PHOTOS

ಮೌನಿ ಅಮಾವಾಸ್ಯೆ ದಿನವೇ ಮೀನ ರಾಶಿಗೆ ಶುಕ್ರನ ಪ್ರವೇಶ: ಈ ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು, ಮಣ್ಣೂ ಹೊನ್ನಾಗುವ ಸಮಯ

Mauni Amavasya 2025: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಘಮಾಸದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇಂದು ಪುಣ್ಯ ನದಿಯಲ್ಲಿ ಸ್ನಾನ ಮಾಡುವುದರಿಂದ ಜೀವನದ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆಯಿದೆ. 

Advertisement
1/6
ಮೌನಿ ಅಮಾವಾಸ್ಯೆ 2025
ಮೌನಿ ಅಮಾವಾಸ್ಯೆ 2025

ಇಂದು (ಜನವರಿ 29, 2025) ಮಾಘ ಮಾಸದ ಅಮಾವಾಸ್ಯೆ ಆಗಿದೆ. ಇದನ್ನು ದೇಶಾದ್ಯಂತ ಮೌನಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಇಂದು ಸುಮಾರು 10 ಕೋಟಿಗೂ ಹೆಚ್ಚು ಭಕ್ತರು ಗಂಗಾ ಸ್ನಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

2/6
ಮೌನಿ ಅಮಾವಾಸ್ಯೆಯಂದೇ ಶುಕ್ರ ಸಂಚಾರ
 ಮೌನಿ ಅಮಾವಾಸ್ಯೆಯಂದೇ ಶುಕ್ರ ಸಂಚಾರ

2025ರಲ್ಲಿ ಮೌನಿ ಅಮಾವಾಸ್ಯೆಯ ದಿನವೇ ಸಂಪತ್ತು, ವೈಭವಕಾರಕನಾದ ಶುಕ್ರ ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. 

3/6
ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ
ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

ಮೀನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರನ ಪ್ರವೇಶದೊಂದಿಗೆ ಕೆಲವರ ಜೀವನದಲ್ಲಿ ಶುಕ್ರ ದೆಸೆಯಿಂದ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ಮಣ್ಣೂ ಕೂಡ ಬಂಗಾರವಾಗುವ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  ಮೌನಿ ಅಮಾವಾಸ್ಯೆಯಂದು ಶುಕ್ರನ ಸಂಚಾರ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳನ್ನು ತರಲಿದೆ. ಆದಾಯ ಹೆಚ್ಚಾಗಲಿದ್ದು, ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಕೂಡ ಸುವರ್ಣ ಸಮಯ. 

5/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ:  ಮೌನಿ ಅಮಾವಾಸ್ಯೆಯಂದು ಮೀನ ರಾಶಿಗೆ ಪ್ರವೇಶಿಸಲಿರುವ ಶುಕ್ರ ಈ ರಾಶಿಯವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ನೀಡಲಿದ್ದಾನೆ. ಉದ್ಯೋಗದಲ್ಲಿ ದೊಡ್ಡ ಪ್ರಸ್ತಾಪವನ್ನು ಪಡೆಯುವ ಸಂಭಾವವೈದೇ. ಸಮಾಜದಲ್ಲಿ ಕೀರ್ತಿ, ಮನ್ನಣೆ ಪಡೆಯುವಿರಿ. 

6/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:  ಮಾಘ ಅಮಾವಾಸ್ಯೆಯಲ್ಲಿ ಶುಕ್ರನ ಸಂಚಾರ ಈ ರಾಶಿಯವರಿಗೆ ಮನೆಯಲ್ಲಿ ಸಂತಸವನ್ನು ಹೆಚ್ಚಿಸಲಿದೆ. ವ್ಯವಹಾರಸ್ಥರಿಗೆ ಅಪಾರ ಲಾಭದ ಅವಕಾಶಗಳಿದ್ದು ಸಂಪತ್ತು ವೃದ್ಧಿಯಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More