Videos

ಜೂನ್ 25, 2025: ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

Daily Horoscope 25 June 2025: ಇಂದಿನ ದಿನ ಭವಿಷ್ಯ ಜೂನ್ 25, 2025 ತುಲಾ ರಾಶಿಯವರ ಭವಿಷ್ಯ: ನಿಮಗೆ ಈ ದಿನ ಕರ್ಮ ಸ್ಥಾನಾಧಿಪತಿ ಭಾಗ್ಯದಲ್ಲಿದ್ದು ವಿಶೇಷ ಅವಕಾಶಗಳನ್ನು ಪಡೆಯುವಿರಿ. ಅದರಲ್ಲೂ ಆಭರಣಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿರುವವರಿಗೆ ಹಾಗೂ ವ್ಯಾಪಾರಸ್ಥರಿಗೆ ಭರ್ಜರಿ ಲಾಭವಾಗುವ ದಿನ. ವೃಶ್ಚಿಕ ರಾಶಿಯವರ ಭವಿಷ್ಯ: ಈ ರಾಶಿಯವರಿಗೆ ಇಂದು ಭಾಗ್ಯಾಧಿಪತಿ ಅಷ್ಟಮದಲ್ಲಿದ್ದು ಕೆಲವು ವಿಚಾರಗಳಲ್ಲಿ ಹಿನ್ನಡೆ ಅನುಭವಿಸಬೇಕಾಗಬಹುದು. ಕಳೆದ ಒಂದೆರಡು ವಾರಗಳಲ್ಲಿ ನಿಮಗೆ ಆಶ್ವಾಸನೆ ನೀಡಿದ್ದ ವ್ಯಕ್ತಿಗಳು ಕೈ ಕೊಡುವ ಸಾಧ್ಯತೆ ಇದೆ. ಸ್ವಲ್ಪ ತಾಳ್ಮೆಯಿಂದ ಇದ್ದರೆ ಎರಡ್ಮೂರು ದಿನಗಳ ಬಳಿಕ ಅವರೇ ಕರೆ ಮಾಡಿ ಕೊಟ್ಟ ಮಾತನ್ನು ಈಡೇರಿಸಲಿದ್ದಾರೆ. ಧನು ರಾಶಿಯವರ ಭವಿಷ್ಯ: ಷಷ್ಟಾಧಿಪತಿ ಇಂದು ಸಪ್ತಮದಲ್ಲಿದ್ದು ಇಂದು ತುಂಬಾ ಮುಖ್ಯವಾದ ದಿನ. ಇಂದು ಯಾವುದೇ ಕಾರಣಕ್ಕೂ ಸಾಲ ಅಥವಾ ಲಂಚವನ್ನು ನೀಡಬಾರದು. ಯಾರಾದರೂ ದಾನ ಕೇಳಿದರೂ ಸಹ ಯೋಚಿಸದೆ ದಾನ ನೀಡಬೇಡಿ. ಜಾಗೃತೆಯಿಂದ ಹೆಜ್ಜೆಯಿಡಿ. ಮಕರ ರಾಶಿಯವರ ಭವಿಷ್ಯ: ಇಂದು ಸಪ್ತಮಾಧಿಪತಿ ಷಷ್ಟದಲ್ಲಿದ್ದಾನೆ. ತುಂಬಾ ಹತ್ತಿರದ ವ್ಯಕ್ತಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. ಕಣ್ಣಿನ ಆರೋಗದ ಬಗ್ಗೆ ಹೆಚ್ಚಿನ ಗಮನವಹಿಸುವುದು ಅಗತ್ಯವಾಗಿದೆ. ಕುಂಭ ರಾಶಿಯವರ ಭವಿಷ್ಯ: ಷಷ್ಟಾಧಿಪತಿ ಪಂಚಮದಲ್ಲಿದ್ದು ರಾಶಿಯಲ್ಲೇ ರಾಹು, ಸಪ್ತಮದಲ್ಲಿ ಕುಜ ಕೇತು, ಪಂಚಮದಲ್ಲಿ ಗುರು ಚಂದ್ರ ಯುತಿಯಿಂದ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಮಯ. ಮೀನ ರಾಶಿಯವರ ಭವಿಷ್ಯ : ಪಂಚಮಾಧಿಪತಿ ಸುಖ ಸ್ಥಾನದಲ್ಲಿ ಗುರುವಿನ ಜೊತೆಗೆ ಇರುವುದರಿಂದ ನಿಮ್ಮ ಸಾಮರ್ಥ್ಯದ ಬಗ್ಗೆ ಅರಿವಾಗಲಿದೆ. ಹಿರಿಯರು, ಹಿತೈಷಿಗಳ ಮಾತಿಗೆ ಬೆಲೆಕೊಟ್ಟು ಮುಂದೆ ಸಾಗುವುದರಿಂದ ಎಲ್ಲವೂ ಒಳಿತಾಗಲಿದೆ.

Video Thumbnail
Advertisement

View More Videos
Read More