Shukra Vakri: ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ಹೊಸ ತನದ ಅನುಭವವಾಗುತ್ತದೆ. ಅಲ್ಲದೆ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಸಹ ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, 2025ರ ಮಾರ್ಚ್ 02ರಂದು ಶುಕ್ರನು ತನ್ನ ಉಚ್ಚ ರಾಶಿಯಾದ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.
ಐಷಾರಾಮಿ ಜೀವನಕಾರಕನ ಹಿಮ್ಮುಖ ಚಲನೆಯೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಈ ವೇಳೆ ದಿಢೀರ್ ಧನಲಾಭ, ವೃತ್ತಿ ವ್ಯವಹಾರದಲ್ಲಿ ಭಾರೀ ಅದೃಷ್ಟ ಇವರ ಕೈ ಹಿಡಿಯಲಿದೆ.
ಧನು ರಾಶಿ: ಶುಕ್ರನ ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಅತ್ಯಂತ ಮಂಗಳಕರ ಎಂದು ಸಾಭೀತು ಪಡಿಸಲಿದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಕೈ ತುಂಬಾ ಹಣ ಸಂಪಾದಿಸುವಿರಿ. ಭೂಮಿ, ವಾಹನ ಖರೀದಿ ಯೋಗವೂ ಇದೆ. ವಿದೇಶ ವ್ಯವಹಾರದಲ್ಲಿ ಹೊಸ ಎತ್ತರಕ್ಕೆ ಬೆಳೆಯುವಿರಿ.
ಕುಂಭ ರಾಶಿ: ಶುಕ್ರ ದೆಸೆಯು ಈ ರಾಶಿಯವರ ಬದುಕಿನಲ್ಲಿ ಹಠಾತ್ ಧನ ಲಾಭವನ್ನು ನೀಡಲಿದೆ. ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಬಂಪರ್ ಎಂತಲೇ ಹೇಳಬಹುದು. ಬಹುಕಾಲದಿಂದ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ.
ಮೀನ ರಾಶಿ: ಶುಕ್ರ ಸಂಚಾರವು ಈ ರಾಶಿಯವರ ಬದುಕಿನಲ್ಲಿ ಎಲ್ಲಾ ಆಯಾಮಗಳಲ್ಲೂ ಶುಭ ಫಲಗಳನ್ನು ನೀಡಲಿದೆ. ಶುಕ್ರ ಮಹಾದಶ ಪ್ರಭಾವದಿಂದಾಗಿ ಸಂಪತ್ತು ವೃದ್ಧಿಯಾಗಲಿದೆ. ಪ್ರೀತಿ ಸಂಬಂಧಗಳಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಆಸ್ತಿ, ಮನೆ ಖರೀದಿಸುವ ಭಾಗ್ಯವೂ ಇದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.