Shani Nakshatra Parivartane: ನ್ಯಾಯದ ದೇವರು ಶನಿ ಮಹಾತ್ಮ ಶೀಘ್ರದಲ್ಲೇ ತನ್ನ ನಕ್ಷತ್ರಪುಂಜವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಕೆಲವರ ಅದೃಷ್ಟವು ಖುಲಾಯಿಸಲಿದೆ.
ಇತ್ತೀಚೆಗಷ್ಟೇ ಮೀನ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿ ಮಹಾತ್ಮ ಇನ್ನೂ ಹತ್ತು ದಿನಗಳ ಬಳಿಕ ಏಪ್ರಿಲ್ 28, 2025ರಂದು ಉತ್ತರಾಭಾದ್ರಪದ ನಕ್ಷತ್ರಕ್ಕೆ ಪದಾರ್ಪಣೆ ಮಾಡಳಿದ್ದಾನೆ. ಇದರೊಂದಿಗೆ ಐದು ರಾಶಿಯವ್ರ ಅದೃಷ್ಟವೂ ಖುಲಾಯಿಸಲಿದೆ.
ಮೇಷ ರಾಶಿ: ಶನಿ ನಕ್ಷತ್ರ ಬದಲಾವಣೆಯೊಂದಿಗೆ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭಾರೀ ಲಾಭವಾಗಲಿದೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿದ್ದು ಬಂಪರ್ ಆದಾಯವನ್ನು ಗಳಿಸುವಿರಿ.
ಮಿಥುನ ರಾಶಿ: ಉತ್ತರಾಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರದಿಂದ ಕೆಲಸಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ಶಾನಿಟ್ ವಾತಾವರಣ ಇರುತ್ತದೆ.
ಸಿಂಹ ರಾಶಿ: ಶನಿ ಬಲದಿಂದ ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಹೊಸ ಜವಾಬ್ದಾರಿಗಳು ಹೇಗಲೇರಬಹುದು. ಅವಿವಾಹಿತರಿಗೆ ವಿವಾಹ ಯೋಗಗಳು ಕೂಡಿ ಬರಲಿವೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಮುಂದುವರೆದರೆ ಹೊಸ ವ್ಯವಹಾರದಿಂದ ಭಾರೀ ಸಂಪತ್ತು ಪ್ರಾಪ್ತಿ.
ಮಕರ ರಾಶಿ: ಉತ್ತರ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರದಿಂದ ಈ ರಾಶಿಯವರ ಬದುಕಿನಲ್ಲಿ ನಾನಾ ಆಯಾಮಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹ್ದು. ವೃತ್ತಿಯಲ್ಲಿ ಉನ್ನತ ಹುದ್ದೆ ಅಲಂಕರಿಸುವರು. ವ್ಯವಹಾರದಲ್ಲಿ ಹಠಾತ್ ಧನಲಾಭವನ್ನು ಪಡೆಯುವಿರಿ.
ಕುಂಭ ರಾಶಿ: ಶನಿ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗ ರಂಗದಲ್ಲಿ ಉನ್ನತ ಹುದ್ದೆ ಹರಸಿ ಬರಲಿದೆ. ಹಣಕಾಸಿನ ವಿಷಯದಲ್ಲೂ ಇದು ಅತ್ಯುತ್ತಮ ಸಮಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.