Guru Uday: ಬರೋಬ್ಬರಿ 12 ವರ್ಷಗಳ ಬಳಿಕ ಗುರು ಅಧಿಪತ್ಯದ ಮಿಥುನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಗುರು ಉದಯಿಸಲಿದ್ದಾನೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 12ವರ್ಷಗಳ ಬಳಿಕ ಬುಧ ಅಧಿಪತ್ಯದ ಮಿಥುನ ರಾಶಿಯಲ್ಲಿ ಗುರು ಉದಯಿಸಲಿದ್ದಾನೆ. ಜುಲೈನಲ್ಲಿ ಗುರು ಉದಯದಿಂದಾಗಿ ಅತ್ಯಂತ ಪ್ರಬಲ ಯೋಗಗಳಲ್ಲಿ ಒಂದಾದ ಧನಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ.
2025ರ ಜುಲೈ ತಿಂಗಳಿನಲ್ಲಿ ರೂಪುಗೊಳ್ಳಲಿರುವ ಧನಲಕ್ಷ್ಮಿ ರಾಜಯೋಗವು ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದೆ. ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು ಕುಬೇರ ಸಂಪತ್ತನ್ನೇ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಸಿಂಹ ರಾಶಿ: ಗುರು ಉದಯ, ಧನಲಕ್ಷ್ಮಿ ರಾಜಯೋಗದಿಂದಾಗಿ ಈ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ. ವೃತ್ತಿ ಬದುಕಿನಲ್ಲಿ ಪ್ರಗತಿಯ ಜೊತೆಗೆ ಅದೃಷ್ಟ ಹೆಗಲೇರಲಿದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೂಡಿಕೆಯಿಂದ ಭರ್ಜರಿ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.
ಕನ್ಯಾ ರಾಶಿ: ಧನಲಕ್ಷ್ಮಿ ರಾಜಯೋಗದ ಪ್ರಭಾವದಿಂದಾಗಿ ಈ ರಾಶಿಯವರಿಗೆ ಕೆಲಸ-ವ್ಯವಹಾರಗಳಲ್ಲಿ ಹಿಂದೆಂದೂ ಕಂಡೆರೆಯದಂತ ಕೀರ್ತಿ, ಯಶಸ್ಸು ಲಭಿಸಲಿದೆ. ನಿರುದ್ಯೋಗಿಗಳಿಗೆ ಕನಸಿನ ಉದ್ಯೋಗ, ಕೈ ತುಂಬಾ ವೇತನದಿಂದಾಗಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಪಿತೃ ಸಮಾನರೊಂದಿಗೆ ಗೌರವ ಹೆಚ್ಚಾಗಲಿದೆ.
ತುಲಾ ರಾಶಿ: ಧನಲಕ್ಷ್ಮಿ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಲಿವೆ. ಕೆಲಸ ಕಾರ್ಯಗಳಲ್ಲಿ ಆತ್ಮವಿಶ್ವಾಸದಿಂದಾಗಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ ವೃದ್ಧಿಯಾಗಲಿದೆ. ವಿದೇಶ ವ್ಯವಹಾರದಿಂದ ಅಪಾರ ಸಂಪತ್ತಿನ ಒಡೆಯರಾಗುವಿರಿ.
ಮೀನ ರಾಶಿ: ಧನಲಕ್ಷ್ಮಿ ರಾಜಯೋಗ ರಚನೆಯಿಂದಾಗಿ ಈ ರಾಶಿಯವರಿಗೆ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣವಾಗಲಿವೆ. ಸ್ವಂತ ಮನೆ, ವಾಹನ ಖರೀದಿಸಬಹುದು. ಹಿಂದೆ ಮಾಡಿದ ಹೂಡಿಕೆಗಳಿಂದ ಅಪಾರ ಧನಸಂಪತ್ತು ಹರಿದುಬರಲಿದೆ. ಮಾಡುವ ಪ್ರತಿ ಕೆಲಸದಲ್ಲೂ ಅದೃಷ್ಟ ಹೆಗಲೇರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.