ಬಿಳಿ ಕೂದಲನ್ನು ಹತ್ತೇ ನಿಮಿಷದಲ್ಲಿ ಕಪ್ಪಾಗಿಸುವ ನ್ಯಾಚ್ಯುರಲ್ ಡೈ!

Ranjitha R K
Jul 10, 2025

Ranjitha R K

ಕೂದಲಿಗೆ ಮನೆ ಮದ್ದು
ಕೆಲವೊಮ್ಮೆ ಕೂದಲು ಸೊಂಪಾಗಿ ಬೆಳೆಯಲಿ ಎನ್ನುವ ಕಾರಣಕ್ಕೆ ಬಳಸುವ ದುಬಾರಿ ಶಾಂಪೂ, ಉತ್ಪನ್ನಗಳೇ ಕೂದಲು ಉದುರುವುದಕ್ಕೆ ಮುಖ್ಯವಾಗಿ ಕಾರಣವಾಗಿ ಬಿಡುತ್ತದೆ.

ಕೂದಲ ಆರೈಕೆ
ಕೂದಲು ಉದುರುವುದನ್ನು ತಡೆದು ಬೋಳು ತಲೆಯಲ್ಲಿಯೂ ಕೂದಲು ಮೂಡಿಸುವ ಪರಮೌಷಧ ಇದು. ಮಾತ್ರವಲ್ಲ ಬಿಳಿ ಕೂದಲನ್ನು ನ್ಯಾಚ್ಯುರಲ್ ಆಗಿ ಕಪ್ಪಾಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ನ್ಯಾಚ್ಯುರಲ್ ಹೇರ ಕೇರ್
ನೈಸರ್ಗಿಕವಾಗಿ ಕೂದಲು ಬೆಳೆಯುವಂತೆ ಮಾಡುವ, ಬಿಳಿ ಕೂದಲು ಕಪ್ಪಾಗುವಂತೆ ಮಾಡುವ ಮದ್ದೊಂದಿಗೆ. ಹಿತ್ತಲಲ್ಲೇ ಸಿಗುವ ಈ ಎಲೆ ಕೂದಲು ಉದುರುವುದನ್ನೂ ತಡೆಯುತ್ತದೆ. ಬಿಳಿ ಕೂದಲನ್ನೂ ಕಪ್ಪಾಗಿಸುತ್ತದೆ.

ಅಲೋವೆರಾ ಜೆಲ್
ಅಲೋವೆರಾ ಜೆಲ್ ಅನ್ನು ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಹಚ್ಚಿ. ಒಂದು ಗಂಟೆಯ ನಂತರ, ಸೌಮ್ಯವಾದ ಶಾಂಪೂ ಬಳಸಿ ತಲೆಯನ್ನು ತೊಳೆಯಿರಿ.ಇದು ಕೂದಲು ಉದುರುವುದನ್ನು ತಡೆಯುತ್ತದೆ.

ಅಲೋವೆರಾ ಮತ್ತು ಆಮ್ಲಾ ಪುಡಿ :
ಅಲೋವೆರಾದೊಂದಿಗೆ ಆಮ್ಲಾ ಪುಡಿಯನ್ನು ಬೆರೆಸಿ ಹಚ್ಚಬಹುದು. 1-2 ಟೀ ಚಮಚ ಆಮ್ಲಾ ಪುಡಿಯನ್ನು ಆಲೋವಿರಾ ಜೆಲ್ ನೊಂದಿಗೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಹಚ್ಚಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.

ಅಲೋವೆರಾ ಮತ್ತು ತೆಂಗಿನ ಎಣ್ಣೆ :
ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. 1-2 ಗಂಟೆಗಳ ನಂತರ, ಸೌಮ್ಯವಾದ ಶಾಂಪೂ ಬಳಸಿ ತಲೆಯನ್ನು ತೊಳೆಯಿರಿ.

ಅಲೋವೆರಾ ಮತ್ತು ಮೆಂತ್ಯೆ ಬೀಜಗಳು :
ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ನೆನೆಸಿ ನುಣ್ಣಗೆ ಪುಡಿಮಾಡಿ ಅದಕ್ಕೆ ಅಲೋವೆರಾ ಜೆಲ್ ಸೇರಿಸಿ.ಈಗ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಇದು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.

ಅಲೋವೆರಾ ಮತ್ತು ಈರುಳ್ಳಿ ರಸ :
ಅಲೋವೆರಾ ಜೆಲ್ ತೆಗೆದುಕೊಂಡು ಅದರಲ್ಲಿ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಅಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.


ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

Read Next Story