Samsaptak RajYoga: ಜುಲೈ ತಿಂಗಳಲ್ಲಿ ಶನಿ ಬುಧರ ಸಂಯೋಗವಾಗಲಿದೆ. ಇದರಿಂದ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಜುಲೈ ತಿಂಗಳಿನಲ್ಲಿ ಶನಿ ಬುಧರ ಹಿಮ್ಮುಖ ಚಲನೆ ಆರಂಭವಾಗಲಿದೆ. ಅಷ್ಟೇ ಅಲ್ಲದೆ, ಶನಿ ಬುಧರ ಅಪರೂಪದ ಸಂಯೋಗವೂ ಸೃಷ್ಟಿಯಾಗಲಿದ್ದು ಇದರಿಂದ ವಿಶೇಷ ಸಂಸಪ್ತಕ ರಾಜಯೋಗ ನಿರ್ಮಾಣವಾಗಲಿದೆ.
ಬರೋಬ್ಬರಿ 30 ವರ್ಷಗಳ ಬಳಿಕ ನಿರ್ಮಾಣವಾಗುತ್ತಿರುವ ವಿಶೇಷ ಸಂಸಪ್ತಕ ರಾಜಯೋಗದ ಫಲವಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ, ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ ಎನ್ನಲಾಗುತ್ತಿದೆ.
ಸಂಸಪ್ತಕ ರಾಜಯೋಗವು ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರ ಸಂಬಂಧಿತ ಬೇರೆಡೆ ಸಿಲುಕಿರುವ ಹಣವನ್ನು ಕೈ ಸೇರಿಸಲಿದೆ. ಹೂಡಿಕೆಗಳಿಂದ ಭರ್ಜರಿ ಲಾಭವಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವ ಸಕಾಲ ಇದಾಗಿದೆ.
ಸಂಸಪ್ತಕ ರಾಜಯೋಗದಿಂದ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಅನಗತ್ಯ ಖರ್ಚುಗಳು ಕಡಿಮೆಯಾಗಲಿದ್ದು ಆರ್ಥಿಕ ಸ್ಥಿರತೆಯನ್ನು ಕಾಣುವಿರಿ. ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ, ಪದೋನ್ನತಿ ದೊರೆಯಲಿದೆ.
ಸಂಸಪ್ತಕ ರಾಜಯೋಗ ಪ್ರಭಾವದಿಂದ ಈ ರಾಶಿಯವರಿಗೆ ಕೌಟುಂಬಿಕ ಸುಖ ಹೆಚ್ಚಾಗಲಿದೆ. ಪ್ರೀತಿ ಸಂಬಂಧಗಳು ಗಟ್ಟಿಗೊಳ್ಳಲಿವೆ. ಮಕ್ಕಳ ಕಡೆಯಿಂದ ಸಂತಸದ ಸುದ್ದಿಯನ್ನು ಸ್ವೀಕರಿಸುವಿರಿ. ಬಹುಕಾಲದಿಂದ ಬಾಕಿ ಉಳಿಸಿದಿರುವ ಕೆಲಸಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವಿರಿ.
ಸಂಸಪ್ತಕ ರಾಜಯೋಗ ಪರಿಣಾಮವಾಗಿ ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳು ಪ್ರಾಪ್ತಿಯಾಗಲಿವೆ. ಕೆಲಸದಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಯೋಗವಿದೆ. ವ್ಯವಹಾರದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದ್ದು ಸಕಲೈಶ್ವರ್ಯ ಪ್ರಾಪ್ತಿಯಾಗುವ ಬಂಗಾರದಂತ ಸಮಯ ಇದಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.