PHOTOS

ಈ ಬಾರಿ ಬಿಗ್‌ ಬಾಸ್‌ ಹೋಸ್ಟ್‌ ಮಾಡಲು ಸುದೀಪ್‌ ಪಡೆಯುತ್ತಿರುವ ಸಂಭಾವನೆ ಇದು... ಕಿಚ್ಚನೇ ಬಿಚ್ಚಿಟ್ಟ ಸತ್ಯ!

Sudeep Bigg Boss Remuneration : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಹೋಸ್ಟ್‌ ಕಿಚ್ಚ ಸುದೀಪ್‌ ಎಂಬುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಸುದೀಪ್‌ ಬಿಗ್‌ ಬಾಸ್‌ ನಿಂದ ಪಡೆಯುವ ಸಂಭಾವನೆ ವಿಚಾರವೂ ರಿವೀಲ್‌ ಆಗಿದೆ.

Advertisement
1/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದು ಬಿಗ್‌ ಬಾಸ್.‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಆರಂಭಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಇತ್ತೀಚೆಗೆ ಕಲರ್ಸ್‌ ಕನ್ನಡ ವಾಹಿನಿ ಮತ್ತು ಸುದೀಪ್‌ ಸುದ್ದಿಗೋಷ್ಠಿ ನಡೆಸಿದ್ದರು. 

2/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಇದರಲ್ಲಿ ಈ ಬಾರಿಯ ಹೋಸ್ಟ್‌ ಕಿಚ್ಚ ಸುದೀಪ್‌ ಎಂಬುದನ್ನು ವಾಹಿನಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಬಿಗ್‌ ಬಾಸ್‌‌ ಕನ್ನಡ ಸೀಸನ್ 12 ರ ಹೋಸ್ಟ್‌ ಸುದೀಪ್‌ ಎಂಬ ಮಾಹಿತಿ ರಿವೀಲ್‌ ಆದ ಬೆನ್ನಲ್ಲೇ ಸಂಭಾವನೆಯ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. 

3/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಸುದೀಪ್ ಬಿಲ್ಲ ರಂಗ ಭಾಷಾ ಚಿತ್ರದ ನಡುವೆ ಬಿಗ್‌ ಬಾಸ್‌ ಹೋಸ್ಟ್‌ ಮಾಡಲಿದ್ದಾರೆ. ಬಿಗ್‌ ಬಾಸ್‌ ನಿರೂಪಕರಾಗಿ 2015 ರಲ್ಲಿ ಕಲರ್ಸ್ ಕನ್ನಡ ವಾಹಿನಿ ಜೊತೆ  ಒಪ್ಪಂದಕ್ಕೆ ಸಹಿ ಹಾಕಿದರು. 

4/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಮೊದಲು ಇದು 5 ವರ್ಷಗಳ ಒಪ್ಪಂದವಾಗಿತ್ತು, ಆ ಸಂದರ್ಭದಲ್ಲಿ 20 ಕೋಟಿ ರೂಪಾಯಿ ಸಂಭಾವೆನೆ ಪಡೆದಿದ್ದರು ಎನ್ನಲಾಗಿದೆ. ಈ ಸಂಭಾವನೆ ಬಳಿಕ ಗಣನೀಯವಾಗಿ ಏರಿಕೆಯಾಗಿದೆ. 

5/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಕಿಚ್ಚ ಸುದೀಪ್ ಅವರು ಬಿಗ್ ಬಾಸ್‌ ಹೋಸ್ಟ್‌ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಲಾಗಿದೆ. ಸುದೀಪ್ ಅವರು ಇದಕ್ಕೆ ಉತ್ತರ ನೀಡಿದ್ದಾರೆ.

6/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಇದು ವೈಯಕ್ತಿಕ. ಈ ಪ್ರಶ್ನೆ ಉತ್ತರಿಸಲು ಸಾಧ್ಯವಿಲ್ಲ. ಮನೆ ಬಾಡಿಗೆಗೆ ಹೋದರೆ 10 ಪರ್ಸೆಂಟ್ ಇನ್​ಕ್ರಿಮೆಂಟ್ ಇರುತ್ತೆ. ನಾನು ಲೀಸ್‌ಗೂ ಅಲ್ಲ, ರೆಂಟ್‌ಗೂ ಅಲ್ಲ. ನಮ್ಮದೊಂದು ಇರುತ್ತೆ ತಾನೇ ಎಂದರು ಸುದೀಪ್ ತಮಾಷೆಯಾಗಿ ಉತ್ತರಿಸಿದ್ದಾರೆ.

7/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಟ್ವೀಟ್ ಮಾಡುವಾಗ ಸಂಭಾವನೆ ವಿಚಾರ ತಲೆಯಲ್ಲಿ ಇರಲಿಲ್ಲ. ಟ್ವೀಟ್ ಮಾಡದೆಯೂ ಸಂಭಾವನೆ ಹೆಚ್ಚು ಬೇಕು ಎಂದು ಕೇಳಬಹುದಲ್ವೇ. ಅದು ಪಬ್ಲಿಕ್‌ನಲ್ಲಿ ಮಾತನಾಡುವ ವಿಚಾರ ಅಲ್ಲ ಎಂದು ಸುದೀಪ್‌ ಹೇಳಿದ್ದಾರೆ. 

8/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಹಣ ಅನ್ನೋದು ಕೊನೆಯಲ್ಲಿ ಬರೋದು. ನಾನು ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬ ಸರಿಯಾದ ಲೆಕ್ಕ ಯಾರಿಗೂ ಸಿಗೋದಿಲ್ಲ. ಪ್ರತಿ ಚಿತ್ರವೂ ಭಿನ್ನ, ಪ್ರತಿ ಚಿತ್ರದ ಬಜೆಟ್ ಕೂಡ ಬೇರೆ ಬೇರೆ ಎಂದು ಸುದೀಪ್ ತಿಳಿಸಿದ್ದಾರೆ.

9/9
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಮೊದಲ ಸೀಸನ್‌ನಲ್ಲಿ ಪಡೆದಿದ್ದ ಸಂಭಾವನೆಯನ್ನು ಈಗಲೂ ಪಡೆಯೋಕೆ ಆಗುತ್ತಾ? ಹೆಚ್ಚು ಬೇಕಾಗುತ್ತದೆ. ಪ್ರತಿ ಶೋಗೂ ಅದರದ್ದೇ ಆದ ಬಜೆಟ್ ಇರುತ್ತದೆ. ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು ಎಂದು ಸುದೀಪ್‌ ವಿವರಿಸಿದ್ದಾರೆ.





Read More