Shani Gochar 2025 Effect: ಶನಿ ಸಂಚಾರದಿಂದ ರಾಶಿಯವರಿಗೆ ಅದೃಷ್ಟ ಕೂಡಿಬರಬಹುದು.
ಶನಿ ಗೋಚಾರ 2025: ಶನಿಯು 2025 ರ ಮಾರ್ಚ್ 29 ರಂದು ಕುಂಭ ರಾಶಿ ಬಿಟ್ಟು ಮೀನ ರಾಶಿಯಲ್ಲಿ ಸಾಗಿದ್ದಾನೆ. ಶನಿ ಗ್ರಹವು ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಿಸುತ್ತದೆ. ಮತ್ತೆ ಅದೇ ರಾಶಿಗೆ ಮರಳಲು ಸುಮಾರು 30 ವರ್ಷಗಳು ಬೇಕಾಗುತ್ತದೆ. 2027 ರ ವರೆಗೆ ಶನಿ ಮೀನ ರಾಶಿಯಲ್ಲೇ ಇರಲಿದ್ದು, ಈ ರಾಶಿಗಳ ಕೈ ಹಿಡಿದು ಕಾಪಾಡಲಿದ್ದಾನೆ.
ತುಲಾ ರಾಶಿ - ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುವಿರಿ. ಆದಾಯದ ಮೂಲಗಳು ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುವುದು.
ಸಿಂಹ ರಾಶಿ - ಅದೃಷ್ಟದ ದಿನಗಳು ಆರಂಭವಾಗಲಿವೆ. ಎಲ್ಲಾ ಆಸೆಗಳು ಈಡೇರುತ್ತವೆ. ಲಾಭಕ್ಕಾಗಿ ಉತ್ತಮ ಅವಕಾಶಗಳು ಅಭಿವೃದ್ಧಿಗೊಳ್ಳುತ್ತವೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ.
ಕುಂಭ ರಾಶಿ - ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹಣದ ಲಾಭ ಪಡೆಯುವಿರಿ. ಕೌಟುಂಬಿಕ ಸೌಖ್ಯ ಪ್ರಾಪ್ತಿ ಆಗುವುದು. ಬಯಸಿದ ಉದ್ಯೋಗ ಪಡೆಯಬಹುದು. ಸಂಪತ್ತು ದುಪ್ಪಟ್ಟಾಗಲಿದೆ.
ಕರ್ಕಾಟಕ ರಾಶಿ - ಸಂಪತ್ತು ಹೆಚ್ಚಾಗುತ್ತದೆ. ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯುವ ಸಮಯ. ಅದೃಷ್ಟ ಸದಾ ನಿಮ್ಮ ಜೊತೆಗಿರಲಿದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)