PHOTOS

ಈ ರಾಶಿಯವರ ಜಾತಕದಲ್ಲಿ ಗಜಲಕ್ಷ್ಮಿ ರಾಜಯೋಗ ! ನಾಲ್ಕು ದಿಕ್ಕುಗಳಿಂದಲೂ ಸಿಗುವುದು ಅದೃಷ್ಟದ ಸಾಥ್ ! ಹೋದಲೆಲ್ಲಾ ಜಯನಿಮ್ಮದೇ !

Gajalakshmi Rajayoga Effect : ಗುರು ಮತ್ತು ಶುಕ್ರ ಈ ಎರಡೂ ಗ್ರಹಗಳ ಆಶೀರ್ವಾದ ಇರುವಾಗ ವ್ಯಕ್ತಿಯು ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸನ್ನು ಕಾಣುತ್ತಾನೆ. 
 

Advertisement
1/6
ಗಜಲಕ್ಷ್ಮಿ ರಾಜಯೋಗ
ಗಜಲಕ್ಷ್ಮಿ ರಾಜಯೋಗ

ಗಜಲಕ್ಷ್ಮಿ ರಾಜಯೋಗ ಹೊಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಆರ್ಥಿಕ ಲಾಭವನ್ನು ಹೊಂದುತ್ತಾನೆ. ಇದಕ್ಕೆ ಕಾರಣವೆಂದರೆ ಗುರು ಅದೃಷ್ಟ, ಮದುವೆ ಮತ್ತು ಮಂಗಳ ಕಾರ್ಯಗಳಿಗೆ ಗುರು ಗ್ರಹ ಕಾರಣವಾಗಿದೆ.ಶುಕ್ರ ಗ್ರಹವು ವೈಭವ, ಸೌಂದರ್ಯ ಮತ್ತು ಐಶ್ವರ್ಯವನ್ನು ಕರುಣಿಸುವಾತ. ಈ ಎರಡೂ ಗ್ರಹಗಳ ಆಶೀರ್ವಾದ ಇರುವಾಗ ವ್ಯಕ್ತಿಯು ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸನ್ನು ಕಾಣುತ್ತಾನೆ.   

2/6
ಮೇಷ ರಾಶಿ
ಮೇಷ ರಾಶಿ

ಗಜಲಕ್ಷ್ಮಿ ಯೋಗದಿಂದಾಗಿ ಮೇಷ ರಾಶಿಯವರು ಏನೇ ಕೆಲಸ ಮಾಡಿದರೂ ಜಯ ಅವರದ್ದೇ. ಜೀವನದ ಪ್ರತಿ ಹಂತದಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ.ಸೋಲುತ್ತೇವೆ ಎನ್ನುವ ಭಯ ಇಲ್ಲದೆ ಮುನ್ನಡೆಯಬಹುದು. ಹಣಕಾಸಿನ ವಿಚಾರದಲ್ಲಿ ನೀವೇ ಭಾಗ್ಯವಂತರು.

3/6
ಕಟಕ ರಾಶಿ
ಕಟಕ ರಾಶಿ

ಕರ್ಕ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಲಾಭದ ಹೊಸ ಮೂಲಗಳು ತೆರೆದುಕೊಳ್ಳುವುದು. ಉದ್ಯೋಗವನ್ನು ಹುಡುಕುತ್ತಿರುವ ಹುಡುಕಾಟ ಕೊನೆಯಾಗುವುದು.  ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು.    

4/6
ಸಿಂಹ ರಾಶಿ
ಸಿಂಹ ರಾಶಿ

ಇಲ್ಲಿಯವರೆಗೆ ನೀವು ಕಾಣದ ಕಷ್ಟ-ನಷ್ಟ ಪರದಾಟ ಎಲ್ಲವೂ ಕೊನೆಯಾಗುವುದು. ಇನ್ನೇನಿದ್ದರೂ ನಿಮ್ಮದು ಗೆಲುವಿನ ಹಾದಿ. ನೀವು ಏನೇ ಕೆಲಸ ಮಾಡುವುದಾದರೂ ಅದೃಷ್ಟ ನಿಮ್ಮ ಜೊತೆಗಿದ್ದು ಕಾಪಾಡುತ್ತದೆ. ಕಷ್ಟಪಟ್ಟು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದಿಡಬೇಡಿ.

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿಯವರ ಜೀವನದ ಹೊಸ ಅಧ್ಯಾಯ ಆರಂಭವಾಗುವುದು.ಹೆಜ್ಜೆ ಇಟ್ಟಲೆಲ್ಲಾ ವಿಜಯ ಮಾಲೆಯೇ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. ಬಡ್ತಿಯೊಂದಿಗೆ ಆರ್ಥಿಕ ಲಾಭವೂ ಆಗಬಹುದು. ಒಂಟಿಯಾಗಿರುವವರು ಜೋಡಿಯಾಗುವ ಕಾಲ ಇದು.    

6/6
ಧನು ರಾಶಿ
ಧನು ರಾಶಿ

ಗಜಲಕ್ಷ್ಮಿ ಯೋಗದಿಂದ ಭಾರೀ ಲಾಭವಾಗುವುದು. ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಆದರೆ ನೀವು ಹಿಂದೆ ಸರಿಯಬಾರದು. ಎಚ್ಚರಿಕೆಯಿಂದ ಯೋಚಿಸಿದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳಿ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನೀವು ಸೋಲುವುದಿಲ್ಲ. ಯಶಸ್ಸು ನಿಮ್ಮ ಮುಂದಿದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)





Read More