Shukra Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಶುಕ್ರನನ್ನು ಅತ್ಯಂತ ಶುಭ ಗ್ರಹ, ಸುಖ-ಸಂಪತ್ತು, ಅಷ್ಟೈಶ್ವರ್ಯವನ್ನು ಕರುಣಿಸುವ ಗ್ರಹ ಎಂದು ಬಣ್ಣಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಸುಖ, ಸಂಪತ್ತು, ಪ್ರೀತಿ, ಐಷಾರಾಮಿ ಬದುಕನ್ನು ಕರುಣಿಸುವ ಅಂಶ ಎನ್ನಲಾಗುವ ಶುಕ್ರ ಇತ್ತೀಚೆಗಷ್ಟೇ 16 ಮೇ 2025ರಂದು ಉತ್ತರಾಭಾದ್ರಪದ ನಕ್ಷತ್ರ ತೊರೆದು ರೇವತಿ ನಕ್ಷತ್ರಕ್ಕೆ ಪದಾರ್ಪಣೆ ಮಾಡಿದ್ದಾನೆ.
ಶುಕ್ರ ನಕ್ಷತ್ರ ಪರಿವರ್ತನೆಯಿಂದಾಗಿ ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದ್ದು ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಆದಾಯದ ಜೊತೆಗೆ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಪ್ರೀತಿಪಾತ್ರರೊಂದಿಗೆ ಐಷಾರಾಮಿ ಬದುಕನ್ನು ಅನುಭವಿಸುವರು ಎನ್ನಲಾಗುತ್ತಿದೆ.
ವೃಷಭ ರಾಶಿ: ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ, ಸ್ವಂತ ವ್ಯವಹಾರ ಮಾಡುವವರಿಗೆ ಅತ್ಯುತ್ತಮವಾದ ಸಮಯ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಸರಿಹೋಗಲಿವೆ.
ಕನ್ಯಾ ರಾಶಿ: ರೇವತಿ ನಕ್ಷತ್ರದಲ್ಲಿರುವ ಶುಕ್ರನು ಈ ರಾಶಿಯವರಿಗೆ ಹಠಾತ್ ಧನಲಾಭವನ್ನು ಕರುಣಿಸಲಿದ್ದಾನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭಾರೀ ಆದಾಯವನ್ನು ಗಳಿಸುವಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಹೂಡಿಕೆಯಿಂದ ಉತ್ತಮ ಆದಾಯ ಪ್ರಾಪ್ತಿಯಾಗಲಿದೆ.
ಮೀನ ರಾಶಿ: ಶುಕ್ರ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರು ಹಣಕಾಸಿಗೆ ಸಂಬಂಧಿಸಿದಂತೆ ಆಕರ್ಷಕ ಪ್ರಸ್ತಾಪಗಳನ್ನು ಪಡೆಯಬಹುದು. ವೈಯಕ್ತಿಕ ಬದುಕಿನಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ಹೊಸ ಕೆಲಸಗಳನ್ನು ಮಾಡಲು ತುಂಬಾ ಪ್ರಾಶಸ್ತ್ಯವಾದ ದಿನ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.