Virat Kohli Avneet Kaur: ವಿರಾಟ್ ಕೊಹ್ಲಿ ಇತ್ತೀಚೆಗೆ ನಟಿ ಹಾಗೂ ಸೋಷಿಯಲ್ ಮಿಡಿಯಾ ಇನ್‌ಫ್ಲುಎನ್ಸರ್ ಆಗಿರುವ ಅವನೀತ್ ಕೌರ್ ಅವರ ಫೋಟೋವನ್ನು ಲೈಕ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದರು.
Virat Kohli Avneet Kaur: ಭಾರತದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ, ಒಂದಲ್ಲ ಒಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಬಗ್ಗೆ ಅನೇಕ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಡುತ್ತವೆ. ಹೋಗೊರುವಾಗ ವಿರಾಟ್ ಮಾಡಿದ ಅದೊಂದು ಕೆಲಸ ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಕೆಲವು ದಿನಗಳ ಹಿಂದೆ ವಿರಾಟ್ ಒಬ್ಬ ನಟಿಯ ಫೋಟೋವನ್ನು ಲೈಕ್ ಮಾಡಿ ಸಂಚಲನ ಸೃಷ್ಟಿಸಿದ್ದರು. ಈ ವಿಷಯ ಎಷ್ಟರ ಮಟ್ಟಿಗೆ ಬೆಳೆದು ಹೋಯಿತೆಂದರೆ, ವಿರಾಟ್ ಆ ಫೋಟೋವನ್ನು ತಪ್ಪಾಗಿ ಲೈಕ್ ಮಾಡಿದ್ದಾರೆ ಎಂದು ಹೇಳಿಕೆ ನೀಡಬೇಕಾಯಿತು.
ಮೇ 1 ರಂದು ವಿರಾಟ್ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಈ ಅವ್ಯವಸ್ಥೆಯ ನಡುವೆ, ಅವರು ತಮ್ಮ ಇನ್‌ಸ್ಟಾಗ್ರಾಮ್ ಫೀಡ್ ಅನ್ನು ಕ್ಲಿಯರ್ ಮಾುವಾಗ, ಫ್ಯಾನ್ ಪೇಜ್‌ನಲ್ಲಿ ಹಂಚಿಕೊಂಡಿದ್ದ, ನಟಿ ಅವನೀತ್ ಕೌರ್ ಅವರ ಫೋಟೋವನ್ನು ಆಕಸ್ಮಿಕವಾಗಿ ಲೈಕ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈ ಫೋಟೋಗೆ ಲೈಕ್ ಕೊಟ್ಟಿದ್ದೆ ತಡ, ಅಭಿಮಾನಿಗಳಂತೂ ನಾನಾ ಬಗೆಯಲ್ಲಿ ಈ ವಿಚಾರ ಕುರಿತು ಮಾತನಾಡಲು ಆರಂಭಿಸಿ ಬಿಟ್ಟಿದ್ದರು.
ಇದಕ್ಕೆ ವಿರಾಟ್ ತಕ್ಷಣ ಸ್ಪಷ್ಟನೆ ಸಹ ಕೊಟ್ಟಿದ್ದರು, ಫೀಡ್ ಕ್ಲಿಯರ್ ಮಾಡುವಾಗ ಈ ತಪ್ಪು ನಡೆದಿದೆ, ಯಾವುದೇ ಉದ್ದೇಶದಿಂದ ಆ ಹುಡುಗಿಯ ಫೋಟೋಗೆ ಲೈಕ್ ಕೊಟ್ಟಿಲ್ಲ, ಇಲ್ಲಸಲ್ಲದನ್ನು ಹಬ್ಬಬೇಡಿ ಎಂದು ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಆದರೆ, ಮತ್ತೊಂದೆಡೆ, ವಿರಾಟ್ ಕೊಹ್ಲಿಯ ಈ ಅಪ್ರಚೋದಿತ ಕ್ರಮದಿಂದ ಅವನೀತ್ ಕೌರ್ ಹೆಚ್ಚಿನ ಲಾಭ ಪಡೆದಿದ್ದಾರೆ. ವಿರಾಟ್ ಫೋಟೋ ಇಷ್ಟಪಟ್ಟ ನಂತರ, ಅವನೀತ್ ಅವರ ಫಾಲೋವರ್ಸ್ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.
ಈಗ, ಕೆಲವು ಮಾಧ್ಯಮ ವರದಿಗಳ ಪ್ರಕಾರ, ವಿರಾಟ್ ಅವರ ಒಂದು ಲೈಕ್ ಅವನೀತ್ ಅವರ ಅನುಯಾಯಿಗಳನ್ನು ಹೆಚ್ಚಿಸಿದೆ ಮಾತ್ರವಲ್ಲದೆ, ಬ್ಯೂಟಿ ಹಾಗೂ ಫ್ಯಾಷನ್‌ಗೆ ಸಂಬಂಧಿಸಿದ 12 ಹೊಸ ಜಾಹೀರಾತುಗಳನ್ನು ಸಹ ಅವರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಅವನೀತ್ ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ 30 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದರು, ಆದರೆ, ವಿರಾಟ್, ಅವರ ಫೋಟೋವನ್ನು ಲೈಕ್ ಮಾಡಿದ ನಂತರ, ಈ ಸಂಖ್ಯೆ 31.8 ಮಿಲಿಯನ್ ತಲುಪಿದೆ. ಇದರರ್ಥ ಕೆಲವೇ ದಿನಗಳಲ್ಲಿ, ಅವನೀತ್ 1.8 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ, ಅವನೀತ್ ಮತ್ತು ಕ್ರಿಕೆಟಿಗ ಶುಭ್ಮನ್ ಗಿಲ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ಎಂಬ ಬಗ್ಗೆಯೂ ಮಾತುಕತೆ ನಡೆದಿತ್ತು. ಈಗ, ವಿರಾಟ್ ಅವರ ಲೈಕ್‌ನಿಂದಾಗಿ ಅವನೀತ್ ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ.
ಅವನೀತ್ ಕೌರ್ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅನೇಕ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆಯ ಜೊತೆಗೆ ಅವರಿಗೆ ನೃತ್ಯವೂ ತುಂಬಾ ಇಷ್ಟ. ಅವರು ಶೀಘ್ರದಲ್ಲೇ ತಮ್ಮ ಮುಂಬರುವ ಯೋಜನೆ 'ಲವ್ ಇನ್ ವಿಯೆಟ್ನಾಂ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.