ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗುವುದು!
Ranjitha R K
Jul 08, 2025
Ranjitha R K
ಕೆಟ್ಟ ಕೊಲೆಸ್ಟ್ರಾಲ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಹೃದಯ ಸಂಬಂಧಿತ ರೋಗಗಳ ಅಪಾಯ ಹೆಚ್ಚಾಗುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.
ಕೆಟ್ಟ ಕೊಲೆಸ್ಟ್ರಾಲ್ ಜಂಕ್ ಫುಡ್‌ನ ಅತಿಯಾದ ಸೇವನೆ ಮತ್ತು ವ್ಯಾಯಾಮ ಮಾಡದಿರುವುದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವಾಗುತ್ತದೆ.
ಗಿಡಮೂಲಿಕೆಗಳು ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ತಯಾರಿಸಿದ ಈ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿ ಅಡಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
ಕೊಲೆಸ್ಟ್ರಾಲ್ ಅನಾನುಕೂಲ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ದೇಹದ ಎಲ್ಲಾ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು.ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಿಗಳು ಕೂಡಾ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ಹರಿಸಿದರೆ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಬಗೆಹರಿಸಬಹುದು.
ಹೆಚ್ಚು ಹುರಿದ ಆಹಾರವನ್ನು ಸೇವಿಸಬೇಡಿ : ಸಂಸ್ಕರಿಸಿದ ಎಣ್ಣೆ, ಪಾಮ್ ಎಣ್ಣೆ ಮತ್ತು ಇತರ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಆಹಾರವನ್ನು ಸೇವಿಸದಿದ್ದರೆ ಒಳ್ಳೆಯದು.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸೋಂಪು-ಜೀರಿಗೆ ನೀರು : ಮೆಂತ್ಯೆ, ಜೀರಿಗೆ, ಕೊತ್ತಂಬರಿ ಬೀಜಗಳು ಮತ್ತು ಇತರ ಅನೇಕ ಆಯುರ್ವೇದ ಗಿಡಮೂಲಿಕೆಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಬೆರೆಸಿದ ನೀರನ್ನು ಸೇವಿಸಬೇಕು.
ಪಾನೀಯ ತಯಾರಿಸುವುದು ಹೇಗೆ ? : ಮೆಂತ್ಯೆ ಬೀಜಗಳು, ಹಸಿ ಸೋಂಪು ಬೀಜಗಳು, ಜೀರಿಗೆ ಬೀಜಗಳು ಮತ್ತು ಒಣಗಿದ ಕೊತ್ತಂಬರಿ ಬೀಜಗಳನ್ನು ತಲಾ 2 ಟೀ ಚಮಚಗಳಷ್ಟು ತೆಗೆದುಕೊಂಡು ಒಂದು ಪಾತ್ರೆ ಅಥವಾ ಬಾಣಲೆಯಲ್ಲಿ ಹಾಕಿಕೊಳ್ಳಿ.
ನಂತರ, ಅದಕ್ಕೆ ಒಂದು ತುಂಡು ದಾಲ್ಚಿನ್ನಿ ಸೇರಿಸಿ ಎಲ್ಲವನ್ನೂ 5-10 ನಿಮಿಷಗಳ ಕಾಲ ಹುರಿಯಿರಿ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಟೀ ಚಮಚ ಈ ಪುಡಿಯನ್ನು ಬೆರೆಸಿ ಕುಡಿಯಿರಿ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.