PHOTOS

ಶನಿ ಶುಕ್ರರ ಮಹಾಯುತಿಯಿಂದ ಈ ರಾಶಿಯವರಿಗೆ ಜಾಕ್‌ಪಾಟ್: ದುಡ್ಡಿಗಿಲ್ಲ ಕೊರತೆ, ರಾಜವೈಭೋಗದ ಜೀವನ

Shani Shukra Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಪ್ರೀತಿ, ಗೌರವ, ಐಷಾರಾಮಿಯ ಅಂಶ ಎಂದು ಪರಿಗಣಿಸಲಾಗಿದ್ದರೆ, ಶನಿಯನ್ನು ನ್ಯಾಯದ ದೇವರು, ನಾವು ಮಾಡುವ ಪಾಪ-ಪುಣ್ಯಗಳಿಗೆ ತಕ್ಕ ಫಲ ನೀಡುವವನು ಎಂದು ಬಣ್ಣಿಸಲಾಗುತ್ತದೆ. 

Advertisement
1/6
ಶನಿ ಶುಕ್ರ ಯುತಿ
ಶನಿ ಶುಕ್ರ ಯುತಿ

ಬರೋಬ್ಬರಿ 30ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಶನಿ ಮತ್ತು ಶುಕ್ರ  ಗ್ರಹಗಳ ಮಹಾ ಸಂಯೋಗ ರಚನೆಯಾಗಿದೆ. ಮೇ 31, 2025ರವರೆಗೂ ಇರುವ ಈ ಅದ್ಭುತ ಯುತಿಯಿಂದಾಗಿ ಕೆಲವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ. 

2/6
ಶನಿ ಶುಕ್ರ ಯುತಿ ಪ್ರಭಾವ
ಶನಿ ಶುಕ್ರ ಯುತಿ ಪ್ರಭಾವ

ಮೀನ ರಾಶಿಯಲ್ಲಿ  ಶನಿ ಶುಕ್ರ ಯುತಿಯಿಂದಾಗಿ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯ ಜನರಿಗೆ ಶುಕ್ರದೆಸೆಯ ಜೊತೆಗೆ ಶನಿ ಮಹಾದಶವೂ ಬಲ ನೀಡಲಿದೆ. ಇದರಿಂದಾಗಿ ಅಪಾರ ಸಂಪತ್ತಿನ ಹೊಳೆಯೇ ಹರಿಯಲಿದ್ದು, ರಾಜವೈಭೋಗದ ಜೀವನವನ್ನು ಆನಂದಿಸುವರು ಎನ್ನಲಾಗುತ್ತಿದೆ.

3/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ:  ಶನಿ ಶುಕ್ರರ ಮಹಾ ಸಂಯೋಗದ ಫಲವಾಗಿ ಈ ರಾಶಿಯವರಿಗೆ ದಿಢೀರ್ ಧನಲಾಭದ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ಯುಸಿನೆಸ್ ನಲೋಳಿರುವವರಿಗೆ ಬಂಪರ್ ಲಾಭವಾಗಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. 

4/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ:  ಶನಿ ಶುಕ್ರ ಸಂಯೋಗದಿಂದಾಗಿ ಈ ರಾಶಿಯ ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯ, ವ್ಯವಹಾರಸ್ಥರಿಗೆ ಜಾಕ್‌ಪಾಟ್ ಎಂತಲೇ ಹೇಳಲಾಗುತ್ತಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುವುದರಿಂದ ಹಣಕಾಸಿನ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುವಿರಿ. 

5/6
ಮೀನ ರಾಶಿ
ಮೀನ ರಾಶಿ

ಮೀನ ರಾಶಿ:  ಸ್ವ ರಾಶಿಯಲ್ಲೇ ನಿರ್ಮಾಣವಾಗಿರುವ  ಶನಿ ಶುಕ್ರ ಯುತಿಯಿಂದಾಗಿ ಈ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಪ್ರಯೋಜನಕಾರಿ ಆಗಿದೆ. ಧನಸಂಪತ್ತು ಹೆಚ್ಚಾಗುವುದರ ಜೊತೆಗೆ ದೀರ್ಘ ಸಮಯದಿಂದ ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ಸಹ ನಿವಾರಣೆಯಾಗಲಿವೆ. 

6/6
ಶನಿ ಶುಕ್ರ ಯುತಿ
ಶನಿ ಶುಕ್ರ ಯುತಿ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More