಮಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. 

5/6
ಕುಂಭ ರಾಶಿ
ಕುಂಭ ರಾಶಿ

ಶನಿಯ ಹಿಮ್ಮುಖ ಚಲನೆಯಿಂದ ಕುಂಭ ರಾಶಿಯ ಜನರಿಗೆ ದೈಹಿಕ ಮತ್ತು ಮಾನಸಿಕ ತೊಂದರೆಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ತೊಂದರೆ ಎದುರಾಗಬಹುದು.

6/6
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  





Read More