PHOTOS

ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯರ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು? ಏಕಿರಬೇಕು?

Husband and Wife: ಸಂಸಾರ ಸುಂದರವಾಗಿರಬೇಕು ಎಂದರೆ ಗಂಡ-ಹೆಂಡತಿ ನಡುವೆ ದೈಹಿಕ ಮತ್ತು ಮಾನಸಿಕ ಹೊಂದಾಣಿಕೆ ಅತ್ಯಗತ್ಯ. ಅದು ಹೇಗೆ ಸಾಧ್ಯವಾಗುತ್ತದೆ ಎಂದು ವೈದ್ಯರು, ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಬಗ್ಗೆ 

Advertisement
1/6
ಮದುವೆ
ಮದುವೆ

ಹಿಂದೆಲ್ಲಾ ಹುಡುಗ-ಹುಡುಗಿ ನೋಡುವಾಗ ವಯಸ್ಸಿನ ಬಗ್ಗೆ ಚರ್ಚೆ ಆಗುತ್ತಿದ್ದದ್ದು ತುಂಬಾ ವಿರಳವೇ... ಹಿಂದೆಲ್ಲಾ ಮದುವೆ ವಿಚಾರದಲ್ಲಿ ಆಸ್ತಿ, ಅಂತಸ್ತು, ಕೆಲಸ, ಆದಾಯ, ಸೌಂದರ್ಯಗಳ ಬಗ್ಗೆ ಹೆಚ್ಚು ಯೋಚಿಸಲಾಗುತ್ತಿತ್ತು. 

2/6
ವಧು-ವರ
ವಧು-ವರ

ತಮಗೆ ಬೇಕಾದ ವರ-ವಧುವನ್ನು ಹುಡುಗಿ-ಹುಡುಗರೇ ಆರಿಸಿಕೊಳ್ಳಲು ಆರಂಭಿಸಿದ ಮೇಲೆ ಪರಸ್ಪರ ಕನಸುಗಳ ವಿನಿಮಯ ಮತ್ತು ವಯಸ್ಸಿನ ಅಂತರದ ಬಗ್ಗೆ ಚರ್ಚೆ ಶುರುವಾಯಿತು.  

3/6
ಗಂಡ-ಹೆಂಡತಿ ನಡುವಣ ವಯಸ್ಸಿನ ಅಂತರ
ಗಂಡ-ಹೆಂಡತಿ ನಡುವಣ ವಯಸ್ಸಿನ ಅಂತರ

ಆಗಲೂ ಹುಡುಗಿ-ಹುಡುಗನ ನಡುವೆ ಇರುವ ವಯಸ್ಸಿನ ಅಂತರ ಬಹಳ ಮುಖ್ಯವಾದುದು. ಗಂಡ-ಹೆಂಡತಿಯರ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಬಗ್ಗೆ ಆಚಾರ್ಯ ಚಾಣಕ್ಯರೂ ಕೂಡ ತಮ್ಮ ಚಾಣಕ್ಯ ನೀತಿಯಲ್ಲಿ ಪ್ರಸ್ತಾಪಿಸಿದ್ದಾರೆ. 

4/6
ಸಮಾನಮನಸ್ಕರ ನಡುವೆ ಮದುವೆ
ಸಮಾನಮನಸ್ಕರ ನಡುವೆ ಮದುವೆ

ಬರಿ ಸಮಾನಮನಸ್ಕರ ನಡುವೆ ಮದುವೆ ಆದರೆ ಸಮಸ್ಯೆಯೇ ಇರದು ಎಂದು ಹೇಳಲಾಗದು. ಆಗಲೂ ಹುಡುಗಿ-ಹುಡುಗನ ನಡುವೆ ಇರುವ ವಯಸ್ಸಿನ ಅಂತರ ಬಹಳ ಮುಖ್ಯವಾದುದು. 

5/6
ಚಾಣಕ್ಯರ ಪ್ರಕಾರ ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿರಬೇಕು
ಚಾಣಕ್ಯರ ಪ್ರಕಾರ ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿರಬೇಕು

ತಾನು ಅರ್ಥಶಾಸ್ತ್ರಜ್ಞನಾದರೂ ಚಾಣಕ್ಯ ವಧು-ವರರ ನಡುವೆ ಇರಬೇಕಾದ ಅಂತರದ ಬಗ್ಗೆ ಹೇಳಿದ್ದಾನೆ. ಚಾಣಕ್ಯನ ಪ್ರಕಾರ ಗಂಡ ಮತ್ತು ಹೆಂಡತಿ ಮಧ್ಯೆ ವಯಸ್ಸಿನ ಅಂತರ ಕಮ್ಮಿ ಇದ್ದಷ್ಟೂ ಒಳ್ಳೆಯದು. 3 ರಿಂದ 5 ವರ್ಷಗಳ ಅಂತರ ಇದ್ದರೆ ಬಹಳ ಉತ್ತಮ.

6/6
ಗಂಡ ಹೆಂಡತಿ ನಡುವಿನ ವಯಸ್ಸಿನ ಅಂತರ
ಗಂಡ ಹೆಂಡತಿ ನಡುವಿನ ವಯಸ್ಸಿನ ಅಂತರ

ಹೆಂಡತಿ ಮತ್ತು ಗಂಡನ ವಯಸ್ಸುಗಳ ನಡುವೆ ಅಂತರ ಕಮ್ಮಿ ಇದ್ದಷ್ಟೂ ಆ ದಂಪತಿಗಳು ದೈಹಿಕವಾಗಿ ಹೆಚ್ಚು ಸುಖ ಪಡುತ್ತಾರೆ. ಮಾನಸಿಕವಾಗಿಯೂ ಅವರಲ್ಲಿ ಉತ್ತಮವಾದ ಹೊಂದಾಣಿಕೆ ಏರ್ಪಡುತ್ತದೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಬ್ಬರ ನಡುವೆ ಭಿನ್ನ ಭಿನ್ನವಾದ ಅಭಿಪ್ರಾಯಗಳು ಬರುವುದು ಕಮ್ಮಿ ಇರುತ್ತದೆ. ಹಾಗಾಗಿ ಗಂಡ-ಹೆಂಡತಿಯ ನಡುವೆ ವಯಸ್ಸಿನ ಅಂತರ ಕಮ್ಮಿ ಇದ್ದಷ್ಟೂ ಒಳ್ಳೆಯದು ಎಂದಿದ್ದಾರೆ ಆಚಾರ್ಯ ಚಾಣಕ್ಯ.





Read More