Home> Viral
Advertisement

ಇದು ಎಂತಹ ವಿಚಿತ್ರ ಪದ್ಧತಿ.. 17 ವರ್ಷಗಳಿಂದ ಒಂದೇ ಒಂದು ಮದುವೆಯೂ ನಡೆಯದ ಹಳ್ಳಿ..ಏಕೆ?

ಭಾರತವು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳಿಗೆ ನೆಲೆಯಾಗಿದೆ. ಪ್ರತಿಯೊಂದು ಪ್ರದೇಶವು ತನ್ನದೇ ಆದ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಹೊಂದಿದೆ. ಕೆಲವು ಪ್ರದೇಶಗಳ ಜನರು ಆಚರಿಸುವ ಸಂಪ್ರದಾಯಗಳು ವಿಚಿತ್ರ ಮತ್ತು ಆಶ್ಚರ್ಯಕರವೆನಿಸುತ್ತದೆ. ತಂತ್ರಜ್ಞಾನದ ಯುಗದಲ್ಲಿಯೂ ಸಹ ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ಇನ್ನೂ ಒಂದು ವಿಚಿತ್ರ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. 

ಇದು ಎಂತಹ ವಿಚಿತ್ರ ಪದ್ಧತಿ.. 17 ವರ್ಷಗಳಿಂದ ಒಂದೇ ಒಂದು ಮದುವೆಯೂ ನಡೆಯದ ಹಳ್ಳಿ..ಏಕೆ?

Strange tradition in Madhya Pradesh: ಭಾರತವು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳಿಗೆ ನೆಲೆಯಾಗಿದೆ. ಪ್ರತಿಯೊಂದು ಪ್ರದೇಶವು ತನ್ನದೇ ಆದ ಸಂಪ್ರದಾಯ ಮತ್ತು ಪದ್ಧತಿಗಳನ್ನು ಹೊಂದಿದೆ. ಕೆಲವು ಪ್ರದೇಶಗಳ ಜನರು ಆಚರಿಸುವ ಸಂಪ್ರದಾಯಗಳು ವಿಚಿತ್ರ ಮತ್ತು ಆಶ್ಚರ್ಯಕರವೆನಿಸುತ್ತದೆ. ತಂತ್ರಜ್ಞಾನದ ಯುಗದಲ್ಲಿಯೂ ಸಹ ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ಇಂದಿಗೂ ಸಹ ಒಂದು ವಿಚಿತ್ರ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ. ಅದು ʼಪರಾಗ್ʼ ಎಂಬ ಸಂಪ್ರದಾಯ. ಈ ಸಂಪ್ರದಾಯದ ಪ್ರಕಾರ, ಈ ಗ್ರಾಮದಲ್ಲಿ ಕಳೆದ 17 ವರ್ಷಗಳಿಂದ ಒಂದೇ ಒಂದು ಮದುವೆಯೂ ನಡೆದಿಲ್ಲ. ಇದು ಎಂತಹ ಸಂಪ್ರದಾಯ? ಅಲ್ಲಿನ ಜನರು ಇದನ್ನು ಏಕೆ ಆಚರಿಸುತ್ತಾರೆ? ಇದರ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಮಧ್ಯಪ್ರದೇಶದ ಬುಂದೇಲ್‌ಖಂಡದ ಗ್ರಾಮೀಣ ಪ್ರದೇಶಗಳಲ್ಲಿ ʼಪರಾಗ್ʼ ಸಂಪ್ರದಾಯವನ್ನು ಶತಮಾನಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಪದ್ಧತಿಯ ಪ್ರಕಾರ, ಗ್ರಾಮದಲ್ಲಿ ಯಾರಾದರೂ ಕೊಲೆ ಅಥವಾ ಗೋಹತ್ಯೆಯಂತಹ ಅಪರಾಧಗಳನ್ನು ಮಾಡಿದರೆ, ಇಡೀ ಗ್ರಾಮದಲ್ಲಿ ಮದುವೆಗಳು ನಿಲ್ಲುತ್ತವೆ. ಇಲ್ಲಿನ ಅನೇಕ ಹಳ್ಳಿಗಳಲ್ಲಿ ಈ ಸಂಪ್ರದಾಯವನ್ನು ವ್ಯಾಪಕವಾಗಿ ಅನುಸರಿಸಲಾಗುತ್ತದೆ. ಈ ಹಲವು ಹಳ್ಳಿಗಳಲ್ಲಿ ಮದುವೆಯ ವಾಲಗ ಊದಿ ಬಹಳ ಸಮಯವಾಗಿದೆ. ಆದರೆ ಆ ಹಳ್ಳಿಗಳ ಜನರು ಮದುವೆಯಾಗುವುದನ್ನು ನಿಲ್ಲಿಸಿಲ್ಲ. ಇಲ್ಲಿನ ಜನರು ತಮ್ಮ ಹಳ್ಳಿಯನ್ನು ಬಿಟ್ಟು ಹೊರಗಡೆ ಅಂದರೆ ಬೇರೆ ಪ್ರದೇಶದಲ್ಲಿ ಮದುವೆಯಾಗುತ್ತಿದ್ದರು. 

ಇದನ್ನೂ ಓದಿ: ತಿರುಪತಿ ಕಾಡಿನಲ್ಲಿ ಇದುವರೆಗೆ ಯಾರೂ ನೋಡಿರದ ಅಪರೂಪದ ಜೀವಿ ಪತ್ತೆ..! ಇದರ ವಿಶೇಷತೆ ಕೇಳಿದ್ರೆ ಶಾಕ್‌ ಆಗ್ತಿರಾ..

ಗ್ರಾಮದ ಹೊರಗೆ ಮದುವೆಯಾಗಲು ಸಾಧ್ಯವಾಗದ ಬಡವರಿಗೆ ಇದು ತುಂಬಾ ತೊಂದರೆಯಾಗಿದೆ. ಅಪರಾಧ ಮಾಡಿದ ವ್ಯಕ್ತಿ ಅಥವಾ ಆತನ ಕುಟುಂಬ ಸದಸ್ಯರು ತೀರ್ಥಯಾತ್ರೆಗೆ ಹೋಗಬೇಕಾಗುತ್ತದೆ. ತೀರ್ಥಯಾತ್ರೆಯ ನಂತರ, ತುಳಸಿ-ಸಾಲಿಗ್ರಾಮ ವಿವಾಹವನ್ನು ನಡೆಸಬೇಕು. ನಂತರ ಹಬ್ಬವನ್ನು ಏರ್ಪಡಿಸಬೇಕು. ನಂತರ ʼಪರಾಗ್ʼ ಸಂಪ್ರದಾಯವನ್ನು ಕೈಬಿಡಲಾಗುತ್ತದೆ. ಇಷ್ಟೆಲ್ಲಾ ಆದ ಬಳಿಕವೇ ಗ್ರಾಮದಲ್ಲಿ ಮತ್ತೆ ಎಂದಿನಂತೆ ಮದುವೆಗಳನ್ನು ನಡೆಸಬಹುದು. ಅನೇಕ ಶ್ರೀಮಂತರು ಈ ಸಂಪ್ರದಾಯದಿಂದ ಬೇಗನೆ ಹೊರಬರುತ್ತಾರೆ. ಆದರೆ ಬಡವರು ತೀರ್ಥಯಾತ್ರೆ, ತುಳಸಿ ವಿವಾಹ ಮತ್ತು ಸಾಮೂಹಿಕ ಹಬ್ಬಗಳಲ್ಲಿ ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲ್ಲ. ಹೀಗಾಗಿ ಅವರು ಅಲ್ಲಿನ ಕಟ್ಟುಪಾಡುಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾದ ಪರಿಸ್ಥಿತಿ ಇದೆ.

ಈ ಹಿನ್ನೆಲೆ ಕಳೆದ 17 ವರ್ಷಗಳಿಂದ ಲಾಲೋಯಿ ಗ್ರಾಮದಲ್ಲಿ ಮದುವೆಯ ಬ್ಯಾಂಡ್ ಬಾಜಾ ಸದ್ದು ಮಾಡಿಲ್ಲ. ಒಂದು ಕೊಲೆಯಿಂದ ʼಪರಾಗ್ʼ ಸಂಪ್ರದಾಯಕ್ಕೆ ಬದ್ಧವಾಗಿರುವುದರಿಂದ ಇಷ್ಟು ವರ್ಷಗಳಿಂದ ಗ್ರಾಮದಲ್ಲಿ ಮದುವೆಯ ವಾಲಗವನ್ನು ಊದಿಲ್ಲ. ಈ ʼಪರಾಗ್ʼ ಸಂಪ್ರದಾಯದಿಂದ ಹೇಗೆ ಮುಕ್ತಿ ಹೊಂದಬೇಕೆಂದು ಅಲ್ಲಿನ ಗ್ರಾಮಸ್ಥರು ಚಿಂತಿತರಾಗಿದ್ದಾರೆ. ಇತ್ತೀಚೆಗೆ ಸರಪಂಚ್ ಬಾದಲ್ ಸಿಂಗ್ ಮತ್ತು ಗ್ರಾಮದ ಜನರು ಈ ಸಂಪ್ರದಾಯವನ್ನು ಕೊನೆಗೊಳಿಸಲು ಒಗ್ಗೂಡಿದ್ದರು. ಪಕ್ಕದ ಹಳ್ಳಿಯ ಬುಡಕಟ್ಟು ಯುವತಿಯ ವಿವಾಹವನ್ನು ಲಾಲೋಯಿ ಗ್ರಾಮದಲ್ಲಿ ನಡೆಸಲು ಅವರು ನಿರ್ಧರಿಸಿದ್ದರು. ಈ ಕ್ರಮದಲ್ಲಿ ವಧುವನ್ನು ಲಾಲೋಯಿ ಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಇದರೊಂದಿಗೆ 17 ವರ್ಷಗಳ ನಂತರ ಈ ಗ್ರಾಮದಲ್ಲಿ ಮದುವೆಯ ವಾಲಗವನ್ನು ಊದಲಾಯಿತು. ಎಲ್ಲಾ ಗ್ರಾಮಸ್ಥರು ಮೆರವಣಿಗೆಗೆ ಭವ್ಯ ಸ್ವಾಗತ ನೀಡಿದರು. ನಂತರ ಮದುವೆಯೂ ಸಹ ಅದ್ದೂರಿಯಾಗಿ ನಡೆಯಿತು. ವಿಶೇಷವೆಂದರೆ ಸ್ಥಳೀಯ ಶಾಸಕ ಮತ್ತು ಮಾಜಿ ಗೃಹ ಸಚಿವ ಭೂಪೇಂದ್ರ ಸಿಂಗ್ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: KGF ಅಲ್ಲ, ಹಟ್ಟಿಯೂ ಅಲ್ಲ, ಭಾರತದ ಈ ಸ್ಥಳದಲ್ಲಿದೆ ಅತಿ ದೊಡ್ಡ ಚಿನ್ನದ ಭಂಡಾರ...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More