Saturn Star Change: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕ್ರೂರ ಗ್ರಹ, ನ್ಯಾಯದ ದೇವರು ಎನ್ನಲಾಗುತ್ತದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಏಪ್ರಿಲ್ 28 ರಂದು ಉತ್ತರಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದ ಶನಿ ಮಹಾತ್ಮನು ಇದೀಗ ಜೂನ್ 07ರಂದು ಅದೇ ನಕ್ಷತ್ರದ ಎರಡನೇ ಪಾದಕ್ಕೆ ಕಾಲಿಡಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಸುವರ್ಣ ಸಮಯ ಆರಂಭವಾಗಲಿದೆ. ಆ ಅದೃಷ್ಟದ ರಾಶಿಗಳೆಂದರೆ..
ಕರ್ಕಾಟಕ ರಾಶಿ: ಉತ್ತರಾಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಶನಿ ಪ್ರವೇಶವು ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನೀಡಲಿದ್ದಾನೆ. ಉದ್ಯೋಗಸ್ಥರಿಗೆ ಕೀರ್ತಿ, ಮನ್ನಣೆ ದೊರೆಯಲಿದೆ. ಮಾಡುವ ಕೆಲಸದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಹೊಸ ಮನೆ, ವಾಹನ ಖರೀದಿಸುವ ಕನಸು ನನಸಾಗಲಿದೆ.
ಕನ್ಯಾ ರಾಶಿ: ಶನಿ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಜಾಕ್‌ಪಾಟ್ ಎಂತಲೇ ಹೇಳಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವ ಸಮಯ. ಬಾಕಿ ಇರುವ ಕೆಲಸಗಳು ವೇಗ ಪಡೆಯಲಿದ್ದು ಸಂಪತ್ತಿನ ಸುರಿಮಳೆಯೇ ಆಗಲಿದೆ.
ತುಲಾ ರಾಶಿ: ಶನಿ ಗೋಚಾರ ಫಲವಾಗಿ ಈ ರಾಶಿಯವರು ಉದ್ಯೋಗ ರಂಗದಲ್ಲಿ ತಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಹೊಸ ಯೋಜನೆಗಳು ಯಶಸ್ವಿಯಾಗಲಿವೆ. ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ತಾಳ್ಮೆಯಿಂದ ಇದ್ದರೆ ಯಶಸ್ಸು.
ಮಕರ ರಾಶಿ: ಶನಿ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳನ್ನು ನೀಡಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದ್ದು ವ್ಯವಹಾರದಲ್ಲಿ ಯಶಸ್ಸು ಗಳಿಸುವಿರಿ.
ಕುಂಭ ರಾಶಿ: ಉತ್ತರಾಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪ್ರವೇಶಿಸಲಿರುವ ಶನಿ ಮಹಾತ್ಮನು ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ ನೀಡಿ ಸುಖದ ಸುಪ್ಪತ್ತಿಗೆಯಲ್ಲೇ ಇಡುವನು. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. ವೃತ್ತಿಪರರಿಗೆ ಬಡ್ತಿ ಸಂಭವವಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.