Home> World
Advertisement

ಮನೆಯಲ್ಲಿ ಇಬ್ಬರು ಪತ್ನಿಯರಿರುವಾಗಲೇ 6 ವರ್ಷದ ಕಂದಮನನ್ನು ಮೂರನೇ ಮದುವೆಯಾದ ಕಿರಾತಕ !ಇದೆಂಥಾ ನಾಚಿಗೆಟ್ಟ ಸಂಪ್ರದಾಯ !

45 ವರ್ಷದ ವ್ಯಕ್ತಿ ಕೇವಲ 6 ವರ್ಷದ ಹುಡುಗಿಯನ್ನು ಮದುವೆಯಾಗಿದ್ದಾನೆ.  ಈ ವ್ಯಕ್ತಿಯ ಇಬ್ಬರು ಪತ್ನಿಯರು ಈತನ ಜೊತೆಯಲ್ಲಿಯೇ ಈತನ ಮನೆಯಲ್ಲಿಯೇ ಇದ್ದಾರೆ. 

ಮನೆಯಲ್ಲಿ ಇಬ್ಬರು ಪತ್ನಿಯರಿರುವಾಗಲೇ 6 ವರ್ಷದ ಕಂದಮನನ್ನು ಮೂರನೇ ಮದುವೆಯಾದ ಕಿರಾತಕ !ಇದೆಂಥಾ ನಾಚಿಗೆಟ್ಟ ಸಂಪ್ರದಾಯ !

ಪ್ರತಿಯೊಬ್ಬ ಪೋಷಕರು ತಮ್ಮ ಮಗಳು ಚೆನ್ನಾಗಿ ಓದಬೇಕು, ಒಳ್ಳೆಯ  ಉದ್ಯೋಗಕ್ಕೆ ಸೇರಬೇಕು, ಒಳ್ಳೆಯ ಮನೆ ಮನೆತನಕ್ಕೆ ಮಗಳನ್ನು ನೀಡಿ ಮದುವೆ ಮಾಡಿಕೊಡಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಮಗಳ ಮದುವೆಯಲ್ಲಿ ಕಿಂಚಿತ್ತೂ ವ್ಯತ್ಯಾಸ ಆಗಬಾರದು ಎಂದು ಹೆತ್ತವರು ಬಹಳಷ್ಟು ಶ್ರಮ ಪಡುತ್ತಾರೆ. ಇನ್ನು ಸರ್ಕಾರ ಕೂಡಾ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಮದುವೆಗಾಗಿ, ಉತ್ತಮ ಭವಿಷ್ಯ ರೂಪಿಸಲು ನೆರವಾಗುವ ಸಲುವಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಆದರೆ, ಇದೀಗ ಬೆಳಕಿಗೆ ಬಂದಿರುವ ಪ್ರಕರಣ ಮಾನವ ಕುಲವನ್ನೇ ಬೆಚ್ಚಿ ಬೀಳಿಸುವಂತಿದೆ. 

ಹೌದು,  45 ವರ್ಷದ ವ್ಯಕ್ತಿ 6 ವರ್ಷದ ಪುಟ್ಟ ಬಾಲಕಿಯನ್ನು  ಮದುವೆಯಾಗಿದ್ದಾನೆ. ಮದುವೆ ಎನ್ನುವ ಪದದ ಅರ್ಥವೇ ತಿಳಿಯದ ಈ ಕಂದಮ್ಮನಿಗೆ ಮದುವೆ ಮಾಡಲಾಗಿದೆ. ಇನ್ನೂ ವಿಪರ್ಯಾಸವೆಂದರೆ ಈ ವ್ಯಕ್ತಿಗೆ ಇದು ಮೂರನೇ  ಮದುವೆ. ಈ ವ್ಯಕ್ತಿಯ ಇಬ್ಬರು ಪತ್ನಿಯರು ಈತನ ಜೊತೆಯಲ್ಲಿಯೇ ಈತನ ಮನೆಯಲ್ಲಿಯೇ ಇದ್ದಾರೆ. 

ಇದನ್ನೂ ಓದಿ : ಮಗನ ಪ್ರೇಯಸಿ ಜೊತೆ ತಾನೇ ಮದುವೆ ಮಾಡಿಕೊಂಡ ತಂದೆ! ಸೊಸೆಯಾಗಬೇಕಾಗಿದ್ದವಳು ಪತ್ನಿಯಾಗಿರುವುದು ಈ ಕಾರಣಕ್ಕೆ !

ಅಫಘಾನ್ ಮಾಧ್ಯಮ ಸಂಸ್ಥೆ Amu.tv ಪ್ರಕಾರ, ಇಡೀ ಪ್ರಕರಣವು ಮಾರ್ಜಾ ಜಿಲ್ಲೆಯಿಂದ ಬಂದಿದೆ. ವರದಿಯ ಪ್ರಕಾರ ಈ ವ್ಯಕ್ತಿ ಈ ಮಗುವನ್ನು ಮದುವೆಯಾಗುವುದಕ್ಕೆ ಹಣ ನೀಡಿದ್ದಾನೆ ಎನ್ನಲಾಗಿದೆ. ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡಿದೆ. ಇದಾದ ಬಳಿಕ ಮಧ್ಯ ಪ್ರವೇಶಿಸಿದ ತಾಲಿಬಾನ್ ಆಡಳಿತ ಮಧ್ಯಪ್ರವೇಶಿಸಿದ್ದು, ಆ ವ್ಯಕ್ತಿ ಮಗುವನ್ನು ಕರೆದುಕೊಂಡು ಹೋಗುವುದನ್ನು ತಡೆದಿದೆ. ಆದರೂ ಮಗುವಿಗೆ 9 ವರ್ಷ ವಯಸ್ಸಾದಾಗ ಆ ವ್ಯಕ್ತಿಯ ಜೊತೆಗೆ ಕರೆದುಕೊಂಡು ಹೋಗಬಹುದು ಎನ್ನಲಾಗಿದೆ. 

ಇದರ ಹೊರತಾಗಿ, ಹುಡುಗಿಯ ತಂದೆ ಮತ್ತು ವರನನ್ನು ಬಂಧಿಸಲಾಗಿದೆ. ಆದರೆ ಇದುವರೆಗೂ ವ್ಯಕ್ತಿಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.  ವರದಿಯ ಪ್ರಕಾರ, ಹುಡುಗಿ ಪ್ರಸ್ತುತ ತನ್ನ ಪೋಷಕರೊಂದಿಗೆ ಇದ್ದಾಳೆ. ಈ ವಿವಾಹ ವ್ಯವಸ್ಥೆಯು ವಾಲ್ವಾರ್ ಎಂಬ ಸಾಂಪ್ರದಾಯಿಕ ಪದ್ಧತಿಯನ್ನು ಒಳಗೊಂಡಿತ್ತು, ಇದರಲ್ಲಿ ಹುಡುಗಿಯ ದೈಹಿಕ ನೋಟ, ಶಿಕ್ಷಣ ಮತ್ತು ಅಂದಾಜು ಮೌಲ್ಯವನ್ನು ಆಧರಿಸಿ ವಧುವಿನ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.

ಇದನ್ನೂ ಓದಿ : ದೇಶದಲ್ಲಿ ಹೊಸ ಕಾನೂನು.. ಈ ವಯಸ್ಸಿನ ಗಂಡಾಗಲಿ ಹೆಣ್ಣಾಗಲಿ ಮದುವೆಗೆ ಮೊದಲು ದೈಹಿಕ ಸಂಬಂಧ ಬೆಳೆಸಿದ್ರೆ ಕಠಿಣ ಶಿಕ್ಷೆ..!

ಮಾಧ್ಯಮ ವರದಿಗಳ ಪ್ರಕಾರ, 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ, ದೇಶದಲ್ಲಿ ಬಾಲ್ಯವಿವಾಹ ಪ್ರಕರಣಗಳು ವೇಗವಾಗಿ ಹೆಚ್ಚಾಗಿವೆ. ಯುಎನ್ ಮಹಿಳೆಯರ ವರದಿಯ ಪ್ರಕಾರ, ಬಾಲ್ಯವಿವಾಹವು ಶೇಕಡಾ 25 ರಷ್ಟು ಹೆಚ್ಚಾಗಿದೆ. ಇದರ ಹೊರತಾಗಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಜನನದ ಪ್ರಮಾಣವು 45% ರಷ್ಟು ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More