ಐಸಿಸಿ ಚಾಂಪಿಯನ್ಸ್ ಟ್ರೋಫಿ 2024 ರ ಟೂರ್ನಿಯಲ್ಲಿ ಪಾಕಿಸ್ತಾನ ನೀಡಿದ 242 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪುವಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಈ ಪಂದ್ಯದಲ್ಲಿ ಅವರು ಶತಕವನ್ನು ಸಿಡಿಸುವ ಮೂಲಕ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 82 ನೇ ಶತಕವನ್ನು ಗಳಿಸುವ ಮೂಲಕ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಎರಡನೇ ಗ್ರೂಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು. ತಮ್ಮ 299 ನೇ ಏಕದಿನ ಪಂದ್ಯವನ್ನು ಕೊಹ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದರು
ಮೊದಲು ಬೌಲಿಂಗ್ ಮಾಡಿದ ಭಾರತ, ಪಾಕಿಸ್ತಾನವನ್ನು 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಸೀಮಿತಗೊಳಿಸಿತು ಮತ್ತು ನಂತರ ಕೊಹ್ಲಿಯ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಕಾರಣದಿಂದಾಗಿ 42.3 ಓವರ್‌ಗಳಲ್ಲಿ ಸ್ಕೋರ್ ಅನ್ನು ಬೆನ್ನಟ್ಟಿತು.
ವಿರಾಟ್ ಕೊಹ್ಲಿ 158 ಕ್ಯಾಚ್‌ಗಳನ್ನು ಪಡೆದ ಮೊದಲ ಭಾರತೀಯ ಔಟ್‌ಫೀಲ್ಡರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ (160) ಮತ್ತು ಮಹೇಲಾ ಜಯವರ್ಧನೆ (218) ನಂತರ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ (27,483 ರನ್) ಅವರನ್ನು ಹಿಂದಿಕ್ಕಿ ಎಲ್ಲಾ ಸ್ವರೂಪಗಳಲ್ಲಿ 27,503 ರನ್ ಗಳಿಸಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅವರು ಸಂಗಕ್ಕಾರ (28,016 ರನ್) ಮತ್ತು ಸಚಿನ್ (34,357 ರನ್) ಗಿಂತ ಹಿಂದಿದ್ದಾರೆ.
ಈಗ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಶತಕದ ವಿಶ್ವ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಸಚಿನ್ 49 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ 51 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ