ಕೇವಲ ಮೊಸರು ಮಾತ್ರ ಸೇವಿಸಿದರೆ ಬೊಜ್ಜು ಕರಗುವುದಿಲ್ಲ. ಬದಲಿಗೆ ಈ ಪದಾರ್ಥವನ್ನು ಬೆರೆಸಿ ಸೇವಿಸಿದಾಗ ಬೇಗನೆ ಪರಿಣಾಮ ತೋರಿಸುತ್ತದೆ.
ಮೊಸರನ್ನು ಸರಿಯಾದ ವಿಧಾನದಲ್ಲಿ ಸೇವಿಸುವ ಮೂಲಕ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು. ಕೇವಲ ಮೊಸರು ಮಾತ್ರ ಸೇವಿಸಿದರೆ ಬೊಜ್ಜು ಕರಗುವುದಿಲ್ಲ. ಬದಲಿಗೆ ಈ ಪದಾರ್ಥವನ್ನು ಬೆರೆಸಿ ಸೇವಿಸಿದಾಗ ಬೇಗನೆ ಪರಿಣಾಮ ತೋರಿಸುತ್ತದೆ.
ಮೊಸರು ಬಜ್ಜಿ ಮಾಡುವಾಗಲೆಲ್ಲಾ ಅದಕ್ಕೆ ಹುರಿದ ಜೀರಿಗೆಯನ್ನು ಸೇರಿಸಲೇಬೇಕು. ಇದು ಮೊಸರಿನ ರುಚಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹುರಿದ ಜೀರಿಗೆಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.
ಹುರಿದ ಓಮ ಕಾಳನ್ನು ಮೊಸರಿನಲ್ಲಿ ಬೆರೆಸಿ ತಿಂದರೆ ಬೊಜ್ಜು ಕರಗಿಸಲು ಅದು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಈ ಮಿಶ್ರಣವನ್ನು ಸೇವಿಸಬಹುದು. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.
ಮೊಸರಿನೊಂದಿಗೆ ಕರಿಮೆಣಸನ್ನು ಬೆರೆಸಿ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.ಇದಕ್ಕೆ ಬ್ಲಾಕ್ ಸಾಲ್ಟ್ ಅನ್ನು ಬೆರೆಸಿದರೆ ತೂಕ ಇಳಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಪುದೀನ ಎಲೆಗಳನ್ನು ಪೇಸ್ಟ್ ಮಾಡಿ ಮೊಸರಿನಲ್ಲಿ ಬೆರೆಸಿ ಸೇವಿಸಿದರೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಹೊಟ್ಟೆ ತಂಪಾಗಿಸಲು ಕೂಡಾ ಇದು ಸಹಾಯಕ.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.