Unheard Love Story: ಸಚಿನ್ ತೆಂಡೂಲ್ಕರ್ ಎಂದರೆ ಭಾರತದ ಕ್ರಿಕೆಟ್ ಲೋಕದ ದಂತಕತೆ. ಆದರೆ ಅವರ ಯಶಸ್ಸಿನ ಹಿಂದೆ ಇರುವ ಶಕ್ತಿ, ಅವರ ಪತ್ನಿ ಅಂಜಲಿ ಮೆಹ್ತಾ ಬಗ್ಗೆ ಎಷ್ಟು ಜನಕ್ಕೆ ಗೊತ್ತು ನೀವೇ ಹೇಳಿ? ಹಾಗಾಗಿ ಇವತ್ತು ನಾವು ಅಂಜಲಿಯವರ ಜೀವನದ ಬಗ್ಗೆ ಹೇಳುತ್ತೇವೆ.
ಅಂಜಲಿ ತೆಂಡೂಲ್ಕರ್, ಮೂಲತಃ ಅಂಜಲಿ ಮೆಹ್ತಾ, 1967ರ ನವೆಂಬರ್ 10ರಂದು ಜನಿಸಿದರು. ಇವರ ತಂದೆ ಆನಂದ್ ಮೆಹ್ತಾ ಒಬ್ಬ ಯಶಸ್ವಿ ಗುಜರಾತಿ ಉದ್ಯಮಿ, ತಾಯಿ ಆನ್ನಾಬೆಲ್ ಮೆಹ್ತಾ ಬ್ರಿಟಿಷ್ ಮೂಲದವರು. ಇಂಗ್ಲೆಂಡ್‌ನಲ್ಲಿ ತಮ್ಮ ಬಾಲ್ಯವನ್ನು ಕಳೆದ ಅಂಜಲಿ, ಭಾರತಕ್ಕೆ ಬಂದ ಮೇಲೆ ತಮ್ಮ ಜೀವನವನ್ನು ಹೊಸ ರೀತಿಯಲ್ಲಿ ರೂಪಿಸಿಕೊಂಡರು. ಚಿಕ್ಕವರಿದ್ದಾಗ ಇವರಿಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಇರಲಿಲ್ಲ, ಆದರೆ ಆಕಸ್ಮಿಕ ಎನ್ನುವಂತೆ ಅವರು ಮುಂದೆ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಇಷ್ಟಪಟ್ಟು ಮದುವೆಯಾದರು.
ವಿಮಾನ ನಿಲ್ದಾಣದಲ್ಲಿ ಸಚಿನ್ ಭೇಟಿಯಾದ ಅಂಜಲಿ..!
ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದ ಅಂಜಲಿ, ಮುಂಬೈನ ಜೆ.ಜೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿ, ತಮ್ಮ ವೃತ್ತಿಯಲ್ಲಿ ಒಬ್ಬ ಯಶಸ್ವಿ ಶಿಶುವೈದ್ಯರಾದರು. ಆದರೆ ಜೀವನದ ಒಂದು ತಿರುವಿನಲ್ಲಿ, 1990ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸಚಿನ್ ತೆಂಡೂಲ್ಕರ್‌ರನ್ನು ಮೊದಲ ಬಾರಿಗೆ ಭೇಟಿಯಾದರು. ಮೊದಲ ಭೇಟಿಯಲ್ಲಿಯೇ ಸಚಿನ್ ಅವರನ್ನು ಅಂಜಲಿ ಇಷ್ಟಪಟ್ಟಿದ್ದರು ಅದರಲ್ಲೂ ಸಚಿನ್ ಅವರ ಸರಳತೆ ಮತ್ತು ಮುಗ್ದತೆ ಇಷ್ಟವಾಗಿ 1995ರಲ್ಲಿ ಸಚಿನ್ ಮತ್ತು ಅಂಜಲಿ ಮದುವೆಯಾದರು.
ಅಂಜಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಬಿಟ್ಟು, ಸಚಿನ್‌ರ ಕ್ರಿಕೆಟ್ ಪಯಣದಲ್ಲಿ ಅವರಿಗೆ ಬೆಂಬಲವಾಗಿ ನಿಂತರು. ಇವರಿಗೆ ಸಾರಾ ಮತ್ತು ಅರ್ಜುನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.ಸಚಿನ್ ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಓಡಾಡುತ್ತಿದ್ದಾಗ, ಅಂಜಲಿ ಮನೆಯನ್ನು ಸಂಭಾಳಿ, ಮಕ್ಕಳನ್ನು ಬೆಳೆಸಿ, ಅವರಿಗೆ ಒಂದು ಸ್ಥಿರ ಬದುಕನ್ನು ಕೊಟ್ಟರು. ಇದರ ಜೊತೆಗೆ, ಅವರು ದಾನಧರ್ಮದ ಕೆಲಸಗಳಲ್ಲೂ ತೊಡಗಿಸಿಕೊಂಡರು.ಅಂಜಲಿಯವರ ಒಟ್ಟು ಆಸ್ತಿ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ, ಸಚಿನ್ ಜೊತೆಗೆ ಇವರ ಜೀವನ ಐಷಾರಾಮಿ ಮತ್ತು ಸರಳತೆಯ ಸಮತೋಲನವನ್ನು ಹೊಂದಿದೆ ಎನ್ನಬಹುದು. ಇವರ ಮುಂಬೈನ ಬಾಂದ್ರಾದ ಮನೆ ಇಂದಿಗೂ ಒಂದು ಐಕಾನಿಕ್ ಸ್ಥಳವಾಗಿದೆ.
ಒಬ್ಬ ಯಶಸ್ವಿ ವೈದ್ಯೆಯಾಗಿದ್ದವರು, ತಮ್ಮ ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ, ಭಾರತದ ಕ್ರಿಕೆಟ್ ದೇವರಿಗೆ ಜೀವನದ ಆಧಾರವಾಗಿರುವ ಅಂಜಲಿ ಮೆಹ್ತಾ ಅವರ ಜೀವನ ಕಥೆ ಕತೆ ನಿಜಕ್ಕೂ ಒಂದು ರೋಚಕ ಸಿನಿಮಾ ಸ್ಟೋರಿಗಿಂತಲೂಕಡಿಮೆಯೇನಿಲ್ಲ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.