PHOTOS

ಶನಿ ಶುಕ್ರ ಯುತಿ: ಈ ರಾಶಿಯವರಿಗೆ ವೃತ್ತಿಯಲ್ಲಿ ಜಯ, ಸಂಪತ್ತು ಹೆಚ್ಚಳ, ಬಾಳೇ ಬಂಗಾರವಾಗುವ ಪರ್ವಕಾಲ

Shani Shukra Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆ (ಜೂನ್ 07) ಶನಿ ಶುಕ್ರರ ಯುತಿ ರೂಪುಗೊಳ್ಳಲಿದೆ. ಇದರಿಂದ ವಿಶೇಷ ಯೋಗ ನಿರ್ಮಾಣವಾಗಲಿದ್ದು ಕೆಲವರ ಅದೃಷ್ಟವೇ  ಬದಲಾಗಲಿದೆ. 

Advertisement
1/9
ಶುಕ್ರ ಶನಿಯಿಂದ ದ್ವಿದ್ವಾದಶ ಯೋಗ
ಶುಕ್ರ ಶನಿಯಿಂದ ದ್ವಿದ್ವಾದಶ ಯೋಗ

ಜೂನ್ 07, 2025ರ ಮುಂಜಾನೆ ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದವನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಶುಕ್ರ ಶನಿ ಪರಸ್ಪರ 30ಡಿಗ್ರಿಯಲ್ಲಿ ವಿಶೇಷ ಕೋನಿ ಯೋಗ ರಚಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ದ್ವಿದ್ವಾದಶ ಯೋಗ ಎನ್ನಲಾಗುತ್ತದೆ. 

2/9
ದ್ವಿದ್ವಾದಶ ಯೋಗ ಪ್ರಭಾವ
ದ್ವಿದ್ವಾದಶ ಯೋಗ ಪ್ರಭಾವ

ಶನಿವಾರದಂದು ಶುಕ್ರ ಶನಿ ಯುತಿಯಿಂದ ನಿರ್ಮಾಣವಾಗಲಿರುವ ದ್ವಿದ್ವಾದಶ ಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ಶುಕ್ರ ಭುಕ್ತಿಯೂ, ಇನ್ನೂ ಕೆಲ ರಾಶಿಯವರಿಗೆ ಶನಿ ಭುಕ್ತಿ ಏರ್ಪಡಲಿದ್ದು ಅವರ ಬದುಕು ಬಂಗಾರವಾಗುವ ಸಮಯ ಎನ್ನಲಾಗುತ್ತಿದೆ. 

3/9
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  ದ್ವಿದ್ವಾದಶ ಯೋಗವು ಈ ರಾಶಿಯವರಿಗೆ ವೃತ್ತಿಯಲ್ಲಿ ಉನ್ನತ ಸ್ಥಾನಮಾನವನ್ನು ನೀಡಲಿದೆ. ವ್ಯವಹಾರವನ್ನು ವಿಸ್ತರಿಸಲು ಸುವರ್ಣ ಸಮಯ. ಹೂಡಿಕೆಗಳಿಂದ ಭರ್ಜರಿ ಆದಾಯವನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. 

4/9
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ:  ದ್ವಿದ್ವಾದಶ ಯೋಗಾದ ರಚನೆಯಿಂದಾಗಿ ಈ ರಾಶಿಯವರ ಹಣಕಾಸಿನ ಸ್ಥಿತಿ ಬಲಗೊಳ್ಳುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ವೃತ್ತಿಯಲ್ಲಿ ಬಡ್ತಿ, ಸರ್ಕಾರಿ ನೌಕರಿಯಲ್ಲಿರುವವರಿಗೆ ಬಯಸಿದ ಸ್ಥಳಕ್ಕೆ ವರ್ಗಾವಣೆ ಸಂಭವವಿದೆ. ಸಂಬಂಧಗಳಲ್ಲಿ ಮೂಡಿರುವ ವಿವಾದಗಳನ್ನು ಬಗೆಹರಿಸುವಿರಿ. 

5/9
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕರ್ಕಾಟಕ ರಾಶಿ:  ದ್ವಿದ್ವಾದಶ ಯೋಗವು ಈ ರಾಶಿಯವರಲ್ಲಿ ಆತ್ಮವಿಶ್ವಾಸವನ್ನು ಬಲಿಷ್ಠಗೊಳಿಸುತ್ತದೆ. ಶುಕ್ರ ಭುಕ್ತಿಯಿಂದ ಉದ್ಯೋಗದಲ್ಲಿ ಸುವರ್ಣ ಸಮಯ. ಆರ್ಥಿಕ ಸ್ಥಿತಿ ಮೊದಲಿಗಿಂತ ಬಲಗೊಳ್ಳುತ್ತದೆ. ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ಇನ್ನೂ ಮದುವೆಯಾಗದವರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. 

6/9
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ:  ದ್ವಿದ್ವಾದಶ ಯೋಗದಿಂದಾಗಿ ಸ್ವಂತ ವ್ಯವಹಾರ ಮಾಡುವವರಿಗೆ ಇದು ಪರ್ವಕಾಲ. ನಿಮ್ಮ ವ್ಯವಹಾರ ವಿಸ್ತರಣೆಗೆ ಸಂಬಂಧಿಸಿದ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲಿವೆ. ವೃತ್ತಿಯಲ್ಲಿ ಬಡ್ತಿ, ವೇತನ ಹಚ್ಚಳವನ್ನು ನಿರೀಕ್ಷಿಸಬಹುದು. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ. 

7/9
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:  ಶುಕ್ರ ಶನಿ ಸಂಯೋಗದಿಂದ ಈ ರಾಶಿಯವರಿಗೆ ಶುಕ್ರ ದೆಸೆಯೊಂದಿಗೆ ಶನಿ ಭುಕ್ತಿ ಆರಂಭವಾಗಲಿದೆ. ಇದರ ಫಲವಾಗಿ ವೃತ್ತಿಯಲ್ಲಿ ಭಾರೀ ಯಶಸ್ಸು, ಹೊಸ ಜವಾಬ್ದಾರಿಗಳು ಹೆಗಲೇರುವ ಸಮಯ. ಮನೆಯಲ್ಲಿ ಧನ ಸಂಪತ್ತು ವೃದ್ದಿಯಾಗಲಿದ್ದು ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಸಮಯ. 

8/9
ಧನು ರಾಶಿ
ಧನು ರಾಶಿ

ಧನು ರಾಶಿ:  ದ್ವಿದ್ವಾದಶ ಯೋಗದ ನಿರ್ಮಾಣದಿಂದ ಈ ರಾಶಿಯವರಲ್ಲಿ ತಾಳ್ಮೆ ಹೆಚ್ಚಾಗಲಿದೆ. ಇದರಿಂದ ವೃತ್ತಿ ವ್ಯವಹಾರದಲ್ಲಿ ಸ್ಪಷ್ಟತೆ ಗೋಚರವಾಗಲಿದ್ದು ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭಾರೀ ಲಾಭವಾಗಲಿದೆ. 

9/9
ಮಕರ ರಾಶಿ
ಮಕರ ರಾಶಿ

ಮಕರ ರಾಶಿ:  ಶುಕ್ರ ಶನಿ ಸಂಯೋಗದಿಂದಾಗಿ ಈ ರಾಶಿಯವರಿಗೆ ವ್ಯವಹಾರದಲ್ಲಿ ಸ್ಥಿರತೆ ಕಂಡು ಬರಲಿದೆ. ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಿರಿ. ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯಲಿದ್ದು ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ಕಾಣಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More