PHOTOS

ಮುಂದಿನ 1 ತಿಂಗಳು ಈ 5 ರಾಶಿಯವರಿಗೆ ಭರ್ಜರಿ ಯಶಸ್ಸು; ಲಕ್ಷ್ಮಿದೇವಿ ಆಶೀರ್ವಾದ ಸಿಗುವ ಯೋಗ!!

ಗ್ರಹಗಳ ರಾಜ ಸೂರ್ಯನು ಶೀಘ್ರದಲ್ಲೇ ವೃಷಭ ರಾಶಿಯಿಂದ ಹೊರಬಂದು ಮಿಥುನ ರಾಶಿಯನ್ನ ಪ್ರವೇಶಿಸುತ್ತಾನೆ. ಸೂರ್ಯನ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರಿಗೆ ವಿಶೇಷ ಲಾಭ ತಂದುಕೊಡಲಿದೆ. ಈ 5 ರಾಶಿಯ ಜನರಿಗೆ ಬಡ್ತಿಯ ಸಾಧ್ಯತೆಗಳಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...

Advertisement
1/6
ಮಿಥುನ ರಾಶಿ
ಮಿಥುನ ರಾಶಿ

ಸೂರ್ಯನ ರಾಶಿ ಬದಲಾವಣೆಯು ಮಿಥುನ ರಾಶಿಯವರಿಗೆ ವಿಶೇಷವಾಗಿದೆ. ಆಧ್ಯಾತ್ಮಿಕ ವಿಷಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವ್ಯವಹಾರವು ಭರ್ಜರಿಯಾಗಿ ಬೆಳೆಯಲಿದೆ. ಹೊಸ ಜನರೊಂದಿಗಿನ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಲಿವೆ. ಹೆಚ್ಚಿದ ಆತ್ಮವಿಶ್ವಾಸದಿಂದ ಕೆಲಸವು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತದೆ. ನೀವು ಹೆಚ್ಚು ಸಾಮಾಜಿಕವಾಗಿ ಸಕ್ರಿಯರಾಗಿರುತ್ತೀರಿ. ಅನೇಕ ಹೊಸ ಗಳಿಕೆಯ ಅವಕಾಶಗಳು ಸಹ ಬರಬಹುದು. ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ.

2/6
ಸಿಂಹ ರಾಶಿ
ಸಿಂಹ ರಾಶಿ

​ಈ ಸಮಯ ಸಿಂಹ ರಾಶಿಯವರಿಗೆ ಹಲವು ಅವಕಾಶಗಳನ್ನ ತರಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಸೂರ್ಯ ಗೋಚರವು ನಿಮಗೆ ಆರ್ಥಿಕ ಲಾಭದ ಸಾಧ್ಯತೆಗಳನ್ನ ಸೃಷ್ಟಿಸುತ್ತಿದೆ. ನಿಮ್ಮ ಗುರಿ ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯೋಗದಲ್ಲಿರುವವರಿಗೆ ಹೊಸ ಉದ್ಯೋಗಕ್ಕೆ ಉತ್ತಮ ಅವಕಾಶಗಳು ಸಿಗಬಹುದು. ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ವ್ಯವಹಾರ ಪ್ರಾರಂಭಿಸಲು ಸಮಯ ಶುಭವಾಗಿರುತ್ತದೆ. ಸಿಂಹ ರಾಶಿಯವರ ಪ್ರೇಮ ಜೀವನದಲ್ಲಿ ಮಾಧುರ್ಯ ಇರುತ್ತದೆ.

3/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಅದೃಷ್ಟವು ಬೆಳಗುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ನಿಮ್ಮ ಪರವಿರುತ್ತದೆ. ವ್ಯವಹಾರದಲ್ಲಿ ಆರ್ಥಿಕ ಲಾಭ ಕಂಡುಬರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಅಪಾರ ಸುಖ-ಸಂಪತ್ತು ಹೆಚ್ಚಾಗುತ್ತದೆ. ನಿಮಗೆ ಹೊಸ ಉದ್ಯೋಗದ ಕೊಡುಗೆ ಸಿಗುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.

4/6
ಕನ್ಯಾ ರಾಶಿ
ಕನ್ಯಾ ರಾಶಿ

ಸೂರ್ಯನ ರಾಶಿಯಲ್ಲಿನ ಬದಲಾವಣೆಯು ಕನ್ಯಾ ರಾಶಿಯ ಜನರಿಗೆ ಅದೃಷ್ಟ ತರಬಹುದು. ಏಕೆಂದರೆ ಸೂರ್ಯದೇವ ನಿಮ್ಮ ರಾಶಿಯಿಂದ ಹತ್ತನೇ ಸ್ಥಾನದಲ್ಲಿ ಸಾಗುತ್ತಾನೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕೆಲಸ-ವ್ಯವಹಾರವು ಹೊಳೆಯಬಹುದು. ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಅದೇ ರೀತಿ ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡಬಹುದು. ನೀವು ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿ ಪಡೆಯಬಹುದು. ನೀವು ಈ ಹೊಸ ಜವಾಬ್ದಾರಿಗಳನ್ನ ಆತ್ಮವಿಶ್ವಾಸದಿಂದ ಪೂರೈಸುವಿರಿ. ಉದ್ಯಮಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯಬಹುದು. ಅದೇ ರೀತಿ ತಂದೆಯೊಂದಿಗಿನ ಸಂಬಂಧವು ಬಲವಾಗಿರುತ್ತದೆ.

5/6
ಧನು ರಾಶಿ
ಧನು ರಾಶಿ

ಧನು ರಾಶಿಯವರಿಗೆ ಅಪೂರ್ಣ ಕೆಲಸಗಳಲ್ಲಿ ಯಶಸ್ಸು ಸಿಗುವ ನಿರೀಕ್ಷೆಯಿದೆ. ಹಣಕಾಸಿನ ಲಾಭದ ಬಲವಾದ ಸಾಧ್ಯತೆಗಳಿವೆ. ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಪೋಷಕರು ಅಥವಾ ಹಿರಿಯರಿಂದ ಬೆಂಬಲ ಸಿಗುತ್ತದೆ. ಸೂರ್ಯನ ಪ್ರಭಾವದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಕಚೇರಿಯಲ್ಲಿ ಜನರಿಂದ ಬೆಂಬಲ ಸಿಗುತ್ತದೆ. ಭವಿಷ್ಯದ ಬಗ್ಗೆ ನಿರ್ಧಾರಗಳನ್ನ ತೆಗೆದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

6/6
ಮಿಥುನ ರಾಶಿಗೆ ಸೂರ್ಯನ ಪ್ರವೇಶ
ಮಿಥುನ ರಾಶಿಗೆ ಸೂರ್ಯನ ಪ್ರವೇಶ

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)





Read More