Whatsapp Feature: ವಾಟ್ಸಾಪ್ ಹೊಸ ವೈಶಿಷ್ಟ್ಯದಿಂದ ಗ್ರಾಹಕರು ವಿಡಿಯೋ ಕರೆಯನ್ನು ಮತ್ತಷ್ಟು ಆಕರ್ಷಕವಾಗಿರಲಿದೆ.
ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಆಗಾಗ್ಗೆ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುವ ವಾಟ್ಸಾಪ್ ಇದೀಗ ವೀಡಿಯೋ ಕರೆಗೂ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
ವಾಟ್ಸಪ್ ಗ್ರಾಹಕರು ಈಗ ವೀಡಿಯೋ ಕರೆಗಳನ್ನು ಮಾಡುವಾಗ ಫಿಲ್ಟರ್'ಗಳು ಮತ್ತು ಬಾಕ್ಗ್ರೌಂಡ್ ಅನ್ನು ಸಹ ಅನ್ವಯಿಸಬಹುದಾಗಿದೆ.
ವಾಟ್ಸಾಪ್ ವಿಡಿಯೋ ಕರೆ ವೈಶಿಷ್ಟ್ಯದಲ್ಲಿ ಗ್ರಾಹಕರು ಕಡಿಮೆ ಬೆಳಕಿನ ಮೋದಿ, ಟಚ್ ಅಪ್ ಮೋಡ್ ನಂತಹ ಆಯ್ಕೆಗಳನ್ನು ಸಹ ಪಡೆಯುತ್ತಾರೆ.
ವಾಟ್ಸಪ್ ವಿಡಿಯೋ ಕಾಲ್ ಮಾಡುವಾಗ ಫಿಲ್ಟರ್ ಆಯ್ಕೆಯನ್ನು ಆರಿಸಿದರೆ ಸ್ಕ್ರೀನ್ ಮೇಲ್ಬಾಗದಲ್ಲಿ ಲೋ ಲೈಟ್ ಮೋಡ್, ಟಚ್ ಅಪ್ ಮೋಡ್ ಮತ್ತು ಆಲ್ ಫಿಲ್ಟರ್ ರಿಮೂವ್ ಎಂಬ ಮೂರು ಆಯ್ಕೆಗಳು ಗೋಚರಿಸುತ್ತವೆ.
ಲೋ ಲೈಟ್ ಮೋಡ್ ಆರಿಸಿದರೆ ಮುಖದ ಮೇಲೆ ಉತ್ತಮ ಲೈಟಿಂಗ್ಸ್ ಸೆಟ್ ಆಗುತ್ತದೆ. ಟಚ್ ಅಪ್ ಮೋಡ್ ಕ್ಲಿಕ್ ಮಾಡಿದರೆ ಮುಖದ ಕಾಂತಿ ಹೆಚ್ಚಾದಂತೆ ಕಾಣುತ್ತದೆ. ಈ ಎಲ್ಲಾ ಫಿಲ್ಟರ್ ಗಳನ್ನು ತೆಗೆಯಲು ಬಯಸಿದರೆ ಆಲ್ ಫಿಲ್ಟರ್ ರಿಮೂವ್ ಎಂಬ ಆಯ್ಕೆಯನ್ನು ಆರಿಸಬೇಕಾಗುತ್ತದೆ.