Guru Surya Yuti: ಶೀಘ್ರದಲ್ಲೇ ಗ್ರಹಗಳ ಅಧಿಪತಿ ಸೂರ್ಯ ಹಾಗೂ ದೇವಗುರು ಬೃಹಸ್ಪತಿ ಒಂದೇ ರಾಶಿಯಲ್ಲಿ ಸಂಧಿಸಲಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ 13, 2025ರಂದು ವೃಷಭ ರಾಶಿಯಲ್ಲಿ ಗುರು ಮತ್ತು ಸೂರ್ಯನ ಸಂಯೋಗ ರಚನೆಯಾಗಲಿದೆ. ಮಿತ್ರ ಗ್ರಹಗಳ ರಚನೆಯಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದ್ದು ವೃತ್ತಿಯಲ್ಲಿ ಬಡ್ತಿ, ವೇತನ ಹೆಚ್ಚಳ, ಆಸ್ತಿ ವ್ಯವಹಾರಗಳಲ್ಲಿ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಮೇಷ ರಾಶಿ: ಗುರು ಸೂರ್ಯರ ಸಂಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲಿದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ಬಗೆಹರಿಯಲಿವೆ. ಸರ್ಕಾರಿ ಸಂಬಂಧಿತ ಕೆಲಸಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು.
ವೃಷಭ ರಾಶಿ: ಗುರು ಸೂರ್ಯರ ಯುತಿಯಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ ದೊರೆಯುತ್ತದೆ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಬಹುದಿನಗಳ ನಿಮ್ಮ ಕನಸು ನನಸಾಗಲಿದೆ. ನ್ಯಾಯಾಲಯ ಪ್ರಕರಣಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ.
ಕರ್ಕಾಟಕ ರಾಶಿ: ಗುರು ಸೂರ್ಯರು ಒಟ್ಟಿಗೆ ಸೇರುವುದರೊಂದಿಗೆ ಈ ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಆದಾಯದಲ್ಲಿ ದಿಢೀರ್ ಏರಿಕೆಯು ನಿಮ್ಮನ್ನು ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲಿದೆ. ಸ್ವಂತ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರಲಿದೆ.
ಸಿಂಹ ರಾಶಿ: ಗುರುವಿನೊಂದಿಗೆ ಸೂರ್ಯ ಮೈತ್ರಿಯಿಂದ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಹಿಂದೆಂದೂ ಕಂಡಿರದಷ್ಟು ಪ್ರಗತಿ ಕಂಡು ಬರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಜೊತೆಗೆ ವಿದೇಶ ಪ್ರಯಾಣ ಅವಕಾಶವೂ ದೊರೆಯಲಿದೆ.
ವೃಶ್ಚಿಕ ರಾಶಿ: ಗುರು ಸೂರ್ಯರ ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ ಎಂತಲೇ ಹೇಳಬಹುದು. ವೃತ್ತಿಪರರಿಗೆ ಬಡ್ತಿ, ಸಂಬಳ, ಭತ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಲಿದೆ. ಮಕ್ಕಳಿಂದ ಸಂತೋಷದ ಸುದ್ದಿಯನ್ನು ಕೇಳುವಿರಿ. ಹೊಸ ಮನೆ ಖರೀದಿ ಯೋಗವಿದೆ. ಆದಾಯದ ಮೂಲಗಳು ಕೂಡ ಹೆಚ್ಚಾಗಲಿದೆ.
ಮಕರ ರಾಶಿ: ಗುರು ಸೂರ್ಯರ ಮೈತ್ರಿಯಿಂದ ಈ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಸಮಾರಂಭಗಳು ನಡೆಯುವ ಸಂಭವವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವಿದೇಶ ವ್ಯವಹಾರಗಳಿಂದ ಲಾಭ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.