Special Marriage: ಅಪ್ಪ ಪ್ರತಿ ಹೆಣ್ಣಿಗೂ ಮೊದಲ ಹೀರೋ.... ಅಂತೆಯೇ, ರಾಜನಾಗಿರಲಿ, ಮಂತ್ರಿಯಾಗಿರಲಿ ಅಥವಾ ಕಡು ಬಡವನೇ ಆಗಿದ್ದರೂ ಪ್ರತಿ ತಂದೆಗೂ ತನ್ನ ಮಗಳು ರಾಜಕುಮಾರಿಯೇ ಆಗಿರುತ್ತಾಳೆ. ಮಗಳ ಮದುವೆ ಬಗ್ಗೆ ತಂದೆಗೆ ಅವರದ್ದೇ ಆದ ಕನಸುಗಳಿರುತ್ತವೆ. ಇಲ್ಲೊಬ್ಬ ರೈತ ತನ್ನ ಫಾರಿನ್ ರಿಟರ್ನ್ ಮಗಳನ್ನು ತಮ್ಮ ತೋಟದಲ್ಲೇ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರು ಲಂಡನ್ ನಲ್ಲಿ ಕಾನೂನು ಪದವಿ ಪಡೆದ ಪುತ್ರಿ ರಶ್ಮಿ ಅವರನ್ನು ಬೆಂಗಳೂರಿನ ವೀಣಾ ಮತ್ತು ಕಿಶೋರ್ ದಂಪತಿ ಪುತ್ರ, ಖಾಸಗಿ ಕಂಪನಿ ಉದ್ಯೋಗಿ ಕುಬೇರ್ ಅವರ ಜೊತೆ ತೋಟದಲ್ಲಿ ಮದುವೆ ಮಾಡಿಕೊಟ್ಟಿದ್ದು ಪ್ರಕೃತಿ ಮಡಿಲಲ್ಲಿ ನವ ಜೀವನದ ಉಲ್ಲಾಸ ತರಿಸಿದ್ದಾರೆ. ಛತ್ರದಲ್ಲಿ ಬೆಳಗ್ಗೆ ಹೋಗಿ ಸಂಜೆ ಬರುವ ಮದುವೆ ರೀತಿ ಬೇಡ, ಅರ್ಗಾನಿಕ್ ಆಹಾರ ಜೊತೆಗೆ ಬಂದವರಿಗೆ ಕೃಷಿ ಜ್ಞಾನ ಹೇಳಿಕೊಡಬೇಕೆಂದು ತೋಟದಲ್ಲೇ ಮಗಳ ಮದುವೆ ಮಾಡಿದ್ದಾರೆ ಈ ರೈತ.
ರೈತ ಕೇವಲ ಬೆಳೆ ಬೆಳೆದರಷ್ಟೇ ಸಾಲದು, ತನ್ನ ಕೃಷಿ ಪರಿಶ್ರಮದ ಬಗ್ಗೆ ಬೇರೆಯವರಿಗೂ ಪರಿಚಯಿಸಬೇಕು. ಈ ಮೂಲಕ ರೈತ ಬೆಳೆ ಬೆಳೆಯುವ ಕೃಷಿ ಭೂಮಿ, ಕೃತಿ ಪ್ರವಾಸೋದ್ಯಮದ ತಾಣವಾಗಬೇಕು ಎಂಬುದು ಇವರ ಪರಿಕಲ್ಪನೆಯಾಗಿದೆ. ಆದರೆ, ಇದನ್ನು ಕೇವಲ ಮಾತಿನಲ್ಲಿ ಹೇಳದೆ ಕೆಲಸದಲ್ಲೂ ತೋರಿಸಿರುವ ಪ್ರಗತಿಪರ ರೈತ ಪಿ. ದಯಾನಂದ್ ತಮ್ಮ ಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ತಮ್ಮ ಜಮೀನಿನಲ್ಲೇ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ- ಮನೆ ಬಳಿ ಹಾಡಹಗಲೇ ಕಾಡಾನೆ ಪ್ರತ್ಯಕ್ಷ- ಗಜರಾಜನಿಗೆ ಲಾಡು ಬೇಕಾ ಲಾಡು ಎಂದ ಮಹಿಳೆ!! ವಿಡಿಯೋ ವೈರಲ್
ತಾನು ಹತ್ತಾರು ವರ್ಷಗಳಿಂದ ಶ್ರಮಪಟ್ಟು ನೆಟ್ಟಿರುವ ಮರಗಿಡಗಳು, ಪಕ್ಷಿಗಳ ಕಲರವ, ದುಂಬಿಯ ಝೇಂಕಾರದೊಂದಿಗೆ ಇಲ್ಲೇ ಸಿಗುವ ಸ್ಧಳೀಯ ಸಸ್ಯಗಳ ಅಲಂಕಾರರೊಂದಿಗೆ ನಡೆಯಲಿ. ಮದುವೆಗೆ ಬರುವ ಬಂಧುಬಾಂಧವರು, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ರೇಷ್ಮೆ, ಅರಣ್ಯ ಕೃಷಿಯನ್ನು ನೋಡಿ ಸಂಭ್ರಮಿಸಿ ಮದುವೆಯಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ಜಮೀನಿನಲ್ಲೇ ಅದ್ಧೂರಿ ವಿವಾಹ ಮಾಡಲಾಗಿದೆ.
ತೋಟದಲ್ಲಿ ಬೆಳೆದಿರುವ ಬಾಳೆ, ಬಿದಿರು, ತೆಂಗು, ಚೆಂಡು, ಸೇವತಿಂಗೆ ಹೂಗಳಿಂದ ಚಪ್ಪರ ನಿರ್ಮಿಸಿ ತಾವು ಬೆಳೆದ ಮಾವು, ಕಲ್ಲಂಗಡಿ ಸೇರಿದಂತೆ ಹಲವು ಹಣ್ಣುಗಳ ಪಾನೀಯ ಕೊಟ್ಟಿದ್ದಾರೆ. ನವಣೆ ಬಾತ್, ಎಳನೀರು ಪಾಯಸ ಸೇರಿದಂತೆ ಸಿರಿ ಧಾನ್ಯಗಳ ಬೊಂಬಾಟ್ ಭೋಜನವನ್ನು ಅತಿಥಿಗಳಿಗೆ ಉಣ ಬಡಿಸಿದ್ದಾರೆ.
ಇದನ್ನೂ ಓದಿ- ಬಂಡೀಪುರ ಕಾಡಲ್ಲಿ ಫೋಟೋ ಶೂಟ್- 25 ಸಾವಿರ ದಂಡ ಪೀಕಿದ ಪ್ರವಾಸಿಗರು
ಭೂಮಿಯಿಂದ ಆದಾಯ ಗಳಿಸಲು ಲೆಮನ್ ಗ್ರಾಸ್ ಪಾಠ:
ಲೆಮನ್ ಗ್ರಾಸ್ ಬೆಳೆಯ ಮೂಲಕ ಭಾರೀ ಆದಾಯ ಗಳಿಸಿರುವ ರೈತ ಪಿ. ದಯಾನಂದ್, ಮಗಳ ಮದುವೆಗೆ ಬಂದು ಶುಭ ಹಾರೈಸಿದ ಅತಿತಿಗಳಿಗೆ, ಲೆಮನ್ ಗ್ರಾಸ್ ಬೆಳೆಯುವ ವಿಧಾನ, ಅದರಿಂದ ಉತ್ತಮ ಆದಾಯ ಗಳಿಸುವ ಮಾರ್ಗಗಳ ಜೊತೆಗೆ ಹೈನುಗಾರಿಕೆ ಬಗ್ಗೆ ಪಾಠ ಮಾಡಿದ್ದರೆ.ಅಷ್ಟೇ ಅಲ್ಲ, ತಮ್ಮ ತೋಟದಲ್ಲೇ ಬೆಳೆದ ತೋತಾಪುರಿ ಮಾವಿನ ಕಾಯಿ ಹಾಗೂ ಲೆಮನ್ ಗ್ರಾಸ್ ಸಾಸಿಗಳನ್ನು ತಾಂಬೂಲವಾಗಿ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ಸುದ್ದಿ ಸಖತ್ ವೈರಲ್ ಆಗುತ್ತಿದ್ದು, ಮಾದರಿ ರೈತನ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.