PHOTOS

ಬೆಂಗಳೂರಿನ ಈ ಪ್ರತಿಷ್ಠಿತ ಶಾಲೆಯಲ್ಲಿ ಕೊಹ್ಲಿ ಮಗಳಿಗೆ ಅಡ್ಮಿಶನ್‌! ಲಂಡನ್‌ನಲ್ಲಿ ನೆಲೆಸಿದ್ರೂ ಕರ್ನಾಟಕದಲ್ಲೇ ವಾಮಿಕಾಗೆ ಶಿಕ್ಷಣ! ಯಾವ ಶಾಲೆ? ಅಲ್ಲಿನ ಫೀಜ್‌ ಎಷ್ಟು?

ರಾVamika Kohli school: ವಿಟ್‌ ಕೊಹ್ಲಿ ಮಗಳು ವಾಮಿಕಾ ಕೊಹ್ಲಿಗೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಮುಂಗಡ ದಾಖಲಾತಿ ಮಾಡಿಸಲಾಗಿದೆ ಎಂದು ವರದಿಯೊಂದು ಹೇಳುತ್ತಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

 

Advertisement
1/6
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಭಾರತ ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ತನ್ನ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಅದರಲ್ಲೂ ಶಾಲೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ. ಇದೀಗ ಪುತ್ರಿ ವಾಮಿಕಾ ಸ್ಕೂಲ್‌ ವಿಚಾರ ಮುನ್ನೆಲೆಗೆ ಬಂದಿದ್ದು ಎರಡು ಆಯ್ಕೆಗಳನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

2/6
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಕುಟುಂಬಕ್ಕೆ ಅಮಿತ ಆದ್ಯತೆ ನೀಡುತ್ತಾರೆ. ಮಕ್ಕಳ ಜೀವನಶೈಲಿ ಜನಸಾಮಾನ್ಯರಂತೆ ಇರಬೇಕು ಎಂಬ ದೃಷ್ಟಿಯಿಂದ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ದಾರೆ. ವಾಮಿಕಾ ಮತ್ತು ಅಕಾಯ್‌ ಕೊಹ್ಲಿ ಖಾಸಗಿ ಜೀವನಕ್ಕೆ ಧಕ್ಕೆಯಾಗಬಾರದೆಂದು ಇಂತಹ ನಿರ್ಧಾರಗಳನ್ನು ವಿರುಷ್ಕಾ ತೆಗೆದುಕೊಂಡಿದ್ದಾರೆ ಎಂದು ಕೆಲ ಮೂಲಗಳು ತಿಳಿಸುತ್ತಿವೆ.

 

3/6
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಅಂದಹಾಗೆ ಕೊಹ್ಲಿಗೆ ಪುತ್ರಿ ವಾಮಿಕಾ ಎಂದರೆ ತುಂಬಾ ಪ್ರೀತಿ. ಆಕೆಯ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಒಲವು ತೋರಿಸುತ್ತಿರುವ ವಿರುಷ್ಕಾ ಜೋಡಿ ಆಕೆಯನ್ನು ಮುಂಬೈನ ಧೀರೂಭಾಯ್ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಅಡ್ಮಿಶನ್‌ ಮಾಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಇದು ಮುಂಗಡ ದಾಖಲಾತಿ ಆಗಿದ್ದು ನಿಖರ ಮಾಹಿತಿ ಇಲ್ಲ.

 

4/6
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಇನ್ನೊಂದು ಮೂಲಗಳ ಪ್ರಕಾರ, ಲಂಡನ್‌ನಲ್ಲಿನ ಮನೆಯಲ್ಲೇ ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯಕ್ಕೆ ಸಮೀಪ ಎಂಬುದು ತಿಳಿದುಬಂದಿಲ್ಲ.

 

5/6
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಇದಲ್ಲದೆ, ಬೆಂಗಳೂರಿಗೆ ವಿಶೇಷ ನಂಟು ಹೊಂದಿರುವ ವಿರುಷ್ಕಾ ಜೋಡಿ ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮುಂಗಡ ಅಡ್ಮಿಶನ್‌ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಅನುಷ್ಕಾ ಕೂಡ ಬೆಂಗಳೂರಿನಲ್ಲೇ ತಮ್ಮ ಬಾಲ್ಯ ಕಳೆದಿದ್ದು, ಈ ಕಾರಣದಿಂದ ಮಗಳಿಗೂ ಇಲ್ಲೇ ಶಿಕ್ಷಣ ಕೊಡುಸುತ್ತಾರಾ ಎಂಬುದು ಸದ್ಯದ ಕುತೂಹಲ.

 

6/6
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ವಾಮಿಕಾಗೆ ಸದ್ಯ ೪ ವರ್ಷ. ನರ್ಸರಿ ಬಳಿಕ ಕಿಂಡರ್‌ ಗಾರ್ಡನ್‌ಗೆ ಅಡ್ಮಿಶನ್‌ ಪಡೆಯುವ ಸಂದರ್ಭ. ಸದ್ಯದ ಮಾಹಿತಿ ಪ್ರಕಾರ ವಿರುಷ್ಕಾ ಧೀರೂಭಾಯ್ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಾಮಿಕಾಗೆ ಮುಂಗಡ ಅಡ್ಮಿಶನ್‌ ಮಾಡಿಸಿದ್ದಾರೆ. ಇಲ್ಲಿನ ಸ್ಕೂಲ್‌ ಫೀಜ್‌ ಎಲ್‌ಕೆಜಿಗೆ ರೂ.1.7 ಲಕ್ಷ.





Read More