Home> Sports
Advertisement

ಸಚಿನ್‌ ಪುತ್ರಿಯ ಹೊಸ ಹೆಜ್ಜೆ... ಐಪಿಎಲ್‌ ಮಧ್ಯೆಯೇ ಮುಂಬೈ ಫ್ರಾಂಚೈಸಿ ಖರೀದಿಸಿದ ಸಾರಾ ತೆಂಡೂಲ್ಕರ್‌! ಈಕೆ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

Sara Tendulkar Net Worth: ಇದು GEPL ನ ಎರಡನೇ ಸೀಸನ್. ಈ ಆಟವನ್ನು ರಿಯಲ್ ಕ್ರಿಕೆಟ್‌ನಲ್ಲಿ ಆಡಲಾಗುತ್ತದೆ. ಇದನ್ನು 300 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದ್ದು, ಈ ಸೀಸನ್ ಮೇ 2025 ರಲ್ಲಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಸಚಿನ್‌ ಪುತ್ರಿಯ ಹೊಸ ಹೆಜ್ಜೆ... ಐಪಿಎಲ್‌ ಮಧ್ಯೆಯೇ ಮುಂಬೈ ಫ್ರಾಂಚೈಸಿ ಖರೀದಿಸಿದ ಸಾರಾ ತೆಂಡೂಲ್ಕರ್‌! ಈಕೆ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

Sara Tendulkar Net Worth: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್, ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (GEPL) ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಡಿಜಿಟಲ್ ಮನರಂಜನೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೆಸಿಸ್‌ನಿಂದ ನಡೆಸಲ್ಪಡುವ ಜಿಇಪಿಎಲ್‌ನ್ನು ವಿಶ್ವದ ಅತಿದೊಡ್ಡ ಇ-ಕ್ರಿಕೆಟ್ ಮತ್ತು ಮನರಂಜನಾ ಲೀಗ್ ಎಂದು ಪರಿಗಣಿಸಲಾಗಿದೆ.

ಇದು GEPL ನ ಎರಡನೇ ಸೀಸನ್. ಈ ಆಟವನ್ನು ರಿಯಲ್ ಕ್ರಿಕೆಟ್‌ನಲ್ಲಿ ಆಡಲಾಗುತ್ತದೆ. ಇದನ್ನು 300 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದ್ದು, ಈ ಸೀಸನ್ ಮೇ 2025 ರಲ್ಲಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ:  ಡ್ರೆಸ್ ಚೇಂಜ್ ಮಾಡುವಾಗ ವ್ಯಾನಿಟಿ ವಾನ್‌ಗೆ ನುಗ್ಗಿದ ನಿರ್ದೇಶಕ... ಬಣ್ಣದ ಲೋಕದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

ಇದೀಗ ಈ ಲೀಗ್‌ನಲ್ಲಿ ಮುಂಬೈ ಫ್ರಾಂಚೈಸಿಯನ್ನೇ ಸಾರಾ ತೆಂಡೂಲ್ಕರ್ ಖರೀದಿಸಿದ್ದಾರೆ. ಈ ಮೂಲಕ ಕ್ರಿಕೆಟ್‌ ಮೇಲೆ ಅವರಿಗಿರುವ ಉತ್ಸಾಹ ಎಂತಹದ್ದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ವಿಚಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್, 'ಕ್ರಿಕೆಟ್ ನಮ್ಮ ಕುಟುಂಬದ ಅವಿಭಾಜ್ಯ ಅಂಗ. ಇ-ಸ್ಪೋರ್ಟ್ಸ್‌ನಲ್ಲಿ ಅದರ ಸಾಧ್ಯತೆಗಳನ್ನು ಅನ್ವೇಷಿಸುವುದು ರೋಮಾಂಚನಕಾರಿಯಾಗಿದೆ. ಜಿಇಪಿಎಲ್‌ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಹೊಂದುವುದು ನನ್ನ ಕನಸು ನನಸಾಗಿದೆ. ಕ್ರೀಡೆ ಮತ್ತು ನಗರದ ಮೇಲಿನ ನನ್ನ ಪ್ರೀತಿಯನ್ನು ಇದು ಒಟ್ಟುಗೂಡಿಸುತ್ತದೆ. ಸ್ಪೂರ್ತಿದಾಯಕ ಮತ್ತು ಮನರಂಜನೆಯ ಇ-ಸ್ಪೋರ್ಟ್ಸ್ ಫ್ರಾಂಚೈಸ್ ಅನ್ನು ನಿರ್ಮಿಸಲು ನಮ್ಮ ಪ್ರತಿಭಾನ್ವಿತ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

ಇನ್ನು ಈ ಸಮಯದಲ್ಲಿ ಸಾರಾ ಅವರ ಶಿಕ್ಷಣ ಮತ್ತು ಆಸ್ತಿ ಮೌಲ್ಯದ ಚರ್ಚೆ ಕೇಳಿಬರುತ್ತಿದೆ. ಸಾರಾ ತೆಂಡೂಲ್ಕರ್ ತಮ್ಮ ಫ್ಯಾಷನ್ ಸೆನ್ಸ್ ಮತ್ತು ಉದ್ಯಮಶೀಲತಾ ಬುದ್ಧಿವಂತಿಕೆಗೆ ಹೆಸರುವಾಸಿಯಾಗುವ ಮೊದಲು, ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಮುಂಬೈನ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಅದಾದ ಬಳಿಕ ಲಂಡನ್‌ ಯೂನಿವರ್ಸಿಟಿಯಲ್ಲಿ ಕ್ಲಿನಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಪೋಷಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಉನ್ನು ಈ ಕಾಲೇಜಿನ ಫೀಸ್‌ ನೋಡಿದರೆ ಆಶ್ಚರ್ಯವಾಗದೆ ಇರದು.

ವಿಶ್ವದ ಅತ್ಯಂತ ದುಬಾರಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಲಂಡನ್‌ ಯೂನಿವರ್ಸಿಟಿಯಲ್ಲಿ, ಮೂರರಿಂದ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್ ಮಾಡಿದರೆ, ನೀವು ಪ್ರತಿ ವರ್ಷ 30 ರಿಂದ 35 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ನಾಲ್ಕು ವರ್ಷಗಳ ಕೋರ್ಸ್‌ಗೆ ನೀವು ಸುಮಾರು 1.40 ಕೋಟಿ ರೂಪಾಯಿ ಪಾವತಿಸಿದಂತಾಗುತ್ತದೆ. ಇದರ ಹೊರತಾಗಿ ವಸತಿ ಮತ್ತು ಆಹಾರದ ವೆಚ್ಚಗಳಿವೆ.

ಸಾರಾ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಪ್ರತಿಷ್ಠಿತ ಕ್ರಿಕೆಟಿಗರಲ್ಲಿ ಒಬ್ಬರ ಮಗಳಾಗಿದ್ದರೂ, ತನ್ನದೇ ಆದ ಗುರುತನ್ನು ಸ್ಥಾಪಿಸಿರುವುದು ಸುಳ್ಳಲ್ಲ. ಕೇವಲ 27 ನೇ ವಯಸ್ಸಿನಲ್ಲಿ, ಈಗಾಗಲೇ ಲಕ್ಷಾಂತರ ಮೌಲ್ಯದ ವ್ಯವಹಾರವನ್ನು ನಡೆಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 2023 ರಲ್ಲಿ ಅವರ ನಿವ್ವಳ ಮೌಲ್ಯವು 50 ಲಕ್ಷದಿಂದ 1 ಕೋಟಿ ರೂ.ಗಳ ನಡುವೆ ಇತ್ತು.  

ಅವರ ಆದಾಯದ ಮುಖ್ಯ ಮೂಲವೆಂದರೆ ಆನ್‌ಲೈನ್ ಸ್ಟೋರ್, "ಸಾರಾ ತೆಂಡೂಲ್ಕರ್ ಶಾಪ್". ಇನ್ನು ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟೀವ್‌ ಇರುವ ಸಾರಾ, Instagram ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವ್ಯವಹಾರ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರಂಗಳನ್ನು ಬಳಸುತ್ತಿದ್ದಾರೆ. ಇದಷ್ಟೇ ಅಲ್ಲದೆ, 2021 ರಲ್ಲಿ ಅಜಿಯೊ ಲಕ್ಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸಾರಾ, ಪ್ರಸ್ತುತ ಭಾರತ ಮತ್ತು ವಿದೇಶಗಳಲ್ಲಿ ರ‍್ಯಾಂಪ್‌ ವಾಕ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಾಣಕ್ಕಿಂತ ಹೆ್ಚ್ಚಾಗಿ ಪ್ರೀತಿಸಿ ಮದುವೆಯಾಗಿ ಸುಂದರ ಕನಸ್ಸು ಕಟ್ಟಿಕೊಂಡಿದ್ದ.. ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶ ನೀಡಿ ದಿವಾಳಿಯಾದ ಸ್ಟಾರ್‌ ನಟ!   

ಸಾರಾ ತೆಂಡೂಲ್ಕರ್ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, ಅಕ್ಟೋಬರ್ 12, 1997 ರಂದು ಸಚಿನ್ ಮತ್ತು ಡಾ. ಅಂಜಲಿ ತೆಂಡೂಲ್ಕರ್ ದಂಪತಿ ಮಗಳಾಗಿ ಜನಿಸಿದರು. ಅವರ ಕಿರಿಯ ಸಹೋದರ ಅರ್ಜುನ್.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More