ODI World Cup 2027: ಐಸಿಸಿ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಭಾರತದ ಹಿರಿಯ ಆಟಗಾರ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಆಡಿದ ನಂತರ ನಿವೃತ್ತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈಗ ಬರುತ್ತಿರುವ ವರದಿಗಳ ಪ್ರಕಾರ, ಶೀಘ್ರದಲ್ಲೇ ರೋಹಿತ್ ಶರ್ಮಾರನ್ನ ಏಕದಿನ ನಾಯಕತ್ವ ಪಟ್ಟದಿಂದ ಕೆಳಗಿಳಿಸಲಾಗುತ್ತದೆ. ಶ್ರೇಯಸ್ ಅಯ್ಯರ್‌ನನ್ನು ಏಕದಿನ ತಂಡದ ನಾಯಕರನ್ನಾಗಿ, ಹಾರ್ದಿಕ್ ಪಾಂಡ್ಯರನ್ನ ಉಪನಾಯಕರನ್ನಾಗಿ ನೇಮಿಸಬಹುದು ಎಂದು ಹೇಳಲಾಗಿದೆ. ಅದೇ ರೀತಿ ಹಿಟ್‌ಮ್ಯಾನ್ ಬದಲಿಗೆ ಯುವ ಆಟಗಾರನಿಗೆ ಆರಂಭಿಕ ಆಟಗಾರನಾಗಿ ಬಡ್ತಿ ನೀಡಬಹುದು.
ರೋಹಿತ್ ಶರ್ಮಾ ಬದಲಿಗೆ ಈ ಆಟಗಾರನಿಗೆ ಅವಕಾಶ
ಟಿ-20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದ ನಾಯಕ ರೋಹಿತ್ ಶರ್ಮಾ ಶೀಘ್ರದಲ್ಲೇ ಏಕದಿನ ಪಂದ್ಯಗಳಲ್ಲಿಯೂ ನಾಯಕತ್ವವನ್ನು ಕಳೆದುಕೊಳ್ಳಬಹುದು. ಹಿಟ್‌ಮ್ಯಾನ್ ತನ್ನ ಬ್ಯಾಟ್‌ನಿಂದ ರನ್ ಗಳಿಸದಿರಲು ಕಷ್ಟಪಡುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿಯೂ ನಾಯಕತ್ವ ತ್ಯಜಿಸಲು ರೋಹಿತ್ ಶರ್ಮಾ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ವರದಿಗಳಿವೆ. ಇದರಿಂದ ಅವರು ಸಂಪೂರ್ಣವಾಗಿ ನಿವೃತ್ತರಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯುವ ಆರಂಭಿಕ ಆಟಗಾರ ರೋಹಿತ್ ಬದಲಿಗೆ ಯಶಸ್ವಿ ಜೈಸ್ವಾಲ್‌ಗೆ ಆರಂಭಿಕ ಆಟಗಾರನಾಗಿ ಬಡ್ತಿ ನೀಡಬಹುದು.
ನಾಯಕ ಮತ್ತು ಉಪನಾಯಕ ಯಾರು?
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹಿಂದಿನ ಐಸಿಸಿ ಈವೆಂಟ್‌ಗಳಲ್ಲಿ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೇಯಸ್ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಂಡಕ್ಕಾಗಿ ಕೆಲವು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದರು. ಅದೇ ರೀತಿ ಏಕದಿನ ಸ್ವರೂಪದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದರು. ರೋಹಿತ್ ಬದಲಿಗೆ ಶ್ರೇಯಸ್ ಅವರಿಗೆ ಏಕದಿನ ತಂಡದ ಜವಾಬ್ದಾರಿ ಹಸ್ತಾಂತರಿಸಲು ಬಿಸಿಸಿಐ ಪರಿಗಣಿಸುತ್ತಿದೆ ಎಂಬ ವರದಿಗಳಿವೆ. ಶ್ರೇಯಸ್ ತಮ್ಮ ನಾಯಕತ್ವದಿಂದಲೂ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅದೇ ರೀತಿ ನಿರ್ಣಾಯಕ ಪಂದ್ಯಗಳಲ್ಲಿ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಲ್‌ರೌಂಡರ್ ಹಾರ್ದಿಕ್‌ರನ್ನ ಏಕದಿನ ತಂಡದ ಉಪನಾಯಕರನ್ನಾಗಿ ನೇಮಿಸಬಹುದು.
ಶ್ರೇಯಸ್ ನಾಯಕತ್ವದಲ್ಲಿ 2027ರ ಏಕದಿನ ವಿಶ್ವಕಪ್?
ಒತ್ತಡದಿಂದ ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದರೆ, ಶ್ರೇಯಸ್ ಅಯ್ಯರ್ ನಾಯಕನಾಗುವುದು ಬಹುತೇಕ ಖಚಿತ. ಅದೇ ರೀತಿ 2027 ರ ಏಕದಿನ ವಿಶ್ವಕಪ್ ಬಗ್ಗೆ ಮಾತನಾಡುವುದಾದರೆ, ಯುವ ಆಟಗಾರರಾದ ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆಯಬಹುದು. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ನೋಡಿದರೆ, ಅವರು ಟೀಂ ಇಂಡಿಯಾದ ಭಾಗವಾಗುತ್ತಾರೆ ಎಂದು ಹೇಳಬಹುದು.
ಇದನ್ನೂ ಓದಿ: ಕ್ರಿಕೆಟ್ ಜಗತ್ತೇ ನಡುಗಿಸಿದ ಐಸಿಸಿ ನಿರ್ಧಾರ... ದಕ್ಷಿಣ ಆಫ್ರಿಕಾ ತಂಡ ಬರೋಬ್ಬರಿ 21 ವರ್ಷ ನಿಷೇಧಕ್ಕೊಳಗಾಗಿದ್ದೇಕೆ?
2027ರ ವಿಶ್ವಕಪ್‌ಗೆ ಟೀಂ ಇಂಡಿಯಾ ಸಂಭಾವ್ಯ ಆಟಗಾರರು
ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ (ಉಪನಾಯಕ), ತಿಲಕ್ ವರ್ಮಾ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಿರಾಜ್ ಅಹ್ಮದ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ