Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಆಷಾಢ ಮಾಸ ಶುಕ್ಲ ಪಕ್ಷದ ತ್ರಯೋದಶಿಯ ಈ ದಿನ ಮಂಗಳವಾರ, ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ, ಕೌಲವ ಕರಣ, ಭೌಮಪ್ರದೋಷ ಇರಲಿದ್ದು, ಕೆಲವು ರಾಶಿಯವರಿಗೆ ವಿಘ್ನ ವಿನಾಶಕನ ವಿಶೇಷ ಆಶೀರ್ವಾದ ಇರಲಿದೆ. ಇಂದು ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮ್ಮ ಶಕ್ತಿಗೂ ಮೀರಿ ಕೆಲಸ ಮಾಡುವುದನ್ನು ತಪ್ಪಿಸಿ, ಆಂತರಿಕ ಲಯಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಪ್ರಮುಖ ಕೆಲಸಗಳಲ್ಲಿ ಬುದ್ದಿ ಮ್ತ್ತು ಮನಸ್ಸು ಎರಡೂ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ಪ್ರೀತಿಪಾತ್ರರ ಸಲಹೆ ಅನುಸರಿಸಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಸ್ಥಿರತೆಯ ಭಾವನೆ ನಿಮ್ಮನ್ನು ಸುತ್ತುವರೆದಿರುತ್ತದೆ. ವೈಯಕ್ತಿಕ ಸಾಮರಸ್ಯವನ್ನು ನಿರ್ಮಿಸಲು ನಿಕಟ ಬಂಧಗಳನ್ನು ಬೆಳೆಸಲು ಇಂದಿನ ದಿನ ಅತ್ಯುತ್ತಮವಾಗಿದೆ. ನಿಮ್ಮ ದೀರ್ಘಕಾಲೀನ ಆಕಾಂಕ್ಷೆಗಳೊಂದಿಗೆ ಹೊಂದಾವಣಿಕೆಯನ್ನು ಕಾಪಾಡಿಕೊಳ್ಳಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಈ ದಿನ ಆಂತರಿಕ ಸ್ಪಷ್ಟತೆ ಮತ್ತು ಬಾಹ್ಯ ಹೊಂದಾಣಿಕೆಯ ಸಾಮರ್ಥ್ಯವನ್ನು ಸಮತೋಲನಗೊಳಿಸಲು ಪ್ರಯತ್ನಿಸಿ. ಇದು ನಿಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ. ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ನೆನಪುಗಳು, ಸಂಭಾಷಣೆಗಳು ನಿಮ್ಮ ಭಾವನಾತ್ಮಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ವಿಘ್ನ ವಿನಾಶಕನ ಆಶೀರ್ವಾದದಿಂದ ಜೀವನದಲ್ಲಿ ಮೂಡಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಅನಿಶ್ಚಿತ ಪರಿಸ್ಥಿತಿಗಳಲ್ಲಿ ಹಠಾತ್ ಪ್ರತಿಕ್ರಿಯೆಗಳನ್ನು ತಪ್ಪಿಸುವುದು ಒಳ್ಳೆಯದು.
ಇದನ್ನೂ ಓದಿ- 12ಮಾಸದ ಬಳಿಕ ಪ್ರಬಲ ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಿಗೆ ದಿಢೀರ್ ಧನಲಾಭ, ಕುಬೇರನ ಸಂಪತ್ತನ್ನೇ ಗಳಿಸುವ ಸುಯೋಗ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ನೀವು ಪ್ರೀತಿಸಿದವರೊಂದಿಗೆ ಅರ್ಥಪೂರ್ಣವಾದ ಸಂಭಾಷಣೆ ಮತ್ತು ಮರುಸಂಪರ್ಕಕ್ಕೆ ಅವಕಾಶಗಳನ್ನು ನೀಡಲಿದೆ. ಯಾವುದಾದರೂ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಆತುರತೆಯನ್ನು ತಪ್ಪಿಸಿ. ನಿಮ್ಮ ಆಂತರಿಕ ಸಮತೋಲನವನ್ನು ಸ್ಥಿರವಾಗಿರಿಸಿಕೊಳ್ಳಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ನಿಮ್ಮ ಯೋಜನೆಗಳನ್ನು ಸ್ಪಷ್ಟತೆಯೊಂದಿಗೆ ಸಂಘಟಿಸಲು ಈ ದಿನ ಶುಭಪ್ರದವಾಗಿದೆ. ಸಂವಹನಗಳು ಅಮೂಲ್ಯವಾದ ಸಂಪರ್ಕಗಳನ್ನು ತಂದುಕೊಡಬಹುದು. ಅಸಂಭವ ಮೂಲಗಳಿಂದ ಕಲಿಕೆಗೆ ಮುಕ್ತ ಅವಕಾಶ ದೊರೆಯಲಿದೆ. ಆತ್ಮವಿಶ್ವಾಸವು ನಿಮ್ಮ ಹೆಜ್ಜೆಗಳಿಗೆ ಮಾರ್ಗದರ್ಶನ ನೀಡಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ನಿಮ್ಮ ಸುತ್ತಲಿನ ವಾತಾವರಣವೂ ನಿಮಗೆ ಶಾಂತಿಯನ್ನು ನೀಡಲಿದೆ. ಕೌಟುಂಬಿಕ ಸಂಪರ್ಕಗಳು ಮತ್ತು ಹೃತ್ಪೂರ್ವಕ ಸಂಭಾಷಣೆಗಳು ತಿಳುವಳಿಕೆಯನ್ನು ಹೆಚ್ಚಿಸಲಿವೆ. ಸಂಯಮದಿಂದ ಪ್ರೀತಿ ದೊರೆಯಲಿದೆ. ಭಾವನಾತ್ಮಕವಾಗಿ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಆಂತರಿಕ ಶಕ್ತಿಯಿದ್ನ ನಿಮ್ಮ ಸೃಜನಶೀಲತೆ ಹೆಚ್ಚಾಗಲಿದೆ. ಧೈರ್ಯದಿಂದ ನಿಮ್ಮ ಸುತ್ತಲಿನವರನ್ನು ಮೇಲಕ್ಕೆತ್ತುವ ಸಾಮರ್ಥ್ಯ ಹೆಚ್ಚಾಗಲಿದೆ. ವೈಯಕ್ತಿಕ ಸಂಪರ್ಕಗಳು ಸಂತೋಷವನು ನೀಡಲಿವೆ. ಬಲವಂತವಿಲ್ಲದೆ ಪ್ರಭಾವ ಬೀರುವ ಸಾಮರ್ಥ್ಯ ನಿಮ್ಮಲ್ಲಿದ್ದು, ಬೇರೆಯವರು ನಿಮ್ಮ ಪ್ರಗತಿಗೆ ಬೆರಗಾಗುತ್ತಾರೆ.
ಇದನ್ನೂ ಓದಿ- 100 ವರ್ಷಗಳ ನಂತರ ವಿಪರೀತ ರಾಜಯೋಗ: ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು ಖಚಿತ..!!
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಯಾವುದಕ್ಕೂ ಆತುರ ಪಡುವುದನ್ನು ತಪ್ಪಿಸಿ. ಪ್ರಮುಖ ವಿಚಾರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅವಶ್ಯಕ. ನಿಮ್ಮ ಉತ್ಸಾಹವನ್ನು ಹೊರತರಲು ಸರಿಯಾದ ದಾರಿ ಹುಡುಕಬೇಕಾಗಬಹುದು. ಹಠಾತ್ ಪ್ರವೃತ್ತಿಯನ್ನು ತಪ್ಪಿಸಿ. ಜೀವನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಈ ದಿನ ಉದ್ದೇಶ ಆಧಾರಿತ ಮಹತ್ವಾಕಾಂಕ್ಷೆಗೆ ಆದ್ಯತೆ ನೀಡುವುದರಿಂದ ಶುಭ. ವೈಯಕ್ತಿಕ ಬೆಳವಣಿಗೆಗಾಗಿ ವಿಶೇಷ ಗಮನಹರಿಸಿ. ವ್ಯವಹಾರವನ್ನು ವಿಸ್ತರಿಸಲು ನೀವು ಸಬಲರಾಗಿದ್ದೀರಿ ಮತ್ತು ದೃಢನಿಶ್ಚಯ ಹೊಂದುತ್ತೀರಿ. ಬಾಹ್ಯ ಶಬ್ದಕ್ಕಿಂತ ಹೆಚ್ಚಾಗಿ ನಿಮ್ಮ ದೀರ್ಘಕಾಲೀನ ದೃಷ್ಟಿಕೋನವು ನಿಮಗೆ ಮಾರ್ಗದರ್ಶನ ನೀಡಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಚಿಂತನಶೀಲ ಸಂವಹನಗಳಿಗೆ ಸೂಕ್ತ ಸಮಯ. ಪ್ರಮುಖ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಮಾರ್ಗವನ್ನು ರೂಪಿಸಿಕೊಳ್ಳಲು ಸಹಕಾರಿ ಆಗಲಿದೆ. ನಿಮ್ಮ ಯೋಜನೆಗಳನ್ನು ಪರಿಷ್ಕರಿಸಲು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮ್ಮ ಆಲೋಚನೆಗಳು ಮತ್ತು ಕ್ರಿಯೆಗಳಲ್ಲಿ ಆಧ್ಯಾತ್ಮಿಕ ಅಂತಃಪ್ರವಾಹವಿರುತ್ತದೆ. ಅಧ್ಯಯನ ಅಥವಾ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಸುಸಮಯ. ನಿಮ್ಮ ಗುರಿಗಳನ್ನು ತಲುಪುವಲ್ಲಿ ಧನಾತ್ಮಕ ಶಕ್ತಿ ದೊರೆಯಲಿದೆ. ನಿಮ್ಮ ಅಂತಃಪ್ರಜ್ಞೆಯನ್ನು ಎಚ್ಚರಗೊಳಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.