Home> Lifestyle
Advertisement

ಡಯೆಟೂ ಇಲ್ಲ, ಜಿಮ್ ಗೂ ಹೋಗಿಲ್ಲ ಆದರೂ 62 ಕೆಜಿ ತೂಕ ಕಳೆದುಕೊಂಡ ಮಹಿಳೆ !ಊಟದ ವಿಧಾನ ಬದಲಿಸಿದ್ದು ಅಷ್ಟೇ !

ಈ ಮಹಿಳೆ ಯಾವ ಡಯೆಟ್ ಮಾಡಿಲ್ಲ, ಜಿಮ್ ಗೂ ಹೋಗಿಲ್ಲ. ಕೇವಲ ಊಟ ಮಾಡಿವ ವಿಧಾನವನ್ನು ಬದಲಿಸಿಯೇ 62 ಕೆಜಿ ತೂಕ ಕಳೆದುಕೊಂಡಿದ್ದಾರೆ. 
 

ಡಯೆಟೂ ಇಲ್ಲ, ಜಿಮ್ ಗೂ ಹೋಗಿಲ್ಲ ಆದರೂ 62 ಕೆಜಿ ತೂಕ ಕಳೆದುಕೊಂಡ ಮಹಿಳೆ !ಊಟದ ವಿಧಾನ ಬದಲಿಸಿದ್ದು ಅಷ್ಟೇ !

ತೂಕ ಇಳಿಸಿಕೊಳ್ಳುವುದು ಎಂದರೆ ಕೇವಲ ಕ್ಯಾಲೊರಿಗಳನ್ನು ಎಣಿಸುವುದು , ತೀವ್ರವಾದ ವ್ಯಾಯಾಮಗಳು ಅಥವಾ ಕಟ್ಟುನಿಟ್ಟಿನ ಆಹಾರಕ್ರಮಗಳನ್ನು ಅನುಸರಿಸುವುದು ಅಲ್ಲ. ತೂಕ ಇಳಿಸಿಕೊಳ್ಳುವುದು ಎಂದರೆ ಅಭ್ಯಾಸಗಳನ್ನು ನಿರಂತರವಾಗಿ ಬದಲಾಯಿಸುವುದು ಮತ್ತು ಬದುಕುವ ವಿಧಾನವನ್ನು ಬದಲಾಯಿಸುವುದು. ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ನಟಾಲಿಯಾ ಅರಾಂಡಾ  62 ಕಿಲೋಗ್ರಾಂಗಳಷ್ಟು ತೂಕವನ್ನು ಇಳಿಸಿಕೊಂಡಿದ್ದಾರೆ. ಇವರು ತಮ್ಮ ಯಶಸ್ವಿ ತೂಕ ನಷ್ಟಕ್ಕೆ ಕೆಲವು ಗಮನಾರ್ಹ ಜೀವನಶೈಲಿಯ ಬದಲಾವಣೆಗಳೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಇನ್ನು ತನು ಇಷ್ಟು ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿರುವ ಒಂದು ಸರಳ ಆದರೆ ಪರಿಣಾಮಕಾರಿ ನಿಯಮದ ಬಗ್ಗೆಯೂ ಹೇಳಿದ್ದಾರೆ. 

ಎಲ್ಲಾ ಬದಲಾವಣೆಗೂ ಕಾರಣ ಕಿಚನ್ ಟೇಬಲ್ ನಿಯಮ : 
ತನ್ನ ಮೇಕಪ್‌ಗೆ ಮುನ್ನ, ಟಿವಿ ನೋಡುವಾಗ, ಫೋನ್‌ನಲ್ಲಿ ಮಾತನಾಡುವಾಗ ಅಷ್ಟು ಮಾತ್ರವಲ್ಲ ಬೇಸರವಾದಲೂ ಏನನ್ನಾದರೂ ತಿನ್ನುವ ಹವ್ಯಾಸ ಈ ಮಹಿಳೆಗೆ ಇತ್ತು.  "ನಾನು ಎಷ್ಟು ತಿನ್ನುತ್ತಿದ್ದೇನೆ, ಏನು ತಿನ್ನುತ್ತಿದ್ದೇನೆ ಎನ್ನುವುದನ್ನು ಗಮನಿಸದೆಯೇ ತಿಂಡಿ ತಿನ್ನುತ್ತಿದ್ದರು. ಆದರೆ  ಡೈನಿಂಗ್ ಟೇಬಲ್ ಹೊರತಾಗಿ ಬೇರೆಲ್ಲಿಯೂ ಆಹಾರ ಸೇವಿಸಬಾರದು ಎನ್ನುವ ಕಠಿಣ ನಿಯಮವನ್ನು ತನಗೆ ತಾನೇ ಹಾಕಿಕೊಂಡರು. 

ಇದನ್ನೂ ಓದಿ : ಹೇರ್ ಡೈ ಬೇಡ... ಹಿತ್ತಲಲ್ಲಿ ಸಿಗುವ ಈ ಎಲೆಗಳಿಂದ ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿ ಕೂದಲು

 ಅದ್ಭುತ ಮಾಡಿದ್ದು ಇದೊಂದು ಸಣ್ಣ ಅಭ್ಯಾಸ : 
ಡೈನಿಂಗ್ ಟೇಬಲ್ ನಲ್ಲಿ ಮಾತ್ರ ಆಹಾರ ಸೇವನೆ ಎನ್ನುವ ನಿಯಮವು ಕೆಲವು ಅದ್ಭುತಗಳನ್ನೇ ಈ ಮಹಿಳೆಯ ಜೀವನದಲ್ಲಿ ಮಾಡಿತು ಅದೇನೆಂದರೆ :
► ಇದು ಬೇಡದ ಸಂದರ್ಭದಲ್ಲಿ ಬೇಡದ ತಿನಿಸು ತಿನ್ನುವುದಕ್ಕೆ ಬ್ರೇಕ್ ಹಾಕಿತು. 
► ಏನೇ ತಿಂದರೂ ಎಚ್ಚರಿಕೆಯಿಂದ ತಿನ್ನಏಕು ಎನ್ನುವ ಜಾಗೃತಿ ಪ್ರಜ್ಞೆ ಮೂಡಿತು.  
► ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡಿತು
► ಇದು ಸ್ಥಿರವಾದ ಊಟದ ಸಮಯದ ದಿನಚರಿಯನ್ನು ಸೃಷ್ಟಿಸಿತು.

ಊಟ ಮಾಡುವಾಗ ಟಿವಿ, ಮೊಬೈಲ್ ಎಲ್ಲವನ್ನೂ ಬದಿಗಿಟ್ಟು ಮೇಜಿನ ಬಳಿ ಕುಳಿತಾಗ, ಊಟದ ಕಡೆಗೆ ಗಮನ ಹೆಚ್ಚು ಇರುತ್ತದೆ. ಸುತ್ತಮುತ್ತಲಿನ ವಿಷಯಗಳಿಂದ ವಿಚಲಿತರಾಗುವುದಿಲ್ಲ. ನಿಜವಾಗಿಯೂ ನಿಮ್ಮ ಆಹಾರದ ರುಚಿ, ಪ್ರಮಾಣ ಎಲ್ಲದರ ಬಗ್ಗೆ ಅರಿವಿರುತ್ತದೆ. ಅದನ್ನು ಆನಂದಿಸುತ್ತೀರಿ ಎನ್ನುವ ತಮ್ಮ ಅನುಭವವನ್ನು ನಟಾಲಿಯಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಪ್ರತಿನಿತ್ಯ ಬೆಳಗ್ಗೆ ಮತ್ತು ರಾತ್ರಿ... ಈ ಬೀಜ ನೆನೆಸಿಟ್ಟ ಅರ್ಧ ಗ್ಲಾಸ್‌ ನೀರು ಕುಡಿದೇ 118 ಕೆಜಿಯಿಂದ 38 ಕೆಜಿ ತೂಕ ಇಳಿಸಿಕೊಂಡ ಯುವಕ!

ಅವಳ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದ ಇತರ ಅಭ್ಯಾಸಗಳು : 
ನಟಾಲಿಯಾ ಡೈನಿಂಗ್ ಟೇಬಲ್ ನಿಯಮಕ್ಕೆ ಮಾತ್ರ ಸೀಮಿತವಾಗಲಿಲ್ಲ. ಮನಸ್ಥಿತಿಯ ಬದಲಾವಣೆಯನ್ನು ಅವರು ಇತರ ಎರಡು ಪ್ರಬಲ ಅಭ್ಯಾಸಗಳೊಂದಿಗೆ ಜೋಡಿಸಿದರು:

1. ಮದ್ಯಪಾನವನ್ನು ಕಡಿಮೆ ಮಾಡುವುದು : 
ಮದ್ಯವನ್ನು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಲು ಪ್ರಾರಂಭಿಸಿದಾಗ,  ಒಂದು ಪ್ರಮುಖ ಬದಲಾವಣೆಯನ್ನು ಗಮನಿಸಿದಳು.ಮದ್ಯಪಾನವು ನಿಜವಾಗಿಯೂ ತೂಕ ನಷ್ಟವನ್ನು ನಿಧಾನಗೊಳಿಸುತ್ತದೆ. ರಾತ್ರಿ ಕೇವಲ ಒಂದು ಗ್ಲಾಸ್ ಮದ್ಯಪಾನ ಕೂಡಾ ತೂಕ ಹೆಚ್ಚಿಸುತ್ತದೆ.

2.  ಫಿಟ್‌ನೆಸ್ ಗುರಿಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು : 
ಆಶ್ಚರ್ಯಕರವಾಗಿ, ನಟಾಲಿಯಾ ತನ್ನ ತೂಕ ಇಳಿಸುವ ಪ್ರಯಾಣದ ಬಗ್ಗೆ ಯಾರಿಗೂ ಏನನ್ನೂ ಹೇಳಲಿಲ್ಲ. ಯಾಕೆಂದರೆ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದು ಹೇಳಿದಾಗ, ಜನರು ಆಹಾರ ಸೇವಿಸುವಂತೆ ಒತ್ತಾಯಿಸಲು ಪ್ರಾರಂಭಿಸುತ್ತಾರೆ. ಆದಕ್ಕಾಗಿ ಸದ್ದಿಲ್ಲದೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಪ್ರಾರಂಭಿಸಿದರು. ಯಾರಾದರೂ ಕೇಳಿದರೆ ನನಗೆ ಇಂದು ಸಲಾಡ್ ತಿನ್ನಬೇಕೆಂದು ಅನಿಸಿದೆ ಅಷ್ಟೇ ಎಂದು ಸುಮ್ಮನಾಗುತ್ತಿದ್ದರು. 

ಇದನ್ನೂ ಓದಿ : ವಾರದ ಈ 2 ದಿನಗಳಲ್ಲಿ ಬಟ್ಟೆ ಒಗೆದರೆ ಆ ಮನೆ ಸಾಲದಲ್ಲಿಯೇ ಮುಳುಗಿ ಹೋಗುತ್ತೆ! ದುಡ್ಡಿನ ಮೂಟೆಯೇ ಇದ್ದರೂ ಒಂದು ರುಪಾಯಿಯೂ ಉಳಿಯಲ್ಲ

ಶಾಶ್ವತ ಫಲಿತಾಂಶಗಳಿಗೆ ಕೀಲಿಕೈ: 
ಬೃಹತ್ ಫಲಿತಾಂಶಗಳು ಸಣ್ಣ, ಸುಸ್ಥಿರ ಅಭ್ಯಾಸಗಳಿಂದ ಬರುತ್ತವೆ ಎನ್ನುವುದನ್ನು  ನಟಾಲಿಯಾಳ ತೋರಿಸಿ ಕೊಟ್ಟಿದ್ದಾರೆ.ತಮ್ಮ ಜೀವನಶೈಲಿಯಲ್ಲಿ ಮಾಡಿಕೊಂಡ ಸಣ್ಣ ಬದಲಾವಣೆಯಿಂದ ಇವರು 62 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಯಿತು.

 

( ಸೂಚನೆ : ಈ ಲೇಖನವನ್ನು  ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದು ಮತ್ತು ಅರ್ಹ ವೈದ್ಯಕೀಯ ವೃತ್ತಿಪರರು ನೀಡುವ ಸಲಹೆಗೆ ಪರ್ಯಾಯವಲ್ಲ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More