Home> Spiritual
Advertisement

ದಿನಭವಿಷ್ಯ 10-07-2025: ಗುರು ಪೂರ್ಣಿಮೆಯಂದು ಐಂದ್ರ ಯೋಗ, ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Today Horoscope 10th July 2025: ಗುರು ಪೂರ್ಣಿಮಾ ದಿನದಂದು ಪೂ.ಷಾ. ನಕ್ಷತ್ರದಲ್ಲಿ ಐಂದ್ರ ಯೋಗ. ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

ದಿನಭವಿಷ್ಯ 10-07-2025:  ಗುರು ಪೂರ್ಣಿಮೆಯಂದು ಐಂದ್ರ ಯೋಗ, ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಸೌರ ವರ್ಷಾ ಋತು, ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ. ಈ ದಿನವನ್ನು ಗುರು ಪೂರ್ಣಿಮಾ ಎಂತಲೇ ಆಚರಿಸಲಾಗುತ್ತದೆ. ಇಂದು ಪೂ.ಷಾ. ನಕ್ಷತ್ರದಲ್ಲಿ ಐಂದ್ರ ಯೋಗ, ವಿಷ್ಟಿ ಕರಣ. ಇಂದು ಯಾವ ರಾಶಿಯವರಿಗೆ ಅದೃಷ್ಟ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಗುರು ಪೂರ್ಣಿಯಂದು ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗ್ಲೈದೆ. ಅದೃಷ್ಟದ ಬೆಂಬಲದಿಂದ ಪ್ರಮುಖ ವಿಚಾರಗಳಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ದೂರದ ಪ್ರಯಾಣ ಫಲಪ್ರದವಾಗಿರುತ್ತದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನೀವು ತಾಳ್ಮೆಯಿಂದ ಭಾವನಾತ್ಮಕವಾಗಿ ಸ್ಥಿರತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ದಿಢೀರ್ ಖರ್ಚುಗಳು ನಿಮ್ಮ ಹಣಕಾಸಿನ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ವೃತ್ತಿಪರ ಜೀವನದಲ್ಲಿ ಸೃಜನಶೀಲ ಅನ್ವೇಷಕರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಲಿದೆ. ನಿಮ್ಮ ಸಂವಹನ ಕೌಶಲ್ಯದಿಂದ ಪ್ರಗತಿಯನ್ನು ಸಾಧಿಸುವಿರಿ. ಜಂಟಿ ಯೋಜನೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಆಸ್ತಿ ವಿವಾದಗಳಲ್ಲಿ ಆಹ್ಲಾದಕರ ಸಮಯವಾಗಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನೀವು ಕಠಿಣ ಪರಿಶ್ರಮದಿಂದ ಮುಂದುವರೆಯುವುದು ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಆದಾಗ್ಯೂ, ನಿಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸ್ವಲ್ಪ ನಿರ್ಲಕ್ಷ್ಯವೂ ಸಹ ನಷ್ಟಕ್ಕೆ ಕಾರಣವಾಗಬಹುದು. ಅಹಂ ಮತ್ತು ಮೊಂಡುತನವನ್ನು ಬಿಟ್ಟು ಮುಂದೆ ಸಾಗಿದರೆ ಮಾತ್ರ ಯಶಸ್ಸು. 

ಇದನ್ನೂ ಓದಿ- 100 ವರ್ಷಗಳ ಬಳಿಕ ಯೌವನಾವಸ್ಥೆಯಲ್ಲಿ ಗುರು ಸಂಚಾರ: ಗುರು ಪೂರ್ಣಿಮಾದಿಂದ ಈ ರಾಶಿಯವರಿಗೆ ಅಷ್ಟೈಶ್ವರ್ಯ, ಬಂಗಾರದ ಸಮಯ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನಿಮ್ಮೊಳಗಿರುವ ಸೃಜನಶೀಲ ಶಕ್ತಿ, ಉತ್ಸಾಹ ಹೆಚ್ಚಾಗಲಿದೆ. ವಿಶೇಷವಾಗಿ ಸಾಮಾಜಿಕ ಬದುಕಿನಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸುವಿರಿ. ನಿಮ್ಮ ಮಾತುಗಳು ಮತ್ತು ಕಾರ್ಯಗಳಿಂದ ಇತರರನ್ನು ಪ್ರೇರೇಪಿಸುವಿರಿ. ಈ ದಿನ ನಿಮ್ಮ ಸಾಮರ್ಥ್ಯ ಬಲವಾಗಿರುತ್ತದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಶಾಂತ ಮತ್ತು ಚಿಂತನಶೀಲವಾಗಿ ಸಾಗಿದರೆ ದಿನಾಂತ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುವಿರಿ. ಸರಿಯಾದ ಹಾದಿಯಲ್ಲಿ ಸ್ಥಿರ ಪ್ರಯತ್ನಗಳನ್ನು ಮುಂದುವರೆಸಿದರೆ ಯಶಸ್ಸು ಕೈ ಹಿಡಿಯಲಿದೆ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕರಾಗಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಲು ಸುಲಭವಾಗುತ್ತದೆ. ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಆರ್ಥಿಕವಾಗಿ ಮುಂದುವರೆಯುವಿರಿ. ಉದ್ಯೋಗ ದೃಷ್ಟಿಯಿಂದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಸಾಮರ್ಥ್ಯ ನಿಮ್ಮನ್ನು ಎತ್ತರಕ್ಕೆ ಬೆಳೆಸಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ವೈಯಕ್ತಿಕ ಮತ್ತು ಆರ್ಥಿಕ ವಿಚಾರಗಳಲ್ಲಿ ಸೊಬಗಿನ ಭಾವನೆ ಇರುತ್ತದೆ. ನಿಮ್ಮ ಗೌರವಾನ್ವಿತ ಮತ್ತು ಚಿಂತನಶೀಲ ನಡವಳಿಕೆ ಇತರರ ಹೃದಯವನ್ನು ಗೆಲ್ಲಲಿದೆ. ಆಸ್ತಿ ವಿಚಾರದಲ್ಲಿ ಆಕರ್ಷಕ ಪ್ರಸ್ತಾಪಗಳನ್ನು ಪಡೆಯುವಿರಿ. ವೃತ್ತಿಪರವಾಗಿ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. 

ಇದನ್ನೂ ಓದಿ- ರಾಶಿಗಳಿಗೆ ಗುರು ಆದಿತ್ಯ ರಾಜಯೋಗ; ಬದಲಾಗುವುದು ಬದುಕು.. ಖುಲಾಯಿಸಲಿದೆ ಅದೃಷ್ಟ, ರಾಜವೈಭೋಗ ಸಂಪತ್ತಿನ ಸುರಿಮಳೆ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಭಾವನಾತ್ಮಕ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರವಾಗಿ ಜವಾಬ್ದಾರಿಗಳನ್ನು ಪೂರೈಸಲು ಭರವಸೆಯಿಂದ ಮುಂದುವರೆಯಿರಿ. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದೆ. ಹಣಕಾಸಿನ ವಿಚಾರಗಳಲ್ಲಿ ಆಶಾದಾಯಕವಾಗಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡುವ ಅಭ್ಯಾಸ ರೂಢಿಸಿಕೊಳ್ಳಿ. ಹಣಕಾಸಿನ ಯೋಜನೆಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ವಿಶೇಷವಾಗಿ ಹೂಡಿಕೆ, ಖರ್ಚಿನ ವಿಷಯಗಳಲ್ಲಿ ಬಜೆಟ್ ಮೀರದಂತೆ ನಿಗಾವಹಿಸಿ. ವೃತ್ತಿಪರವಾಗಿ ಗೊಂದಳಗಳನ್ನು ತಪ್ಪಿಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಉದ್ಯೋಗ ರಂಗದಲ್ಲಿ ನಿಮ್ಮ ಕಾರ್ಯತಂತ್ರ ಯೋಜನೆ, ಪರಿಣಾಮಕಾರಿ ಸಂಭಾಷಣೆಯಿಂದ ಪ್ರಯೋಜನವನ್ನು ಪದ್ಯುವಿರಿ. ಆರ್ಥಿಕವಾಗಿ ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಸಾಮಾಜಿಕವಾಗಿ ನೀವು ಸಕಾರಾತ್ಮಕತೆಯನ್ನು ಅನುಭವಿಸುವಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಧೈರ್ಯದಿಂದಲೇ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಹಿರಿಯರು, ಮಾರ್ಗದರ್ಶಕರ ಬೆಂಬಲವು ನಿಮ್ಮ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಬಂಧಗಳು ಗಟ್ಟಿಯಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More