PHOTOS

ನಿಮ್ಮ ಕೈ ಕಾಲುಗಳು ತುಂಬಾ ಬೆವರುತ್ತಿವೆಯೇ..? ನಿರ್ಲಕ್ಷ್ಯವಹಿಸದೇ.. ಇಂದಿನಿಂದ ಈ ಟಿಪ್ಸ್‌ ಪಾಲಿಸಿ

Hand and foot sweating : ಋತುಮಾನ ಯಾವುದೇ ಇರಲಿ, ಅನೇಕ ಜನರ ಕೈ ಮತ್ತು ಪಾದಗಳು ಅತಿಯಾಗಿ ಬೆವರುತ್ತವೆ. ಕೆಲಸ ಮಾಡದಿದ್ದರೂ ಸಹ ಈ ಸಮಸ್ಯೆ ಅತಿಯಾಗಿ ಕಾಡುತ್ತದೆ. ನಿಮಗೂ ಈ ರೀತಿ ಆಗುತ್ತಿದ್ದರೆ, ಚಿಂತಿಸಬೇಡಿ.. ಜಸ್ಟ್‌ ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ ಅಷ್ಟೇ...

Advertisement
1/5

ಕೈ ಮತ್ತು ಪಾದಗಳಲ್ಲಿ ಹೆಚ್ಚು ಬೆವರು ಬರುವವರು ನಿಯಮಿತವಾಗಿ ಕೈ ಮತ್ತು ಪಾದಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ರಾಸಾಯನಿಕ ಭರಿತ ಸೋಪುಗಳ ಬಳಕೆಯ ಬದಲಿಗೆ ಸೌಮ್ಯವಾದ ಸೋಪುಗಳನ್ನು ಬಳಸುವುದು ಉತ್ತಮ. ಬೆವರು ಬರುವವರು ಮೃದುವಾದ ಕಾಟನ್‌ ಸಾಕ್ಸ್ ಧರಿಸಬೇಕು.

2/5

ಕೈ ಮತ್ತು ಕಾಲುಗಳಲ್ಲಿ ಅತಿಯಾದ ಬೆವರುವಿಕೆಯ ಸಮಸ್ಯೆ ಇರುವವರು ಬ್ಲ್ಯಾಕ್ ಟೀ ಕುಡಿಯಬಹುದು, ಏಕೆಂದರೆ ಇದರಲ್ಲಿರುವ ಸಂಕೋಚಕ ಗುಣಗಳು ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ. ಬ್ಲಾಕ್ ಟೀಯಿಂದ ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಸಹ ತಪ್ಪಿಸಬಹುದು ಎಂದು ತಜ್ಞರು ಹೇಳುತ್ತಾರೆ.

3/5

ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಅದರಲ್ಲಿ ನಿಮ್ಮ ಕೈ ಮತ್ತು ಪಾದಗಳನ್ನು 15 ನಿಮಿಷಗಳ ಕಾಲ ನೆನೆಸುವುದರಿಂದ, ಇದರ ಸೂಕ್ಷ್ಮಜೀವಿ ನಿರೋಧಕ ಗುಣಗಳು ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಕ್ರಮೇಣ ಈ ಸಮಸ್ಯೆಯನ್ನು ನಿವಾರಿಸುತ್ತದೆ. 

4/5

ನಿಮ್ಮ ಕೈ ಮತ್ತು ಪಾದಗಳಿಗೆ ಅಡಿಗೆ ಸೋಡಾ ಪೇಸ್ಟ್ ಹಚ್ಚಿ, 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. 2 ಚಮಚ ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ನಿಮ್ಮ ಅಂಗೈ ಮತ್ತು ಪಾದಗಳಿಗೆ ಹಚ್ಚಿ. ಇದು ನಿಮ್ಮ ಅಂಗೈ ಮತ್ತು ಪಾದಗಳಲ್ಲಿ ಬೆವರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5/5

ಅಂಗೈ ಮತ್ತು ಪಾದಗಳ ಅತಿಯಾದ ಬೆವರುವಿಕೆಯನ್ನು ನಿಯಂತ್ರಿಸಲು ಶ್ರೀಗಂಧದ ಪುಡಿಯನ್ನು ಬಳಸಲು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಶ್ರೀಗಂಧವನ್ನು ಗುಲಾಬಿ ನೀರಿನೊಂದಿಗೆ ಬೆರೆಸಿ ಅಂಗೈ ಮತ್ತು ಪಾದಗಳಿಗೆ ಹಚ್ಚಿ 15 ನಿಮಿಷಗಳ ನಂತರ ಸ್ವಚ್ಛಗೊಳಿಸುವುದರಿಂದ ಅತಿಯಾದ ಬೆವರುವಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.





Read More