Home> Sports
Advertisement

Vamika Kohli: ಎಷ್ಟು ಚಂದ ನೋಡಿ 'ವಮಿಕಾ' ನೇಮ್ ಪ್ಲೇಟ್..!

ಮೊದಲ ಮಗಳನ್ನು ತಮ್ಮ ಜೀವನದಲ್ಲಿ ಸ್ವಾಗತಿಸಿದ ನಂತರ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಮಗುವಿನ ಜೊತೆ ಎಂಜಾಯ್ ಮಾಡುತ್ತಿದ್ದಾರೆ.

Vamika Kohli: ಎಷ್ಟು ಚಂದ ನೋಡಿ 'ವಮಿಕಾ' ನೇಮ್ ಪ್ಲೇಟ್..!

ಅಹಮದಾಬಾದ್: ಮೊದಲ ಮಗಳನ್ನು ತಮ್ಮ ಜೀವನದಲ್ಲಿ ಸ್ವಾಗತಿಸಿದ ನಂತರ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಮಗುವಿನ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಮಗಳ ಮುಖ ತೋರಿಸದಿದ್ದರೂ ವಮಿಕಾ ಎಂದು ಹೆಸರಿಟ್ಟಿರುವುದಾಗಿ ಈ ಜೋಡಿ ತಿಳಿಸಿದೆ.

ಈ ಮುದ್ದು ವಮಿಕಾಳ(Vamika Kohli) ಹೆಸರಿನಲ್ಲಿ ಈಗಾಗಲೇ ಆಕೆಯದ್ದೇ ನೇಮ್ಪ್ಲೇಟ್ ಕೂಡಾ ಬಂದಾಗಿದೆ. ಅಹಮದಾಬಾದ್ನಲ್ಲಿ ವಮಿಕಾಳ ಹೆಸರಿನ ನೇಮ್ ಪ್ಲೇಟ್ ನೋಡಬಹುದು.

VIDEO: ಮತ್ತೊಮ್ಮೆ ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ ಘರ್ಜಿಸಿದ Yuvraj Singh

ವಿರಾಟ್ ಕೊಹ್ಲಿ(Virat Kohli) ಮತ್ತು ಅವರ ತಂಡವು ಇಂಗ್ಲೆಂಡ್‌ನೊಂದಿಗೆ ನಡೆಯುತ್ತಿರುವ ಸರಣಿಯಲ್ಲಿ ಬ್ಯುಸಿ ಇದ್ದು ಅಹಮದಾಬಾದ್‌ನಲ್ಲಿ ಉಳಿದುಕೊಂಡಿದ್ದರು. ಆಟಗಾರರಿಗೆ ಮನೆಯಲ್ಲಿ ಇರುವಂತಹ ಅನುಭವ ನೀಡಲು ಹೋಟೆಲ್ ನಿರ್ಧರಿಸಿತ್ತು.

Road Safety World Series T20 2020-21: ಇಂಡಿಯಾ ಲೆಜೆಂಡ್ಸ್ ಗೆ 12 ರನ್ ಗಳ ಗೆಲುವು

ಹೋಟೆಲ್ ನಿರ್ವಹಣೆ ಕೋಣೆಯ ಸಂಖ್ಯೆಯ ಬದಲಾಗಿ ಆಟಗಾರರ ಮತ್ತು ಅವರ ಕುಟುಂಬ ಸದಸ್ಯರ ನಾಮ ಫಲಕಗಳೊಂದಿಗೆ ಬದಲಾಯಿಸಲಾಗಿತ್ತು. ಕ್ಯಾಪ್ಟನ್ ಕೊಹ್ಲಿಯ ಕೋಣೆಯ ಹೊರಗಿನ ಮುದ್ದಾದ ನಾಮಫಲಕವು ವಮಿಕಾ, ಅನುಷ್ಕಾ(Anushka sharma) ಮತ್ತು ವಿರಾಟ್ ಎಂಬ ಮೂರು ಹೆಸರುಗಳನ್ನು ಹೊಂದಿತ್ತು.

ICC Rankings:ಟಾಪ್ 5 ಗೆ ಏರಿದ ವಿರಾಟ್ ಕೊಹ್ಲಿ, ಕುಸಿದ ಕೆ.ಎಲ್.ರಾಹುಲ್ ರ್ಯಾಂಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More