"ಕೌಂತೇಯ" ಎಂಬುದು ನಿರ್ದೇಶಕ ಬಿ.ಕೆ. ಚಂದ್ರಹಾಸ ರವರ ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಮರ್ಡರ್ ಮಿಸ್ಟ್ರಿ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಅಚ್ಯುತ ಕುಮಾರ್ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿದ್ದು, ರೋಚಕ ಪ್ರಕರಣವನ್ನು ಚಿತ್ರಿಸುತ್ತಾರೆ, ಶರಣ್ಯ ಶೆಟ್ಟಿ ಕ್ರೈಂ ರಿಪೋರ್ಟರ್ ಹಾಗೂ ಅವರ ಮಗಳಾಗಿ ನಟಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಶೂಟಿಂಗ್ ಆಗಿರುವ ಈ ಚಿತ್ರದಲ್ಲಿ ಹಾಡುಗಳಿಲ್ಲದೆ ಹಿನ್ನೆಲೆ ಸಂಗೀತವೇ ಮುಖ್ಯ ಪಾತ್ರ ವಹಿಸಿದೆ.