Home> Spiritual
Advertisement

ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸುವ ತುಳಸಿ ಗಿಡವನ್ನು ಸೊಂಪಾಗಿ ಬೆಳೆಸಲು ಸಿಂಪಲ್ ಟಿಪ್ಸ್

Tulsi Plant: ಮನೆಯಲ್ಲಿ ತುಳಸಿ ಸಸ್ಯ ಸೊಂಪಾಗಿ ಬೆಳೆದರೆ ಕುಟುಂಬದಲ್ಲಿ ಪ್ರಗತಿ ಕಂಡು ಬರುತ್ತದೆ. ಅಂತಹ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ಆಗಲಿದೆ ಎಂಬುದು ನಂಬಿಕೆ. 

ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸುವ ತುಳಸಿ ಗಿಡವನ್ನು ಸೊಂಪಾಗಿ ಬೆಳೆಸಲು  ಸಿಂಪಲ್ ಟಿಪ್ಸ್

Tulsi Growing Tips: ತುಳಸಿ ಸಸ್ಯದಲ್ಲಿ ಸಾಕ್ಷಾತ್ ಲಕ್ಷ್ಮೀಯೇ ನೆಲೆಸಿದ್ದಾಳೆ ಎನ್ನಲಾಗುತ್ತದೆ. ವಿಷ್ಣು ಪ್ರಿಯೆ ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಕಷ್ಟ-ಕಾರ್ಪಣ್ಯಗಳೆಲ್ಲಾ ಕಳೆದು ಸುಖ ಸಂಪತ್ತು ಹೆಚ್ಚಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಮನೆಯಲ್ಲಿ ತುಳಸಿ ಸಸ್ಯ ಸೊಂಪಾಗಿ ಬೆಳೆದರೆ ಅಂತಹ ಮನೆಯಲ್ಲಿ ಲಕ್ಷ್ಮಿ ಪ್ರವೇಶವಾಗುತ್ತದೆ. ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ, ಸುಖ-ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲೂ ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ ಕೆಲವು ಸರಳ ಸಲಹೆಗಳು ಹೆಚ್ಚು ಪ್ರಯೋಜನಕಾರಿ ಆಗಿದೆ. 

ಬಹುತೇಕ ಸಂದರ್ಭಗಳಲ್ಲಿ ಎಷ್ಟೇ ಆರೈಕೆ ಮಾಡಿದರೂ ಸಹ ತುಳಸಿ ಸಸ್ಯ ಬೆಳೆಯುವುದೇ ಇಲ್ಲ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಎಲೆಗಳೆಲ್ಲಾ ಉದುರಿ ಸಸ್ಯ ಬಡಕಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದನ್ನು ಮನೆಯಲ್ಲಿ ದಾರಿದ್ರ್ಯದ ಸಂಕೇತ ಎಂತಲೂ ಹೇಳಲಾಗುತ್ತದೆ. ಆದರೆ ನೀವು ಮನೆಯಲ್ಲಿ ವ್ಯರ್ಥವನ್ನು ಬಿಸಾಡುವ ಪದಾರ್ಥಗಳಿಂದಲೇ  ತುಳಸಿ ಸಸ್ಯ ಸಮೃದ್ಧವಾಗಿ ಬೆಳೆಯುತ್ತದೆ. ಇದಲ್ಲದೆ ಸಸ್ಯ ಬೆಳವಣಿಗೆಗೆ ಪೂರಕವಾದ ಕೆಲವು ಕ್ರಮಗಳನ್ನು ಕೂಡ ಕೈಗೊಳ್ಳಬೇಕಾಗುತ್ತದೆ.  

ಇದನ್ನೂ ಓದಿ- ಮನೆಯ ಸಮೃದ್ಧಿಗಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ವರದಾನ 'ತುಳಸಿ'

ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲು ಸಿಂಪಲ್ ಟಿಪ್ಸ್: 
ಅಕ್ಕಿ ತೊಳೆದ ನೀರು: 

ತುಳಸಿ ಸಸ್ಯಕ್ಕೆ ನೀವು ವ್ಯರ್ಥವೆಂದು ಚೆಲ್ಲುವ ಅಕ್ಕಿ ತೊಳೆದ ನೀರನ್ನು ಹಾಕಿ. ಇದು ತುಳಸಿ ಸಸ್ಯದ ಬೇರುಗಳನ್ನು ಗಟ್ಟಿಯಾಗಿಸಲು ಸಹಕಾರಿ ಆಗಿದೆ. 

ಚಹಾ ಪುಡಿ: 
ಪ್ರತಿ ಮನೆಯಲ್ಲೂ ಟೀ ತಯಾರಿಸಿದ ಬಳಿದ ಬಿಸಾಡುವ ಟೀ ಸೊಪ್ಪಿನಲ್ಲೂ ಸಹ ಅತೀವವಾದ ಪೋಷಕಾಂಶಗಳು ಕಂಡುಬರುತ್ತವೆ. ಇದನ್ನು ತುಳಸಿ ಸಸ್ಯ ನೆಟ್ಟಿರುವ ಜಾಗಕ್ಕೆ ಹಾಕುವುದರಿಂದ ಸಸ್ಯಕ್ಕೆ ಪೋಷಣೆ ದೊರೆತು, ಅದು ಸಮೃದ್ಧಿಯಾಗಿ ಬೆಳೆಯುತ್ತದೆ. 
 
ಉಪ್ಪು: 
ತುಳಸಿ ಸಸ್ಯಕ್ಕೆ ವಾರದಲ್ಲಿ ಒಮ್ಮೆಯಾದರೂ ಸ್ವಲ್ಪ ಉಪ್ಪನ್ನು ಸಿಂಪಡಿಸುವುದರಿಂದ ತುಳಸಿಯ ಪರಿಮಳ ಹೆಚ್ಚಾಗುವುದರೊಂದಿಗೆ ಅದರ ಬೆಳವಣಿಗೆಗೂ ಇದು ಸಹಕಾರಿ ಆಗಿದೆ. 

ಇದನ್ನೂ ಓದಿ- ಕಷ್ಟ ಬರುವ ಮುನ್ನ ತುಳಸಿ ನೀಡುತ್ತದೆ ಈ 3 ಅಶುಭ ಸಂಕೇತ !ಜೀವನ ಸರ್ವ ನಾಶವಾಗುವ ಮುನ್ಸೂಚನೆ ಇದು !

ನೀರು: 
ತುಳಸಿ ಸಸ್ಯದ ಬೆಳವಣಿಗೆಗೆ ನೀರು ಅಗತ್ಯವೇ ಆದರೂ ಸಹ ಅತಿಯಾಗಿ ನೀರು ಹಾಕಿದರೆ ಸಸ್ಯ ಹಾಳಾಗುವ ಸಂಭವವೂ ಇರುತ್ತದೆ. ಹಾಗಗಿ, ತುಳಸಿ ಸಸ್ಯಕ್ಕೆ ಹಿತ-ಮಿತವಾಗಿ ನೀರು ಬಳಸುವುದು ಒಳಿತು. 

ಸೂರ್ಯನ ಕಿರಣ: 
ತುಳಸಿ ಸಸ್ಯ ಇರುವೆಡೆ ಸ್ವಲ್ಪ ಸಮಯವಾದರೂ ಸೂರ್ಯನ ಕಿರಣಗಳು ಬೀಳುವಂತೆ ನಿಗಾವಹಿಸಿ. ಇದು ತುಳಸಿ ಬೆಳವಣಿಗೆಗೆ ಅಗತ್ಯವಾಗಿದೆ. 

ಸಗಣಿ ಗೊಬ್ಬರ: 
ಇತರ ಸಸ್ಯಗಳಿಗೆ ಗೊಬ್ಬರ ಹಾಕುವಂತೆ ತುಳಸಿ ಸಸ್ಯಕ್ಕೆ ಹಸುವಿನ ಸಗಣಿ ಅತ್ಯುತ್ತಮ ಗೊಬ್ಬರವಾಗಿದೆ. ಇದರಲ್ಲಿರುವ ಪೋಷಕಾಂಶಗಳು ತುಳಸಿ ಸಸ್ಯದ ಬೆಳವಣಿಗೆಗೆ ಸಹಕಾರಿ ಆಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Read More