ರಾತ್ರಿ ಊಟದ ನಂತರ ಒಂದು ತುಂಡು ಬೆಲ್ಲ ತಿನ್ನುವುದರ ಪ್ರಯೋಜನಗಳಿವು

Chetana Devarmani
Jul 08, 2025

Chetana Devarmani

ಬೆಲ್ಲ
ಸಕ್ಕರೆಗಿಂತ ಬೆಲ್ಲ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಲಾಭವಿದೆ. ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಬೆಲ್ಲವನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.

ಬೆಲ್ಲ
ರಾತ್ರಿ ಊಟದ ನಂತರ ನಿತ್ಯವೂ ಬೆಲ್ಲ ತಿಂದರೆ ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಬೆಲ್ಲ
ಪ್ರತಿನಿತ್ಯ ಬೆಲ್ಲವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

ಬೆಲ್ಲ
ಊಟದ ನಂತರ ಬೆಲ್ಲ ತಿನ್ನುವುದರಿಂದ ಗ್ಯಾಸ್, ಅಜೀರ್ಣ, ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಬೆಲ್ಲ
ರಾತ್ರಿ ಬೆಲ್ಲ ತಿಂದರೆ ನೆಗಡಿ, ಕೆಮ್ಮು, ಕಫದಂತಹ ಕಾಯಿಲೆಗಳೂ ಕಡಿಮೆಯಾಗುತ್ತವೆ. ಹಾಲಿಗೆ ಬೆಲ್ಲ ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತವೆ.

ಬೆಲ್ಲ
ಬೆಲ್ಲವು ಚರ್ಮದ ಸೌಂದರ್ಯಕ್ಕೂ ತುಂಬಾ ಒಳ್ಳೆಯದು. ಪ್ರತಿದಿನ ಸ್ವಲ್ಪ ಬೆಲ್ಲವನ್ನು ತಿನ್ನುವುದರಿಂದ ಮೊಡವೆಗಳು ದೂರವಾಗುತ್ತವೆ.

ಬೆಲ್ಲ
ಬೆಲ್ಲದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೆಲ್ಲ
ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬೆಲ್ಲ ಔಷಧಿಯಾಗಿ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಬೆಲ್ಲ ತಿನ್ನಲು ಪ್ರಾರಂಭಿಸಿ ಮಲಬದ್ಧತೆಯನ್ನು ತಡೆಯುತ್ತದೆ.

ಬೆಲ್ಲ
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

Read Next Story