ನಾ ಯಾವುದೋ ಬಡವರ ಮನೆಯಲ್ಲಿ, ರೆಡ್ ಲೈಟ್ ಏರಿಯಾದಲ್ಲಿ ಹುಟ್ಟಿದ್ರೆ ಅಲ್ಲೇ ಎಲ್ಲೋ ಇರುತ್ತಿದ್ದೆ. ನನ್ನ ಅದೃಷ್ಟ ಇಲ್ಲಿದ್ದೇನೆ. ಎಷ್ಟು ದಿನ ರಾಜಕಾರಣದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ಬಡವರ ಪರವಾಗಿ ಅತ್ಯಂತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ಬದಲಾವಣೆ ಗಾಳಿ ಬೀಸಬೇಕಾಗಿದೆ. ವ್ಯವಸ್ಥೆ ಬದಲಾಗಬೇಕಾದರೆ ನಿಮ್ಮಿಂದ ಮಾತ್ರ ಸಾಧ್ಯ.