Weight Loss: ಬದಲಾದ ಜೀವನಶೈಲಿಯಲ್ಲಿ ಅತಿಯಾದ ತೂಕ ಹೆಚ್ಚಳ ಬಹುತೇಕ ಮಂದಿಯ ಸಮಸ್ಯೆ ಆಗಿದೆ. ಆದರೆ, ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ತೂಕ ನಿಯಂತ್ರಿಸಬಹುದು.
ತೂಕ ಇಳಿಕೆ ಮಾಡಿ ಬಲೂನ್ ರೀತಿ ಊದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸಲು ಭಾರತೀಯ ಪಾನೀಯಗಳು ದಿವ್ಯೌಷಧವಿದ್ದಂತೆ. ಇವುಗಳ ಬಳಕೆಯಿಂದ ಆರೋಗ್ಯಕರವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು.
ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಮೆಂತ್ಯ ನೆನೆಹಾಕಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಚಯಾಪಚಯ ಹೆಚ್ಚಾಗಿ, ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಸುಡಲು ಇದು ಸಹಕಾರಿ ಆಗಿದೆ.
ಬೆಳಿಗ್ಗೆ ವ್ಯಾಯಾಮ ಮಾಡಿದ ಬಳಿಕ ವಿಟಮಿನ್ ಸಿನಲ್ಲಿ ಸಮೃದ್ಧವಾಯಿರುವ ನೆಲ್ಲಿಕಾಯಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಮಾಡಬಹುದು.
ಬೆಳಗಿನ ಉಪಾಹಾರ ಸೇವಿಸಿ ಎರಡು ಗಂಟೆಗಳ ಬಳಿಕ ಕೊತ್ತಂಬರಿ ಬೀಜದಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಬಲೂನ್ ನಂತೆ ಊದಿರುವ ಹೊಟ್ಟೆ ಬಲು ಬೇಗ ಕರಗುತ್ತದೆ.
ಸಂಜೆ ವೇಳೆ ಹಾಲಿನಿಂದ ತಯಾರಿಸಿದ ಟೀ ಕುಡಿಯುವ ಬದಲಿಗೆ ಗ್ರೀನ್ ಟೀ ಕುಡಿಯುವುದು ಅದರಲ್ಲೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತುಳಸಿ ಗ್ರೀನ್ ಟೀ ಸೇವನೆಯಿಂದ ಡೊಳ್ಳು ಹೊಟ್ಟೆ ಕರಗಿ ಚಪ್ಪಟೆಯಾಗುತ್ತದೆ.
ನಿಮಗೆ ಟೀ ಇಷ್ಟವಿಲ್ಲ ಎಂದಾದರೆ ಟೀ ಬದಲಿಗೆ ಬ್ಲಾಕ್ ಕಾಫಿ ತಯಾರಿಸಿ ಕುಡಿಯುವುದರಿಂದಲೂ ತೂಕ ನಿಯಂತ್ರಿಸಬಹುದು.
ಪ್ರತಿದಿನ ರಾತ್ರಿ ಮಲಗುವ ಮೊದಲು ಬೆಚ್ಚಗಿನ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದನ್ನು ರೂಢಿಸಿಕೊಳ್ಳಿ. ಇದು ಉತ್ತಮ ನಿದ್ರೆಗೆ ಸಹಾಯಕವಾಗುವುದರ ಜೊತೆಗೆ ದೇಹದ ಕೊಬ್ಬನ್ನು ಸುಡುವಲ್ಲಿಯೂ ಪರಿಣಾಮಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.