ICC CEO Sanjog Gupta: ಭಾರತೀಯ ಮಾಧ್ಯಮದ ಅನುಭವಿ ಸಂಜೋಗ್ ಗುಪ್ತಾ ಅವರನ್ನು ಸೋಮವಾರ ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ಅವರ ಬದಲಿಗೆ, ಸಂಜೋಗ್ ಅಧಿಕಾರ ಸ್ವೀಕರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಈ ವರ್ಷದ ಆರಂಭದಲ್ಲಿ ಜೆಫ್ ಅಲಾರ್ಡೈಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ಅವರು 4 ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು.
ಇದನ್ನೂ ಓದಿ: ಸಕ್ಕರೆ ಮಟ್ಟವನ್ನ ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರ.. ಮಧುಮೇಹ ರೋಗಗಳಿಗೆ ದಿವ್ಯೌಷಧಿ!!
ಸಂಜೋಗ್ ಗುಪ್ತಾ ಪ್ರಸ್ತುತ ಜಿಯೋಸ್ಟಾರ್‌ನಲ್ಲಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ವಿವಿಧ ಕಾರ್ಯಗಳ ಅನುಭವವಿದೆ. ಸಂಜೋಯ್ ಗುಪ್ತಾ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಸಂಜೋಗ್ ಗುಪ್ತಾ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. 2010 ರಲ್ಲಿ ಸ್ಟಾರ್ ಇಂಡಿಯಾ (ಈಗ ಜಿಯೋಸ್ಟಾರ್) ಸೇರಿದರು. 2020 ರಲ್ಲಿ ಡಿಸ್ನಿ ಮತ್ತು ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ಮುಖ್ಯಸ್ಥರಾಗಿ ನೇಮಕಗೊಂಡರು.
2024 ರ ನವೆಂಬರ್‌ನಲ್ಲಿ ವಯಾಕಾಮ್18 ಮತ್ತು ಡಿಸ್ನಿ ಸ್ಟಾರ್ ವಿಲೀನದ ನಂತರ ಸಂಜೋಗ್ ಗುಪ್ತಾ ಅವರನ್ನು ಜಿಯೋಸ್ಟಾರ್ ಸ್ಪೋರ್ಟ್ಸ್‌ನ ಸಿಇಒ ಆಗಿ ನೇಮಿಸಲಾಯಿತು. ಐಸಿಸಿಯ ಸಿಇಒ ಹುದ್ದೆಯನ್ನು ಈ ಹಿಂದೆ ಆಸ್ಟ್ರೇಲಿಯಾದ ಡೇವಿಡ್ ರಿಚರ್ಡ್ಸ್, ಮಾಲ್ಕಮ್ ಸ್ಪೀಡ್ ಮತ್ತು ಅಲಾರ್ಡೈಸ್, ದಕ್ಷಿಣ ಆಫ್ರಿಕನ್ನರಾದ ಡೇವಿಡ್ ರಿಚರ್ಡ್ಸನ್ ಮತ್ತು ಆರನ್ ಲೋರ್ಗಟ್ ಮತ್ತು ಭಾರತದಲ್ಲಿ ಜನಿಸಿದ ಮನು ಸಾಹ್ನಿ ನಿರ್ವಹಿಸಿದ್ದಾರೆ.
ತಮ್ಮ ನೇಮಕಾತಿಯ ಕುರಿತು ಸಂಜೋಗ್ ಗುಪ್ತಾ ಮಾತನಾಡಿ, 'ವಿಶೇಷವಾಗಿ ಕ್ರಿಕೆಟ್ ಅಭೂತಪೂರ್ವ ಬೆಳವಣಿಗೆಗೆ ಸಜ್ಜಾಗಿರುವ ಮತ್ತು ವಿಶ್ವಾದ್ಯಂತ ಸುಮಾರು 2 ಬಿಲಿಯನ್ ಅಭಿಮಾನಿಗಳ ಉತ್ಸಾಹಭರಿತ ಬೆಂಬಲವನ್ನು ಹೊಂದಿರುವ ಸಮಯದಲ್ಲಿ ಈ ಅವಕಾಶ ಸಿಗುವುದು ಒಂದು ಸೌಭಾಗ್ಯ. ಪ್ರಮುಖ ಕಾರ್ಯಕ್ರಮಗಳ ಪ್ರಾಮುಖ್ಯತೆ ಹೆಚ್ಚುತ್ತಿರುವುದರಿಂದ, ವ್ಯಾಪಾರ ಅವಕಾಶಗಳು ಬೆಳೆಯುತ್ತಿರುವುದರಿಂದ ಮತ್ತು ಮಹಿಳಾ ಕ್ರೀಡೆಗಳಂತಹ ಅವಕಾಶಗಳು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ ಇದು ಕ್ರೀಡೆಗೆ ರೋಮಾಂಚಕಾರಿ ಸಮಯ. ಲಾಸ್ ಏಂಜಲೀಸ್ 2028 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮತ್ತು ತಂತ್ರಜ್ಞಾನದ ತ್ವರಿತ ಬೆಳವಣಿಗೆ/ಅಳವಡಿಕೆಯು ಪ್ರಪಂಚದಾದ್ಯಂತ ಕ್ರಿಕೆಟ್ ಆಂದೋಲನವನ್ನು ಬಲಪಡಿಸಲು ಸಹಾಯ ಮಾಡುತ್ತದೆ" ಎಂದರು.
ಇದನ್ನೂ ಓದಿ: 30-32ನೇ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡದಿಂದ ಹೆಚ್ಚಾಗ್ತಿದೆ ಪಾರ್ಶ್ವವಾಯು ಭಯ!! ನಿರ್ಲಕ್ಷ್ಯ ಬೇಡ
ಸಂಜೋಗ್ ಗುಪ್ತಾ ಐಸಿಸಿಯ ಏಳನೇ ಸಿಇಒ ಆಗಲಿದ್ದಾರೆ. ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯು ಈ ಹುದ್ದೆಗೆ 25 ದೇಶಗಳಿಂದ 2,500 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಅದರಲ್ಲಿ 12 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಐಸಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 'ಅಭ್ಯರ್ಥಿಗಳಲ್ಲಿ ಆಟದ ಆಡಳಿತ ಮಂಡಳಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಾರ್ಪೊರೇಟ್ ಪ್ರಪಂಚದ ಹಿರಿಯ ಅಧಿಕಾರಿಗಳು ಸೇರಿದ್ದಾರೆ' ಎಂದು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ