Shani Margi: ನವಗ್ರಹಗಳಲ್ಲಿ ನ್ಯಾಯದ ದೇವರು ಎಂದು ಪರಿಗಣಿಸಲಾಗಿರುವ ಶನಿ ದೇವ ಕೇವಲ ಕೆಟ್ಟ ಫಲಗಳನ್ನು ಮಾತ್ರ ನೀಡುವುದಿಲ್ಲ. ಪ್ರತಿಯೊಬ್ಬರಿಗೂ ಅವರ ಒಳ್ಳೆಯ ಫಲಗಳಿಗೆ ತಕ್ಕಂತೆ ಶುಭ ಫಲಗಳನ್ನು ಕೂಡ ನೀಡುತ್ತಾನೆ.
30 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿ ದೇವ ಜುಲೈ 13, 2025ರಂದು ಮಾರ್ಗಿಯಾಗಲಿದ್ದಾನೆ. ಶನಿಯ ನೇರ ಸಂಚಾರ ನವೆಂಬರ್ 28ರವರೆಗೂ ಇರಲಿದ್ದು ಈ ಸಂದರ್ಭದಲ್ಲಿ ಕರ್ಮಫಲದಾತನ ದಯೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.
ಶನಿ ಮಾರ್ಗಿ ಆಗುವುದರೊಂದಿಗೆ ಐದು ತಿಂಗಳುಗಳ ಕಾಲ ಮೂರು ರಾಶಿಯವರ ಬದುಕಿನಲ್ಲಿ ಶನಿ ಮಹಾದಶ ಆರಂಭವಾಗಲಿದ್ದು ಕಷ್ಟಕೊಡುವಾತನಿಂದಲೇ ಜೀವ್ನದಲ್ಲಿ ಸಂತೋಷ ಸಮೃದ್ಧಿ ಹೆಚ್ಚಾಗಲಿದೆ. ಶನಿ ಬಲದಿಂದಾಗಿ ಅವರ ಬದುಕಿನಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ.
ವೃಷಭ ರಾಶಿ: ಶನಿಯ ನೇರ ಸಂಚಾರದಿಂದ ಈ ರಾಶಿಯವರ ಆದಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣಬಹುದು. ಶನಿ ದಶೆಯಿಂದ ಧನಸಂಪತ್ತು ಅಪಾರ ಪ್ರಮಾಣದಲ್ಲಿ ಹೆಚ್ಚಾಗುವುದರಿಂದ ಸಾಲಬಾಧೆಯಿಂದ ಪರಿಹಾರವನ್ನು ಪಡೆಯುವಿರಿ. ಮನೆಯಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗುತ್ತವೆ. ವ್ಯವಹಾರವನ್ನು ಸಹ ವಿಸ್ತರಿಸಬಹುದು.
ಕರ್ಕಾಟಕ ರಾಶಿ: ಮಾರ್ಗಿ ಶನಿಯು ಈ ರಾಶಿಯವರ ಮೇಲೆ ಹೇರಳವಾದ ಆಶೀರ್ವಾದವನ್ನ್ ಧಾರೆ ಎರೆಯಲಿದ್ದಾನೆ. ಮದುವೆಯಾಗದವರಿಗೆ ವಿವಾಹ ಯೋಗ ಪ್ರಾಪ್ತಿಯಾಗಲಿದೆ. ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗಬಹುದು. ವ್ಯವಹಾರದಲ್ಲಿ ಬಂಪರ್ ಆದಾಯವನ್ನು ಗಳಿಸಬಹುದು.
ಮಕರ ರಾಶಿ: ಶನಿ ನೇರ ಚಲನೆಯು ಈ ರಾಶಿಯವರಿಗೆ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಯಶಸ್ಸನ್ನು ನೀಡಲಿದೆ. ಸೋದರ ವರ್ಗದಿಂದ ಭಾರೀ ಪ್ರಯೋಜನವನ್ನು ಪಡೆಯಲಿದ್ದೀರಿ. ವೃತ್ತಿಪರರಿಗೆ ಬಡ್ತಿ ಸಂಭವವಿದೆ. ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ಪ್ರಾಪ್ತಿಯಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.