Kota swimming pool death: ರಾಜಸ್ಥಾನದ ಕೋಟಾದಲ್ಲಿ ಒಂದು ದುರಂತ ಘಟನೆ ಬೆಳಕಿಗೆ ಬಂದಿದೆ. ಶನಿವಾರ ನಂಟಾ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿರುವ ಈಜುಕೊಳದಲ್ಲಿ ಸಾಹಸ ಪ್ರದರ್ಶನ ನೀಡುತ್ತಿದ್ದ ಯುವಕ ಕೇವಲ ಹತ್ತೇ ಸೆಕೆಂಡುಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಮೃತನನ್ನು ಮುಬಾರಕ್ ಎಂದು ಗುರುತಿಸಲಾಗಿದೆ. ಆತನಿಗೆ 35 ವರ್ಷ ವಯಸ್ಸಾಗಿದೆ ಎಂದು ಹೇಳಲಾಗಿದೆ. ತನ್ನ ಸ್ನೇಹಿತರೊಂದಿಗೆ ಪೂಲ್ ಪಾರ್ಟಿಗೆ ಹೋಗಿದ್ದ ಯುವಕ ಹತ್ತು ಸೆಕೆಂಡುಗಳಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಹತ್ತು ಸೆಕೆಂಡುಗಳಲ್ಲಿ ಒಂದು ಪ್ರಾಣ ಪಕ್ಷಿಯೇ ಹಾರಿಹೋಗಿದೆ. ಮುಬಾರಕ್ ಸಾಹಸ ಮಾಡಲು ಈಜುಕೊಳಕ್ಕೆ ಹಾರಿದ್ದ ಅಷ್ಟೇ.. ಆತನಿಗೆ ಮತ್ತೆ ಎದ್ದೇಳಲು ಸಾಧ್ಯವಾಗಲಿಲ್ಲ. ಎಲ್ಲವೂ 10 ಸೆಕೆಂಡುಗಳಲ್ಲಿ ಸಂಭವಿಸಿತು. ರಾಜಸ್ಥಾನದ ಕೋಟಾದಲ್ಲಿ ಈ ದುರಂತ ಸಂಭವಿಸಿದೆ. ಮುಬಾರಕ್ ನಂಟಾ ಪ್ರದೇಶದ ರೆಸಾರ್ಟ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪೂಲ್ ಪಾರ್ಟಿಗೆ ಬಂದಿದ್ದ. ಎಲ್ಲರೂ ಆಟವಾಡುತ್ತಾ, ಹಾಡುತ್ತಾ ಆನಂದಿಸುತ್ತಿದ್ದರು. ಈಜುಕೊಳಕ್ಕೆ ಧುಮುಕುವ ತನ್ನ ವಿಡಿಯೋ ಮಾಡುವಂತೆ ಸ್ನೇಹಿತನಿಗೆ ಮುಬಾರಕ್ ಹೇಳಿದ್ದ. ಅದರಂತೆ ಈಜುಕೊಳ್ಳಕ್ಕೆ ಜೀಗಿದ ಆತನಿಗೆ ಮತ್ತೆ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ತಕ್ಷಣವೇ ಸ್ನೇಹಿತರೆಲ್ಲರೂ ಸೇರಿ ಆತನನ್ನ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: ಬೈಕ್ ಸವಾರರ ಗಮನಕ್ಕೆ... ಇನ್ನು ಮುಂದೆ ಇಂತಹುದೇ ಗುರುತುಳ್ಳ ಹೆಲ್ಮೆಟ್ ಧರಿಸುವುದು ಕಡ್ಡಾಯ..!
ಘಟನೆ ಬಗ್ಗೆ ಮಾತನಾಡಿದ ಮುಬಾರಕ್ ಸ್ನೇಹಿತ ಅಮನ್, ʼಊಟದ ನಂತರ ಮುಬಾರಕ್ ಈಜುಕೊಳದಲ್ಲಿ ಸ್ಟಂಟ್ ಮಾಡುವುದಾಗಿ ಹೇಳಿ ತನ್ನ ಸ್ನೇಹಿತರಿಗೆ ವಿಡಿಯೋ ಮಾಡುವಂತೆ ಹೇಳಿದ. ಅದರಂತೆ ಆತ ಪೂಲ್‌ಗೆ ಹಾರಿ ಸುಮಾರು 10 ಸೆಕೆಂಡುಗಳ ಕಾಲ ನೀರಿನಲ್ಲಿಯೇ ಇದ್ದನು. ಸ್ವಲ್ಪ ಸಮಯದ ನಂತರ ಆತ ನೀರಿನಲ್ಲಿ ತಲೆಕೆಳಗಾಗಿ ತೇಲುತ್ತಿದ್ದʼ ಎಂದು ಹೇಳಿದ್ದಾನೆ.
ಸ್ನೇಹಿತರು ಕೂಡಲೇ ಆತನನ್ನ ನೀರಿನಿಂದ ಹೊರತೆಗೆದು ಕೋಟಾದ ನಯಾಪುರದಲ್ಲಿರುವ ಎಂಬಿಎಸ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಪರೀಕ್ಷಿಸಿದ ನಂತರ ಆತ ಮೃತಪಟ್ಟಿದ್ದಾನೆಂದು ಘೋಷಿಸಿದರು. ಮುಬಾರಕ್ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಇದು ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ವಿದೇಶಿ ಯುವತಿಯರು ಗರ್ಭಿಣಿಯಾಗಲು ಭಾರತದ ಈ ಹಳ್ಳಿಗೆ ಬರ್ತಾರೆ..! ಇಲ್ಲಿನ ಪುರುಷರು ದೈಹಿಕವಾಗಿ..
ಘಂಟಾಘರ್‌ನ ಚಶ್ಮೆ-ಕಿ-ಬಾವ್ಡಿ ಪ್ರದೇಶದ ನಿವಾಸಿ ಮುಬಾರಕ್ ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದ. ಆತನ ಪೋಷಕರು ಪೀಠೋಪಕರಣ ವ್ಯವಹಾರದಲ್ಲಿ ಮಾಡುತ್ತಿದ್ದಾರೆ. ಮುಬಾರಕ್ ವೃದ್ಧ ಪೋಷಕರು, ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳನ್ನ ಅಗಲಿದ್ದಾರೆ. ದುಃಖಕರ ವಿಷವೆಂದರೆ ಅವರ ಅಣ್ಣ ಕೂಡ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಈ ಘಟನೆ ಕುಟುಂಬಕ್ಕೆ ಮತ್ತೊಂದು ಹೊಡೆತವಾಗಿದೆ. ನಾಲ್ಕು ವರ್ಷದೊಳಗಿನ ಇಬ್ಬರು ಗಂಡು ಮಕ್ಕಳ ಮರಣದಿಂದ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ