BSNL Dhamaka Offer: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್-ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಹೋಳಿ ಧಮಾಕ ಆಫರ್ ಘೋಷಿಸಿದ್ದು ಮೊದಲಿಗಿಂತ ಹೆಚ್ಚಿನ ಮಾನ್ಯತೆಯೊಂದಿಗೆ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿಸಿರುವ ಬಿಎಸ್‌ಎನ್‌ಎಲ್, ಇದೀಗ ಮತ್ತೊಮ್ಮೆ ಏರ್ಟೆಲ್, ಜಿಯೋ, ವಿಐ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡಿದೆ. ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯಲ್ಲಿ ದೀರ್ಘಾವಧಿ ಮಾನ್ಯತೆಯ ರಿಚಾರ್ಜ್ ಯೋಜನೆ ಪರಿಚಯಿಸುವ ಮೂಲಕ ಮತ್ತೊಮ್ಮೆ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.
ಇದನ್ನೂ ಓದಿ- ಜಿಯೋ ಗ್ರಾಹಕರಿಗೆ ಮುಖೇಶ್ ಅಂಬಾನಿಯಿಂದ ಬಂಪರ್ ಗಿಫ್ಟ್! ಏರ್‌ಟೆಲ್‌ಗಿಂತಲೂ 50ರೂ. ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ರಿಲೀಸ್
ಬಿಎಸ್‌ಎನ್‌ಎಲ್ ಹೋಳಿ ಧಮಾಕ ಆಫರ್:
ವಾಸ್ತವವಾಗಿ, ಬಿಎಸ್‌ಎನ್‌ಎಲ್ ಹೊಸ ಯೋಜನೆಯನ್ನು ಪರಿಚಯಿಸಿಲ್ಲ. ಬದಲಿಗೆ ಈ ಹಿಂದೆ ಪರಿಚಯಿಸಿದ್ದ ವ್ಯಾಲಿಡಿಟಿ ಪ್ಯಾಕ್ ನಲ್ಲೇ ಹೆಚ್ಚುವರಿ ಮಾನ್ಯತೆ ನೀಡುವುದಾಗಿ ಘೋಷಿಸಿದೆ. ದಿನಕ್ಕೆ 6ರೂ.ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ 30ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುವುದಾಗಿ ಬಿಎಸ್‌ಎನ್‌ಎಲ್ ತಿಳಿಸಿದೆ.
More colors, more fun, and now more validity!
Get unlimited calls, 2GB data per day, and 100 SMS per day for 425 days, not just 395! All for just ₹2399!
#BSNLIndia #HoliDhamaka #BSNLOffers pic.twitter.com/gZ7GfdnMOK
— BSNL India (@BSNLCorporate) March 3, 2025
ಬಿಎಸ್‌ಎನ್‌ಎಲ್ 2,399ರೂ. ಯೋಜನೆಯಲ್ಲಿ (ದಿನಕ್ಕೆ 6ರೂ.ಗಿಂತಲೂ ಕಡಿಮೆ) ಈ ಮೊದಲು 395ದಿನಗಳ ಮಾನ್ಯತೆ ನೀಡಲಾಗಿತ್ತು. ಇದೀಗ, ಬಿಎಸ್‌ಎನ್‌ಎಲ್ ನ ಈ ಪ್ಲಾನ್ 425ದಿನಗಳ ಮಾನ್ಯತೆಯೊಂದಿಗೆ ಸಿಗಲಿದೆ.
ಇದನ್ನೂ ಓದಿ- Jio ಧಮಾಕಾ ಆಫರ್: ಈ ರಿಚಾರ್ಜ್ ಯೋಜನೆಗಳಲ್ಲಿ ನಿತ್ಯ 3GB ಡೇಟಾ, ಫ್ರೀ ನೆಟ್‌ಫ್ಲಿಕ್ಸ್ ಎಲ್ಲವೂ ಲಭ್ಯ
ಬಿಎಸ್‌ಎನ್‌ಎಲ್ 2,399ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನ:
ಬಿಎಸ್‌ಎನ್‌ಎಲ್ 2,399ರೂ. ಪ್ರಿಪೇಯ್ಡ್ ಪ್ಲಾನ್ ನ ಪ್ರಯೋಜನಗಳೆಂದರೆ, ಇದರಲ್ಲಿ ಸಂಪೂರ್ಣ 425ದಿನಗಳವರೆಗೆ ಅನಿಯಮಿತ ಕರೆ, ನಿತ್ಯ 100 ಉಚಿತ ಎಸ್ಎಂಎಸ್ಅಲ್ಲದೆ ನಿತ್ಯ 2ಜಿಬಿ ಹೈಸ್ಪೀಡ್ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದಲ್ಲದೆ, ಮೊಬೈಲ್ ಬಳಕೆದಾರರಿಗೆ BiTVಗೆ ಉಚಿತ ಚಂದಾದಾರಿಕೆ ಜೊತೆಗೆ ಹಲವು ಓಟಿಟಿ ಅಪ್ಲಿಕೇಶನ್‌ಗಳಿಗೂ ಉಚಿತ ಪ್ರವೇಶ ಕೂಡ ಸಿಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.