OnePlus Nord 5 Series: ಒನ್‌ಪ್ಲಸ್ ತನ್ನ ಮೂರು ಸಾಧನಗಳಾದ ನಾರ್ಡ್ 5, ನಾರ್ಡ್ CE 5 ಮತ್ತು ಬಡ್ಸ್ 4 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಒನ್‌ಪ್ಲಸ್‌ನ ಈ ಎರಡೂ ಫೋನ್‌ಗಳು ಶಕ್ತಿಯುತ ಬ್ಯಾಟರಿ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಒನ್‌ಪ್ಲಸ್ ನಾರ್ಡ್ 5 ಮತ್ತು ಒನ್‌ಪ್ಲಸ್ ನಾರ್ಡ್ CE 5ರ ಹಿಂಭಾಗದಲ್ಲಿ ಹೊಸ ಕ್ಯಾಮೆರಾ ವಿನ್ಯಾಸವನ್ನು ಕಾಣಬಹುದು. ಇವು ಕಳೆದ ವರ್ಷ ಬಿಡುಗಡೆಯಾದ ನಾರ್ಡ್ 4 ಮತ್ತು ನಾರ್ಡ್ CE 4ರ ಅಪ್‌ಡೇಟ್ ಆವೃತ್ತಿಗಳಾಗಿವೆ. ಇದಲ್ಲದೆ ಕಂಪನಿಯು ಒನ್‌ಪ್ಲಸ್ ಬಡ್ಸ್ 4 ಅನ್ನು ಸಹ ಪರಿಚಯಿಸಿದೆ.
ಬೆಲೆ ಎಷ್ಟು?
ಒನ್‌ಪ್ಲಸ್ ನಾರ್ಡ್ 5 ಮತ್ತು ನಾರ್ಡ್ CE 5 ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ನಾರ್ಡ್ 5 ಅನ್ನು 8 GB RAM + 256 GB, 12 GB RAM + 256 GB ಮತ್ತು 12 GB RAM + 512 GBಗಳಲ್ಲಿ ಪರಿಚಯಿಸಲಾಗಿದೆ. ಇದರ ಆರಂಭಿಕ ಬೆಲೆ 31,999 ರೂ. ಆಗಿದೆ. ಅದೇ ರೀತಿ ಇದರ ಇತರ ಎರಡು ರೂಪಾಂತರಗಳು ಕ್ರಮವಾಗಿ 34,999 ರೂ. ಮತ್ತು 37,999 ರೂ. ಆಗಿದೆ. ಜುಲೈ 1 ರಿಂದ 9ರವರೆಗೆ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿರುತ್ತದೆ. ಫೋನ್ ಖರೀದಿಯ ಮೇಲೆ 2,250 ರೂ.ನ ತ್ವರಿತ ಬ್ಯಾಂಕ್ ರಿಯಾಯಿತಿ ಲಭ್ಯವಿರುತ್ತದೆ.
ಇದನ್ನೂ ಓದಿ: ತಿಂಗಳಿಗೆ ಜಸ್ಟ್ ₹55 ಹೂಡಿಕೆ ಮಾಡಿದ್ರೆ ಸಾಕು.. ಕೇಂದ್ರ ಸರ್ಕಾರದಿಂದ ನಿಮಗೆ ಪ್ರತಿ ತಿಂಗಳು ₹3000 ಪಿಂಚಣಿ ಸಿಗುತ್ತೆ!!
Coming up next… the #OnePlusBuds4! To make introductions we’ve brought on a musician to talk about a device meant primarily for listening to music. Genius!
Tune in: https://t.co/66FZ7H0KTH— OnePlus India (@OnePlus_IN) July 8, 2025
OnePlus Nord CE 5ಅನ್ನು 8GB RAM + 128GB, 8GB RAM + 256GB ಮತ್ತು 12GB RAM + 256GB ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆ 24,999 ರೂ. ಆಗಿದೆ. ಅದೇ ರೀತಿ ಇತರ ಎರಡು ರೂಪಾಂತರಗಳು ಕ್ರಮವಾಗಿ 26,999 ರೂ. ಮತ್ತು 28,999 ರೂ.ಗೆ ಲಭ್ಯವಿರುತ್ತವೆ. ಫೋನ್ ಖರೀದಿಯ ಮೇಲೆ 2,250 ರೂ.ವರೆಗೆ ತ್ವರಿತ ರಿಯಾಯಿತಿ ನೀಡಲಾಗುವುದು. ಇದರ ಮಾರಾಟ ಜುಲೈ 12ರಂದು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ನಡೆಯಲಿದೆ. OnePlus Buds 4 ಬೆಲೆ 5,999 ರೂ. ಇದೆ. ಇದರ ಮಾರಾಟ ಜುಲೈ 9ರಂದು ಸಹ ನಡೆಯಲಿದೆ. ಮೊದಲ ಮಾರಾಟದಲ್ಲಿ 500 ರೂ.ವರೆಗೆ ತ್ವರಿತ ರಿಯಾಯಿತಿ ಲಭ್ಯವಿರುತ್ತದೆ.
ಒನ್‌ಪ್ಲಸ್ ನಾರ್ಡ್ 5 ವೈಶಿಷ್ಟ್ಯಗಳು
- 6.83-ಇಂಚಿನ AMOLED ಡಿಸ್ಪ್ಲೇ, 1.5K ರೆಸಲ್ಯೂಶನ್, 144Hz ರಿಫ್ರೆಶ್ ರೇಟ್ ಮತ್ತು 1800 nitsವರೆಗಿನ ಗರಿಷ್ಠ ಹೊಳಪು
- ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್, 12GB LPDDR5X RAM ಮತ್ತು 512GB ವರೆಗಿನ UFS 3.1 ಸ್ಟೋರೇಜ್
- 6,800mAh ಬ್ಯಾಟರಿ, 80W SuperVOOC ವೈರ್ಡ್ ಫಾಸ್ಟ್ ಚಾರ್ಜಿಂಗ್
- ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ OS 15, AI ವೈಶಿಷ್ಟ್ಯಗಳು
- 50MP ಮುಖ್ಯ, 8MP ಅಲ್ಟ್ರಾ-ವೈಡ್ ಕ್ಯಾಮೆರಾ, 20x ಡಿಜಿಟಲ್ ಜೂಮ್, 50MP ಸೆಲ್ಫಿ ಕ್ಯಾಮೆರಾ
- ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ, ಡ್ಯುಯಲ್ ಸಿಮ್ ಕಾರ್ಡ್, ಬ್ಲೂಟೂತ್ 5.4, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್
- ಡ್ರೈ ಐಸ್, ಫ್ಯಾಂಟಮ್ ಗ್ರೇ ಮತ್ತು ಮಾರ್ಬಲ್ ಸ್ಯಾಂಡ್ಸ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯ
Do it all. Anytime, anywhere, all at once. Multitask seamlessly with Open Canvas on the all-new #OnePlusNord5. #UpYourGame
Sale goes live on July 9th, 12 Noon IST. pic.twitter.com/HATDZyH3LE— OnePlus India (@OnePlus_IN) July 8, 2025
ಒನ್‌ಪ್ಲಸ್ ನಾರ್ಡ್ CE 5
- 6.77-ಇಂಚಿನ AMOLED ಡಿಸ್ಪ್ಲೇ, FHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 1430 nitsವರೆಗಿನ ಗರಿಷ್ಠ ಹೊಳಪು
- ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಪೆಕ್ಸ್ ಪ್ರೊಸೆಸರ್, 12GB LPDDR5X RAM ಮತ್ತು 256GB ವರೆಗಿನ UFS 3.1 ಸ್ಟೋರೇಜ್
- 7,100mAh ಬ್ಯಾಟರಿ, 80W SuperVOOC ವೈರ್ಡ್ ಫಾಸ್ಟ್ ಚಾರ್ಜಿಂಗ್
- ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ OS 15, AI ವೈಶಿಷ್ಟ್ಯಗಳು
- 50MP ಮುಖ್ಯ, 8MP ಅಲ್ಟ್ರಾ-ವೈಡ್ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ
- ಡ್ಯುಯಲ್ ಸಿಮ್ ಕಾರ್ಡ್, ಬ್ಲೂಟೂತ್ 5.4, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್
- ಮಾರ್ಬಲ್ ಮಿಸ್ಟ್, ಬ್ಲ್ಯಾಕ್ ಇನ್ಫಿನಿಟಿ ಮತ್ತು ನೆಕ್ಸಸ್ ಬ್ಲೂ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯ
ಒನ್‌ಪ್ಲಸ್ ಬಡ್ಸ್ 4
- 11mm ವೂಫರ್, 6mm ಟ್ವೀಟರ್, ಡ್ಯುಯಲ್ ಡ್ರೈವರ್ ಸಿಸ್ಟಮ್
- AI ಚಾಲಿತ ಶಬ್ದ ರದ್ದತಿ, ANC
- ಬ್ಲೂಟೂತ್ 5.4, ಗೂಗಲ್ ಫಾಸ್ಟ್ ಪೇರ್, ಡ್ಯುಯಲ್ ಸಾಧನ ಸಂಪರ್ಕ
- 3D ಆಡಿಯೋ, ಕಡಿಮೆ ಲೇಟೆನ್ಸಿ ಮೋಡ್ 47ms
- 11 ಗಂಟೆಗಳ ಪ್ಲೇಬ್ಯಾಕ್ ಸಮಯ
- IP55 ನೀರು ಮತ್ತು ಧೂಳು ನಿರೋಧಕ ವೈಶಿಷ್ಟ್ಯ
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಜುಲೈನಲ್ಲಿ ಶೇ.4ರಷ್ಟು DA ಹೆಚ್ಚಳ, ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ