Cycling V/s Running : ಸೈಕ್ಲಿಂಗ್ ಅಥವಾ ಓಟ... ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಎರಡರಲ್ಲಿ ಯಾವುವು ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ ಅಂತ ಹಲವು ಜನರು ಪ್ರಶ್ನೆ ಕೇಳುತ್ತಾರೆ... ಓಟ ಮತ್ತು ಸೈಕ್ಲಿಂಗ್.. ಈ ವಿಧಾನಗಳಲ್ಲಿ ವೇಗವಾಗಿ ಕೊಬ್ಬನ್ನು ಸುಡುವುದು ಯಾವುದು.. ಬನ್ನಿ ನೋಡೋಣ.
ಹೊಟ್ಟೆಯ ಸುತ್ತ ಸಂಗ್ರಹವಾಗುವ ಕೊಬ್ಬನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಜಿಮ್‌ಗೆ ಹೋಗುತ್ತಾರೆ. ಹೊಟ್ಟೆಯ ಕೊಬ್ಬು ನಿಮ್ಮ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಅಂಶವಾಗಿದೆ.
ಆದ್ದರಿಂದ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಅವಶ್ಯಕ. ಹೊಟ್ಟೆಯ ಕೊಬ್ಬನ್ನು ಸುಡಲು ವ್ಯಾಯಾಮವು ಅತ್ಯುತ್ತಮ ಮಾರ್ಗವಾಗಿದೆ. ಆದರೆ ಯಾವ ವ್ಯಾಯಾಮ ಮಾಡಬೇಕು ಮತ್ತು ಅದನ್ನು ಹೇಗೆ ಮಾಡಬೇಕೆಂದು ಅನೇಕ ಜನರಿಗೆ ಇನ್ನೂ ತಿಳಿದಿಲ್ಲ.
ತೂಕ ಇಳಿಸಿಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಓಟ ಮತ್ತು ಸೈಕ್ಲಿಂಗ್ ಎರಡು ಜನಪ್ರಿಯ ಮಾರ್ಗಗಳಾಗಿವೆ. ಆದರೆ ಯಾವುದು ಉತ್ತಮ..? ಎಂಬುದು ಅನೇಕ ಜನರು ಕೇಳುವ ಪ್ರಶ್ನೆಯಾಗಿದೆ. ಈ ಎರಡೂ ಕಾರ್ಡಿಯೋ ವ್ಯಾಯಾಮಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎರಡೂ ಕ್ಯಾಲೊರಿಗಳನ್ನು ಸುಡುತ್ತವೆ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ. ನೀವು ಸೈಕ್ಲಿಂಗ್ ಮಾಡುವಾಗ, ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ರಕ್ತ ಪರಿಚಲನೆ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ, ಅಲ್ಲದೆ, ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಸೈಕ್ಲಿಂಗ್ ಮೂಲಕ ನೀವು ಗಂಟೆಗೆ ಕನಿಷ್ಠ 300 ಕ್ಯಾಲೊರಿಗಳನ್ನು ಸುಡಬಹುದು. ಓಟವು ಸ್ವಲ್ಪ ಹೆಚ್ಚು ತೀವ್ರವಾದ ಕಾರ್ಡಿಯೋ ವ್ಯಾಯಾಮವಾಗಿದೆ. ಇದು ಗಂಟೆಗೆ ಸುಮಾರು 400 ಕ್ಯಾಲೊರಿಗಳನ್ನು ಸುಡುತ್ತದೆ. ಓಟವು ದೇಹದ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೃದಯ ಬಡಿತವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ನಿಯಮಿತವಾಗಿ ಓಡುವುದರಿಂದ, ಒಟ್ಟಾರೆ ಹೃದಯ ಆರೋಗ್ಯವು ತ್ವರಿತವಾಗಿ ಸುಧಾರಿಸುತ್ತದೆ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸೈಕ್ಲಿಂಗ್ ಅಥವಾ ಓಟ ಎರಡೂ ಪರಿಣಾಮಕಾರಿ ಪರಿಹಾರಗಳಾಗಿವೆ. ಮೆಡಿಸಿನ್ ಅಂಡ್ ಸೈನ್ಸ್ ಇನ್ ಸ್ಪೋರ್ಟ್ಸ್ ಅಂಡ್ ಎಕ್ಸರ್ಸೈಸ್‌ನಲ್ಲಿ ಪ್ರಕಟವಾದ ಅಧ್ಯಯನವು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ವ್ಯಕ್ತಿಗಳು ಸೈಕ್ಲಿಂಗ್ ಮತ್ತು ಓಟದ ಮೂಲಕ ಹೊಟ್ಟೆಯ ಕೊಬ್ಬನ್ನು ಒಳಗೊಂಡಂತೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಕಂಡುಹಿಡಿದಿದೆ.