Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಗುರುವಾರ, ಉ.ಭಾ. ನಕ್ಷತ್ರ, ಸೌಭಾಗ್ಯ ಯೋಗ, ತೈತಿಲ ಕರಣ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಬಜೆಟ್‌ಗೆ ಅನುಗುಣವಾಗಿ ನಿಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಿ. ಇಲ್ಲವೇ, ಭಾರೀ ನಷ್ಟವಾಗುವ ಸಂಭವವಿದೆ. ವೃತ್ತಿಪರ ವಿಚಾರಗಳಲ್ಲಿ ಆತುರತೆ, ಅತಿಯಾದ ಉತ್ಸಾಹವನ್ನೂ ತಪ್ಪಿಸಿ. ಬುದ್ದಿವಂತಿಕೆಯಿಂದ ತಾಳ್ಮೆಯಿಂದ ಮುಂದುವರೆಯುವುದರಿಂದ ಸಮಸ್ಯೆಗಳನ್ನು ತಪ್ಪಿಸಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಆರ್ಥಿಕವಾಗಿ ಪ್ರಗತಿಯನ್ನು ಕಾಣುವಿರಿ. ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ವ್ಯವಹಾರದಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳುವಿರಿ. ಪ್ರಮುಖ ಯೋಜನೆಗಳಲ್ಲಿ ವೇಗವನ್ನು ಕಾಯ್ದುಕೊಳ್ಳುವಿರಿ. ವೃತ್ತಿಪರ ಲಾಭಗಳು ಹೆಚ್ಚಾಗಲಿವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಕುಟುಂಬದ ಹಿರಿಯ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಇದು ಮನಸ್ಸಿಗೆ ಆನಂದದ ಜೊತೆಗೆ ಜೀವನದ ಪ್ರಮುಖ ಪಾಠಗಳ ಅನುಭವವನ್ನೂ ನೀಡಲಿದೆ. ಅನಿರೀಕ್ಷಿತ ಉಡುಗೊರೆಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಪ್ರೀತಿಪಾತ್ರರೊಂದಿಗೆ ಹೊರ ಹೋಗಲು ಯೋಜಿಸಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ನಿಮ್ಮ ಮಾತೇ ನಿಮಗೆ ಬಂಡವಾಳವಾಗಿರಲಿದೆ. ನಿಮ್ಮ ಸಂವಹನ ಕೌಶಲ್ಯಕ್ಕೆ ತಲೆದೂಗದವರೇ ಇಲ್ಲ. ನಿಮ್ಮ ಸ್ವಾಭಿಮಾನ, ಹೆಗಲ ಮೇಲೆ ಗೆಳೆಯರ ಒತ್ತಡ ಇಂದು ಹೆಚ್ಚು ಭಾರವೆನಿಸಬಹುದು. ಎಂತದ್ದೇ ಸಂದರ್ಭದಲ್ಲಿ ನಿಮ್ಮ ತನವನ್ನು ಬಿಟ್ಟುಕೊಡುವ ತಪ್ಪು ಮಾಡಬೇಡಿ.
ಇದನ್ನೂ ಓದಿ- ಉತ್ಕೃಷ್ಟ ರಾಶಿಗೆ ಗುರು ಪ್ರವೇಶ: ಹಂಸ ಮಹಾಪುರುಷ ರಾಜಯೋಗದಿಂದ 3 ರಾಶಿಯವರಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ಬಾಳೇ ಬಂಗಾರ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ವೃತ್ತಿಪರವಾಗಿ ಉತ್ತಮವಾದ ದಿನ. ವೈಯಕ್ತಿಕ ಬದುಕಿನ ಬಗ್ಗೆಯೂ ಕಾಳಜಿ ವಹಿಸುವುದನ್ನು ಮರೆಯಬೇಡಿ. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಬೇರೆಯವರೊಂದಿಗೆ ನಿಮ್ಮ ರಹಸ್ಯ ವಿಚಾರಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳುವವರಿರುತ್ತಾರೆ ಎಚ್ಚರ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಮಸ್ಯೆಗಳು ಬಂದಾಗ ತಾಳ್ಮೆಯಿಂದ ಇದ್ದು ಅವನ್ನು ನಿಭಾಯಿಸಿ. ತಕ್ಷಣದ ಪ್ರತಿಕ್ರಿಯೆಗಳು ನಿಮ್ಮ ಸಮಸ್ಯೆಗಳನ್ನು ಉಲ್ಬಣಿಸಬಹುದು. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳು ಹೊಸ ಪ್ರಸ್ತಾಪಗಳನ್ನು ತರಬಹುದು. ಮುಂದಾಲೋಚನೆ ಮಾಡಿ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ನಿಮ್ಮ ಬೌದ್ಧಿಕ ಸಾಮರ್ಥ್ಯ ಇಂದು ಬೇರೆಯವರನ್ನು ನಿಮ್ಮತ್ತ ಆಕರ್ಷಿಸುತ್ತದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವಿರಿ. ಯಾವುದೇ ಪ್ರಮುಖ ವಿಚಾರಗಳಲ್ಲಿ ಭಾವನಾತ್ಮಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಬದಲಿಗೆ ಸರಿ-ತಪ್ಪುಗಳ ವಿಶ್ಲೇಷಣೆ ಮೂಲಕ ನಿರ್ಧರಿಸುವುದು ಅಗತ್ಯವಾಗಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ನಿಮ್ಮ ಮಿತಿಗಳಿಗೆ ಸೀಮೆಯನ್ನು ಹಾಕಿಕೊಂಡು ಮುಂದುವರೆದರೆ ಯಶಸ್ಸು ಖಂಡಿತ. ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ಒತ್ತಡಭರಿತ ಜೀವನದ ನಡುವೆ ನಿಮಗಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳಿ.
ಇದನ್ನೂ ಓದಿ- 48ಗಂಟೆಗಳಲ್ಲೇ ಖುಲಾಯಿಸುತ್ತೆ ಈ ರಾಶಿಯವರ ಅದೃಷ್ಟ, ಶುಕ್ರ-ಚಂದ್ರ ಯುತಿಯಿಂದ ಬಂಪರ್ ಆದಾಯ, ಸುಖದ ಸುಪ್ಪತ್ತಿಗೆ
ಧನು ರಾಶಿಯವರ ಭವಿಷ್ಯ (Sagittarius Horoscope):
ಯಾವುದೇ ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಮೀರಿ ಅತಿಯಾದ ತೊಂದರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ದೊರೆಯುವ ಸಾಧ್ಯತೆ ಇದ್ದು ಇದು ತುಂಬಾ ವಿಶೇಷ ದಿನ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಹಳೆಯ ಸ್ನೇಹಿತರೊಬ್ಬರು ಭೇಟಿಯಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುರಿ. ನಿಮ್ಮ ಕಾರ್ಯಕ್ಷಮತೆಗೆ, ಸೃಜನಶೀಲತೆಗೆ ಮನ್ನಣೆ ದೊರೆಯಲಿದೆ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಡಿನ್ನರ್ ಗಾಗಿ ಯೋಜಿಸಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ನಿಮ್ಮ ವಾಗ್ಮೀಯತೆಯಿಂದ ಬೇರೆಯವರನ್ನು ಆಕರ್ಷಿಸುವಿರಿ. ನಿಮ್ಮ ಮಾತಿನ ಪರಾಕ್ರಮಕ್ಕೆ ಇತರರು ಮನಸೋಲುವರು. ಸ್ವಭಾವತಃ ಸರಳ ವ್ಯಕ್ತಿಯಾಗಿರುವ ನಿಮ್ಮನ್ನು ಯಾರಾದರೂ ಹಗುರವಾಗಿ ಪರಿಗಣಿಸಲು ಬಿಡಬೇಡಿ. ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯತ್ನಿಸಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಅನಗತ್ಯ ವಿಚಾರಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಎಷ್ಟೇ ಪ್ರಯತ್ನಿಸಿದರೂ, ಶ್ರಮವಹಿಸಿದರೂ ನಿರೀಕ್ಷಿತ ಫಲಿತಾಂಶಗಳು ದೊರೆಯದೆ ಇರುವುದು ನಿಮ್ಮ ಹತಾಷೆಗೆ ಕಾರಣವಾಗಬಹುದು. ನಿಮ್ಮ ಮನಸ್ಸಿನ ನೋವನ್ನು ಪ್ರೀತಿಪಾತ್ರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.