ಜೂನ್ 27, 2025: ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
Daily Horoscope 27 June 2025: ಇಂದಿನ ದಿನ ಭವಿಷ್ಯ ಜೂನ್ 25, 2025
ವೃಶ್ಚಿಕ ರಾಶಿಯವರ ಭವಿಷ್ಯ:
ಇಂದು ಭಾಗ್ಯದಲ್ಲಿ ಚಂದ್ರ ಇದ್ದು ತುಂಬಾ ಅನುಕೂಲಕರವಾಗಿದೆ. ಆದರೆ, ಅಷ್ಟಮದಲ್ಲಿ ಗುರು ಇರುವುದರಿಂದ ನೀವು ಹಿಂದೆ ಮಾಡಿರುವ ತಪ್ಪುಗಳಿಗೆ ಹೊಣೆ ಮಾಡಲಿದ್ದಾನೆ. ನಿಮಗಿಂದು ಹೊಸ ಲಾಭ, ವ್ಯವಹಾರದಲ್ಲಿ ಪ್ರಯೋಜನಕಾರಿ ಫಲಿತಾಂಶಗಳು ಲಭ್ಯವಾದಲ್ಲಿ ಹಳೆಯ ಸಾಲಗಳನ್ನು ಪಾವತಿಸಿ. ಶುಭವಾಗುತ್ತೆ.
ಧನು ರಾಶಿಯವರ ಭವಿಷ್ಯ:
ಇಂದು ಚಂದ್ರ ಅಷ್ಟಮದಲ್ಲಿ ಇರುವುದರಿಂದ ಹಲವು ವಿಚಾರಗಳಲ್ಲಿ ಜಾಗೃತಿಯಿಂದ ಇರಬೇಕಾಗುತ್ತದೆ. ಅದರಲ್ಲೂ ನವ ವಿವಾಹಿತ ಮಹಿಳೆಯರು ಹೆಜ್ಜೆ ಹೆಜ್ಜೆಗೂ, ನೀವು ತೊಟ್ಟಿರುವ ಒಡವೆ ವಸ್ತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಕಾಲುಂಗುರ, ತಾಳಿ ತೆಗೆದಿಡುವ ತಪ್ಪನ್ನು ಮಾಡಬೇಡಿ.
ಮಕರ ರಾಶಿಯವರ ಭವಿಷ್ಯ:
ಸಪ್ತಮದಲ್ಲಿರುವ ಚಂದ್ರ ವಿಶೇಷ ಲಾಭವನ್ನು ನೀಡುತ್ತಾನೆ. ಹೊಸ ಜನರ ಸಂಪರ್ಕ ಬೆಳೆಯಲಿದೆ. ನಿಮ್ಮ ಆಲೋಚನಾ ಲಹರಿ ವೇಗವಾಗಿ ಬೆಳೆಯಲಿದೆ. ಆದರೆ, ಸರಿಯಾದ ವ್ಯಕ್ತಿಗಳೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಂಡಾಗ ಮಾತ್ರ ಅದಕ್ಕೆ ಸರಿಯಾದ ಪುಷ್ಟಿ ದೊರೆಯಲಿದೆ.
ಕುಂಭ ರಾಶಿಯವರ ಭವಿಷ್ಯ:
ಆರನೇ ಮನೆಯಲ್ಲಿರುವ ಚಂದ್ರ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ, ಈ ಬಗ್ಗೆ ಸ್ವಲ್ಪ ಜಾಗೃತರಾಗಿರಿ. ಅದರಲ್ಲೂ ಮುಖ್ಯವಾಗಿ ನಿಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರಿಕೆಯಿಂದ ಇರಿ. ಇಲ್ಲವೇ, ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು.
ಮೀನ ರಾಶಿಯವರ ಭವಿಷ್ಯ :
ಪಂಚಮದಲ್ಲಿರುವ ಚಂದ್ರ ಅದ್ಭುತ ಫಲಗಳನ್ನು ನೀಡಲಿದ್ದಾನೆ. ಇಂದು ಜವಾಬ್ದಾರಿಗಳು ಹೆಚ್ಚಾಗಬಹುದು. ಹಿರಿಯರಿಗೆ ಗೌರವ ತೋರುವುದರಿಂದ ನೀವು ಉನ್ನತ ಹುದ್ದೆಗೆ ಏರುವಿರಿ.
Yashaswini V|Updated: Jun 27, 2025, 01:40 PM IST

View More Videos